Fixed Deposit: ನೀವು FD ಇಡುತ್ತಿದ್ದೀರಾ? ಈ ಹಣಕಾಸಿನ ವಿಷಯದ ಬಗ್ಗೆ ತಿಳಿದಿಲ್ಲ ಅಂದರೆ, ನಿಮ್ಮ ಹಣ ವ್ಯರ್ಥವಾಗುತ್ತದೆ!

Fixed Deposit: ನೀವು FD ಇಡುತ್ತಿದ್ದೀರಾ? ಈ ಹಣಕಾಸಿನ ವಿಷಯದ ಬಗ್ಗೆ ತಿಳಿದಿಲ್ಲ ಅಂದರೆ, ನಿಮ್ಮ ಹಣ ವ್ಯರ್ಥವಾಗುತ್ತದೆ!

FD: ನಿಮಗೆ ಹಣವನ್ನು ಸುರಕ್ಷಿತವಾಗಿ ಉಳಿಸಬೇಕಾದಾಗ ಬ್ಯಾಂಕಿನ FD ಗಳು ಮೊದಲು ಮನಸ್ಸಿಗೆ ಬರುತ್ತದೆ, ಆದರೆ ಇದಕ್ಕೂ ಕೂಡ ಈಗ ಪೈಪೋಟಿ ನೀಡಲು ಕಾರ್ಪೊರೇಟ್ FD ಸಂಸ್ಥೆಗಳು ಮಾರುಕಟ್ಟೆಗೆ ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಜನರು ವರ್ಷದಿಂದ ವರ್ಷಕ್ಕೆ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ(Fixed Deposit)ಗಳನ್ನು ಇಡುತ್ತಿದ್ದಾರೆ, ಸಣ್ಣ ಹಣಕಾಸು ಬ್ಯಾಂಕುಗಳು (Small Finance Bank) ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಸಹ FD ಸೇವೆಗಳನ್ನು ಆರಂಭಿಸಿದೆ.

ಕಾರ್ಪೊರೇಟ್ FD (Corporate FD) ಸೇವೆಗಳನ್ನು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು, ಸಣ್ಣ ಹಣಕಾಸು ಬ್ಯಾಂಕ್ ಗಳು ಸಹ ನೀಡುತ್ತದೆ, ಈ ಸ್ಥಿರ ಠೇವಣಿ ಯೋಜನೆಯನ್ನು ಕಂಪನಿ ಫಿಕ್ಸ್ಡ್ ಡಿಪಾಸಿಟ್ (Fixed Deposit) ಅಥವಾ ಕಾರ್ಪೊರೇಟ್ FD ಎಂದು ಕರೆಯಲಾಗುತ್ತದೆ.

ಬ್ಯಾಂಕಿನ FD ಗೆ ಹೋಲಿಕೆ ಮಾಡಿದರೆ, ಕಾರ್ಪೊರೇಟ್ ಕಂಪನಿಯ(Corporate Company) ಸ್ಥಿರ ಠೇವಣಿಗಳು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ, ಆದರೆ ಇಲ್ಲಿ ಹಣದ ಭದ್ರತೆಯು ಆತಂಕಕಾರಿಯಾಗರುತ್ತದೆ. ಏಕೆಂದರೆ ಈ ಕಾರ್ಪೊರೇಟ್ FD ಭದ್ರತೆಯು NBFC ಯ ಕ್ರೆಡಿಟ್ ಅರ್ಹತೆಯನ್ನು ಅವಲಂಬಿಸಿರುತ್ತದೆ.

ಸಾಮಾನ್ಯವಾಗಿ ಹೆಚ್ಚಿನ ರೇಟಿಂಗ್ಸ್ ಹೊಂದಿರುವ ಏನ್ ಬಿಎಫ್ ಸಿಗಳ ಸ್ಥಿರ ಠೇವಣಿಗಳನ್ನು ಮಾತ್ರ ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ, ಅದೇ ಸಮಯದಲ್ಲಿ ಬ್ಯಾಂಕಿನ ಸ್ಥಿರ ಠೇವಣಿಯಲ್ಲಿನ ಅಪಾಯವು ಕಡಿಮೆಯಾಗಿದೆ. ಏಕೆಂದರೆ ಬ್ಯಾಂಕಿನ FD ಯಲ್ಲಿ ಭಾರತ ಸರ್ಕಾರದ ಮುಖರಿಷ್ಠ ಮಿತಿ ರೂ. 5 ಲಕ್ಷ ವಿಮೆ.

ಕಾಕಾರ್ಪೊರೇಟ್ ಸ್ಥಿರ ಠೇವಣಿಯ ಹಣವನ್ನು ಅಜಾಗರೂಕತೆಯಿಂದ ಹಿಂತೆಗೆದುಕೊಳ್ಳುವುದು ಭಾರಿ ತಂಡವನ್ನು ನಿಮಗೆ ಆಕರ್ಷಿಸಬಹುದು, ಇದರ ಹೊರತಾಗಿ ಕೆಲವು ಕಂಪನಿಗಳ FD ಗಳು ಆರಂಭಿಕ ಹಿಂಪಡೆಯುವ ಸೌಲಭ್ಯವನ್ನು ಒದಗಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಬ್ಯಾಂಕ್ FD ಗಳು ಉತ್ತಮ ದಿವಾಳಿ ಆಯ್ಕೆಯನ್ನು ನಿಮಗೆ ನೀಡುತ್ತದೆ. ಆದ್ದರಿಂದ ನೀವು ಹಣವನ್ನು ಹಿಂಪಡೆಯುವಾಗ ಕಡಿಮೆ ದಂಡವನ್ನು ಪಾವತಿಸುವ ಮೂಲಕ ಮೊತ್ತವನ್ನು ಹಿಂಪಡೆಯಬಹುದು.

ಕೆಲವು ಬ್ಯಾಂಕುಗಳು ನಿಮಗೆ ಐದರಿಂದ 10 ವರ್ಷಗಳ Lock-in ಅವಧಿಯೊಂದಿಗೆ ಸ್ಥಿರ ಠೇವಣಿ ತೆರಿಗೆ ಪ್ರಯೋಜನಗಳನ್ನು ನೀಡಬಹುದು, ಕಾರ್ಪೊರೇಟ್(Corporate) ಅವಧಿಯ ಠೇವಣಿಗಳ ಮೇಲೆ ನಿಮಗೆ ಯಾವುದೇ ತೆರಿಗೆ (Tax) ವಿನಾಯಿತಿ ಇಲ್ಲ.

ನಿಮ್ಮ FD ರಿಟರ್ನ್ಸ್ ಗಳನ್ನು ಕೇವಲ ಒಂದು ತಂತ್ರದಿಂದ ಮೂರು ಪಟ್ಟು ಹೆಚ್ಚಿಸಬಹುದು, ಹೌದು ಅದು ಹೇಗೆಂದರೆ ರೂ. ಐದು ಲಕ್ಷ ಹೂಡಿಕೆ (Investment) ಮಾಡಿದರೆ 15 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ವಿಧಾನ ಹೇಗೆ ಅಂತೀರಾ ಇಲ್ಲಿದೆ ನೋಡಿ.

ನೀವು ಸ್ಥಿರ ಠೇವಣಿಗಳನ್ನು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿ ಮಾಡಬಹುದು, FD ಯ ಅಧಿಕಾರಾವಧಿಯು 7 ದಿನಗಳಿಂದ 10 ವರ್ಷಗಳವರೆಗೆ ಇರುತ್ತದೆ, ಬಡ್ಡಿ ದರಗಳನ್ನು ಕೂಡ ನೀವು ವಿಭಿನ್ನವಾಗಿ ಪಡೆಯಬಹುದು, ಅಂಚೆ ಕಚೇರಿಯು (Post Office) 1,2,3 ಮತ್ತು 5 ವರ್ಷಗಳ (5Years) ಅಧಿಕಾರಾವಧಿಯನ್ನು ಹೊಂದಿದೆ, ಅಂಚೆ ಕಚೇರಿಯಲ್ಲಿ ಬಡ್ಡಿ ದರವೂ (Intrest Rate) ಕೂಡ ಚೆನ್ನಾಗಿ ಇರುತ್ತದೆ. ಆದ್ದರಿಂದ ಪೋಸ್ಟ್ ಆಫೀಸ್ ನಿಮಗೆ ಸ್ಥಿರ ಠೇವಣಿಗೆ(FD) ಉತ್ತಮವಾದ ಆಯ್ಕೆಯಾಗಿದೆ.

ಪೋಸ್ಟ್ ಆಫೀಸ್ನಲ್ಲಿ(Post Office) ನೀವು ಐದು ವರ್ಷಗಳ ಸ್ಥಿರ ಠೇವಣಿಯನ್ನು ಶುರು ಮಾಡಿದರೆ 7.5% ಬಡ್ಡಿಯನ್ನು ಪಡೆಯಬಹುದು, ಆದರೆ ನೀವು ಮೆಚುರಿಟಿ ಅವಧಿ(Maturity Period) ಬಳಿಕ ಹಣವನ್ನು ಹಿಂಪಡೆಯಬಾರದು ಮತ್ತೆ ಪುನಹ ಹೂಡಿಕೆ ಮಾಡಬೇಕು, ಪ್ರತಿ ಐದು ವರ್ಷಗಳಿಗೊಮ್ಮೆ ಎರಡು ಬಾರಿ, ಅಂದರೆ ಸರಳವಾಗಿ ತಿಳಿಸುವುದಾದರೆ ನೀವು ಒಟ್ಟು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕು.

ಇನ್ನು ಐದು ವರ್ಷಕ್ಕೆ ಈ ಹಣ ನಿಗದಿಯಾಗಲಿದೆ, ಲೆಕ್ಕಾಚಾರದ ಪ್ರಕಾರ 15 ವರ್ಷಗಳಲ್ಲಿ ನಿಮ್ಮ ಹೂಡಿಕೆಯ ಹಣ ಬರಿ ಬಡ್ಡಿಯಿಂದಲೇ ರೂ.10,24,149 ಗಳಾಗುತ್ತದೆ, ನಂತರ ಬಡ್ಡಿ ಮತ್ತು ಅಸಲು ಸೇರಿ ಒಟ್ಟು ರೂ.15,24149 ರೂಪಾಯಿಗಳು ನಿಮಗೆ ಕೊನೆಯಲ್ಲಿ ಸಿಗುತ್ತದೆ. ಅಂದರೆ ಇಲ್ಲಿ ಹುಡುಕಿದಾರರು 15 ವರ್ಷಗಳಲ್ಲಿ ತಮ್ಮ ಹೂಡಿಕೆಯ ಹಣದ (Investment Money) ಮೂರು ಪಟ್ಟು ಹೆಚ್ಚಿನ ಹಣವನ್ನು ಪಡೆಯುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹೂಡಿಕೆ ಮಾಡಬಾಯಿಸುವವರು, ಬೇರೆ ಬೇರೆ ವೆಬ್ಸೈಟ್, ಆಪ್ಸ್ ಗಳು ಮುಖಾಂತರ ಹುಡುಕೆ ಮಾಡುವುದು ಕಡಿಮೆ ಮಾಡಬೇಕು, ಏಕೆಂದರೆ ಹೆಚ್ಚಿನ ಹಣದಾಸಿಗಾಗಿ ನಮ್ಮ ಹಣವನ್ನು ಕೂಡ ಕಳೆದುಕೊಳ್ಳುವ ಸಂದರ್ಭ ನಮಗೆ ಎದುರಾಗುತ್ತದೆ. ಆದ್ದರಿಂದ ನಾವು ಎಲ್ಲೆಂದರಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ, ಅಂಚೆ ಕಚೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವುದು ಉತ್ತಮ, ಇದರಿಂದ ನಮ್ಮ ಹಣವು ಕೂಡ ಸುರಕ್ಷಿತವಾಗಿರುತ್ತದೆ ಮತ್ತು ಹೆಚ್ಚಿನ ಹಣವನ್ನು ಕೂಡ ಗಳಿಸಬಹುದು.

 

 

WhatsApp Group Join Now
Telegram Group Join Now

Leave a Comment

copy
share with your friends.