EPS PENSION: ಪಿಂಚಣಿ ದಾರರಿಗೆ ಸಿಹಿ ಸುದ್ದಿ! ಜ.01 ರಿಂದ ಯಾವುದೇ ಬ್ಯಾಂಕ್ ಶಾಖೆಯಿಂದ ಪಿಂಚಣಿಯನ್ನು ಪಡೆಯಬಹುದು

EPS PENSION: ಪಿಂಚಣಿ ದಾರರಿಗೆ ಸಿಹಿ ಸುದ್ದಿ! ಜ.01 ರಿಂದ ಯಾವುದೇ ಬ್ಯಾಂಕ್ ಶಾಖೆಯಿಂದ ಪಿಂಚಣಿಯನ್ನು ಪಡೆಯಬಹುದು

ದೇಶದಲ್ಲಿ ಹಲವಾರು ಸೇವಾ ಕ್ಷೇತ್ರಗಳಿವೆ, ಅವುಗಳಲ್ಲಿ ತೊಡಗಿಸಿಕೊಂಡು ನಿವೃತ್ತಿ ಹೊಂದಿದ ನೌಕರರಿಗೆ, ಆರ್ಥಿಕ ಸುರಕ್ಷತೆಗಾಗಿ ಪಿಂಚಣಿಯನ್ನು ನೀಡಲಾಗುತ್ತದೆ. ಇದರಿಂದ ನಿವೃತ್ತ ನೌಕರರು ನಿವೃತ್ತಿಯ ನಂತರ ಆನಂದಿಸುತ್ತಿದ್ದಾರೆ. ಪಿಂಚಣಿ(EPS PENSION) ಪಡೆಯುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ಈ ಯೋಜನೆಯು ಸಹಕಾರಿಯಾಗಲಿದೆ, ಈ ವಿಷಯವು ಪಿಂಚಣಿದಾರಿಗೆ ಶುಭ ಶುದ್ದಿಯಾಗಲಿದೆ.

ನೌಕರರಿಗೆ ಪಿಂಚಣಿ(Pension) ಯೋಜನೆಗಾಗಿ, ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಗೆ(CPPS) ಕೇಂದ್ರ ಸರ್ಕಾರವು(Central Government) ಅನುಮೋದ ನೀಡಿದ್ದು, ಪಿಂಚಣಿ ತಮ್ಮ ಪಿಂಚಣಿಯನ್ನು ಯಾವುದೇ ಬ್ಯಾಂಕ್ ಶಾಖೆಯಿಂದ ಪಡೆದುಕೊಳ್ಳುವ ಸೌಲಭ್ಯವನ್ನು ನೀಡಲಾಗಿದೆ. ಇದರಿಂದ ಪಿಂಚಣಿದಾರರು ದೇಶದ ಯಾವುದೇ ಬ್ಯಾಂಕ್ ಶಾಖೆಯಿಂದ ಪಿಂಚಣಿಯನ್ನು ಪಡೆಯಬಹುದು, ಇಂತಹ ಒಂದು ಮಹತ್ವದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರವು ಮುಂದಾಗಿದೆ.

ಈ ವಿಷಯದ ಬಗ್ಗೆ, ಕೆಂದುಡ ಕಾರ್ಮಿಕ ಸಚಿವರಾದ ಮುನ್ಸುಖ್ ಮಾಂಡವಿಯಾ, EPFO ವ್ಯವಸ್ಥೆಯ ಆಧುನಿಕರಣದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹೇಳಿದ್ದಾರೆ. ಸರ್ಕಾರವು ಅನುಮೋದಿಸಿರುವ ಹೊಸ ವ್ಯವಸ್ಥೆಯಲ್ಲಿ ಪಿಂಚಣಿ ದಾರಿಗೆ ಯಾವೆಲ್ಲ ಸೌಲಭ್ಯಗಳು ಇದೆ ಎಂದು ತಿಳಿಯೋಣ ಬನ್ನಿ.

  • ಪಿಂಚಣಿ ದಾರರು ದೇಶದ ಯಾವುದೇ ಬ್ಯಾಂಕ್ ಶಾಖೆ ಯಿಂದ ಪಿಂಚಣಿ ಹಣವನ್ನು ಪಡೆಯಬಹುದು.
  • ಸುಧಾರಿತವಾದ ಬ್ಯಾಂಕಿಂಗ್ ಮತ್ತು ಐಟಿ ತಂತ್ರಜ್ಞಾನದ ಮೂಲಕ ಎಲ್ಲಾ ಪಿಂಚಣಿದಾರರಿಗೂ ಅನುಕೂಲ
  • ಪಿಂಚಣಿ ದಾರರು ಒಂದು ಸ್ಥಳದಿಂದ ಇಂಧನ ಸ್ಥಳಕ್ಕೆ ವರ್ಗಾವಣೆಯಾದರೆ ಅಥವಾ ಬ್ಯಾಂಕ್ ಶಾಖೆಯನ್ನು ವರ್ಗಾಯಿಸಿಕೊಂಡರು ಸಹ PPO ವರ್ಗಾಯಿಸದೆ ಅತ್ಯಂತ ಸುಲಭವಾಗಿ ಪಿಂಚಣಿ ತಡೆಯಬಹುದು.
  • ಹೊಸ ವ್ಯವಸ್ಥೆಯಿಂದ ಬೇರೆ ಊರುಗಳಿಗೆ ಕೇಳುವ ನೌಕರರಿಗೆ ಅನುಕೂಲವಾಗಲಿದೆ.

78 ಲಕ್ಷ ಪಿಂಚಣಿದಾರರಿಗೆ ಅನುಕೂಲ

ಕೇಂದ್ರ ಸರ್ಕಾರವು ಜಾರಿಗೆ ತಂದ CPPS ವ್ಯವಸ್ಥೆಯಿಂದ 78 ಲಕ್ಷ ಪಿಂಚಣಿ ದಾರಿಗೆ ಅನುಕೂಲವಾಗಲಿದೆ, ಇದರಿಂದ ಪಿಂಚಣಿ ದಾರರು ಬ್ಯಾಂಕುಗಳಿಗೆ ಅಲೆಯುವ ಕೆಲಸ ತಪ್ಪಲಿದೆ, ಅಷ್ಟೇ ಅಲ್ಲದೆ ಪಿಂಚಣಿ ದಾರರು ವೆರಿಫಿಕೇಶನ್ಗಾಗಿ(Verification) ಬ್ಯಾಂಕುಗಳಿಗೆ ತೆರಳಬೇಕಾದ ಅವಶ್ಯಕತೆ ಇಲ್ಲ. ಪಿಂಚಣಿಯ ಪ್ರತಿ ಕಂತು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಯಾಗುವುದರಿಂದ, ಪಿಂಚಣಿ ದಾರರು ಬ್ಯಾಂಕ್(Bank) ಮತ್ತು ಕಚೇರಿಗಳಿಗೆ ಅಲೆದಾಡುವ ಕೆಲಸ ತಪ್ಪಲಿದೆ. ಇನ್ನು ಮುಂದೆ ಪಾವತಿಯ ವಿಳಂಬವು ಕಡಿಮೆಯಾಗಲಿದ್ದು, ಪಾವತಿ ವೆಚ್ಚ ಕೂಡ ಕಡಿಮೆಯಾಗಲಿದೆ.

ಜ.01 ಸಿಗಲಿದೆ CPPS ಸೌಲಭ್ಯ!

ತಾವಿರುವ ಸ್ಥಳದಿಂದಲೇ ಪಿಂಚಣಿ ಪಡೆಯುವ ಸೌಲಭ್ಯವನ್ನು ಪಿಂಚಣಿ ದಾರರಿಗೆ ಈ ಯೋಜನೆ ಅಥವಾ ಉಪಕ್ರಮವನ್ನು ಸರ್ಕಾರವು ಅನುಮೋದಿಸಿದ್ದು, 01 ಜನವರಿ 2025 ರಿಂದ ಈ ಸೇವೆಯು ಲಭ್ಯವಿದೆ. ಜನವರಿ 01 ರಿಂದ ಇಂದ್ರ ಸರ್ಕಾರದ EPFO ನ IT ಉನ್ನತೀಕರಣ ಯೋಜನೆಯಾದ, ಕೇಂದ್ರೀಕೃತ IT Enables System ಭಾಗವಾಗಿ ಈ ಸೌಲಭ್ಯವು ಆರಂಭಗೊಳ್ಳಲಿದೆ. ಹೊಸ ವರ್ಷವೂ ದೇಶದಾದ್ಯಂತ ಪಿಂಚಣಿ ದಾರಿಗೆ ಶುಭ ಸುದ್ದಿಯನ್ನು ನೀಡಲಿದೆ.

 

WhatsApp Group Join Now
Telegram Group Join Now

Leave a Comment

copy
share with your friends.