Daughter Rights: ಮದುವೆಯಾದ ಹೆಣ್ಣು ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕು ಸಿಗುತ್ತಾ?
Property Law: ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ಭಾವಿಸಲಾಗಿದೆ, ಆದರೆ ಇದು ಕೇವಲ ಕೆಲ ಜನರ ನಂಬಿಕೆಯೇ? ಕಾನೂನಿನಲ್ಲಿ ಹಕ್ಕು ಇದ್ಯಾ? ಮದುವೆಯಾದ ಮಗಳಿಗೆ ತಂದೆ ಆಸ್ತಿಯಲ್ಲಿ ಹಕ್ಕು ಸಿಗುತ್ತಾ? ಇಲ್ವಾ?
ಭಾರತದಲ್ಲಿ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು ಅನೇಕರಿಗೆ ತಿಳಿದಿಲ್ಲ, ಹೆಣ್ಣು ಮಕ್ಕಳು ಯಾವಾಗಲೂ ಬೇರೆಯವರ ಮನೆಗೆ ಹೋಗುತ್ತಾರೆ, ಉಡುಗೊರೆ ಮತ್ತು ವರದಕ್ಷಿಣೆಯನ್ನು ಮಾತ್ರ ಪಡೆಯಬಹುದು ಎಂದು ಭಾವಿಸಲಾಗಿದೆ, ಮನೆಯ ಮಗನನ್ನು ಮಾತ್ರ ಕುಟುಂಬದ ವಾರಸುದಾರರೆಂದು ಪರಿಗಣಿಸಲಾಗುತ್ತದೆ, ಎಲ್ಲಾ ಆಸ್ತಿಗೆ ಅರ್ಹರು.
ಭಾರತೀಯ ಆಸ್ತಿಯ ಕಾಯ್ದೆಯು ವಿವಾಹಿತ ಮತ್ತು ಆ ವಿವಾಹಿತ ಹೆಣ್ಣು ಮಕ್ಕಳಿಗೆ ಅನ್ವಯಿಸುತ್ತದೆ, ಇದರ ಅರ್ಥವೇನೆಂದರೆ ಹೆಣ್ಣು ಮಕ್ಕಳು ಈಗ ತಮ್ಮ ತಂದೆಯ ಆಸ್ತಿಯಲ್ಲಿ ಮಗನಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಮದುವೆಯಾದ ಹೆಣ್ಣು ಮಗಳಿಗೂ ತಂದೆಯ ಆಸ್ತಿಯಲ್ಲಿ ಅದೇ ಹಕ್ಕು ಇರುತ್ತದೆ, ಮದುವೆಯು ಅವಳ ಕಾನೂನು ಅರ್ಹತೆಯ ಮೇಲೆ ಪರಿಣಾಮ ಬೀರುವುದಿಲ್ಲ.
ಹಿಂದೂ ಉತ್ತರಾಧಿಕಾರ ಕಾಯಿದೆ 1956 ಪ್ರಕಾರ, ಭಾರತದಲ್ಲಿ ಹಿಂದುಗಳು, ಜೈನರು, ಬೌದ್ಧರು ಮತ್ತು ಸಿಖ್ಖರಲ್ಲಿ ಆಸ್ತಿ ವಿಭಜನೆ ಮತ್ತು ಉತ್ತರಾಧಿಕಾರದ ಸಮಸ್ಯೆಗಳನ್ನು ಬಗೆಹರಿಸಲು ಪರಿಚಯಿಸಲಾಗಿದೆ. ಈ ಕಾನೂನಿನ ಪ್ರಕಾರ ಹಿಂದೆ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿರಲಿಲ್ಲ, ಈ ಕಾಯಿದೆಯು 2005 ರ ವರೆಗೆ ಮುಂದುವರೆಯಿತು.
ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು 2005ರಲ್ಲಿ ತಿದ್ದುಪಡಿ ಮಾಡಲಾಯಿತು, ಈ ತಿದ್ದುಪಡಿಯೊಂದಿಗೆ ಭಾರತದಲ್ಲಿ ಹಲವು ಬದಲಾವಣೆಗಳಾಯಿತು, ಹೊಸ ತಿದ್ದುಪಡಿಗಳ ಅನ್ವಯ ಗಂಡು ಮಗನಂತೆ ತಂದೆಯ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೂ ಸಮಾನಕೂಗಗಳನ್ನು ಹೊಂದಿದ್ದಾರೆ ಎಂದು ತಿದ್ದುಪಡಿ ಮಾಡಲಾಗಿದೆ.
ಹೆಣ್ಣು ಮಕ್ಕಳಿಗೆ ಯಾವಾಗ ಆಸ್ತಿ ಹಕ್ಕು ಸಿಗುವುದಿಲ್ಲ?
ತಂದೆ ಜೀವಂತವಾಗಿರುವಾಗಲೇ ಉಯಿಲು ಬರೆದಿದ್ದರೆ, ಆಸ್ತಿಯಲ್ಲಿ ಸಂಪೂರ್ಣವಾಗಿ ಪಾಲು ಮಗ ಅಥವಾ ಇನ್ನೊಬ್ಬರಿಗೆ ಸೇರಿದೆ ಹಾಗೂ ಮಗಳಿಗೆ ಯಾವುದೇ ಹಕ್ಕಿಲ್ಲ ಎಂದು ವಿಲ್ ನಲ್ಲಿ ಬರೆದಿದ್ದರೆ ಸಿಗುವುದಿಲ್ಲ, ತಂದೆಯು ತಾನೇ ಸ್ವಂತವಾಗಿ ಆಸ್ತಿಯನ್ನು ಸಂಪಾದಿಸಿದಾಗ, ಅದನ್ನು ಹೇಗೆ ಹಂಚಬೇಕು ಎಂದು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತಾನೆ.
ತಂದೆಯ ಆಸ್ತಿಯು ಕ್ರಿಮಿನಲ್ ಪ್ರಕರಣ ಅಥವಾ ಕಾನೂನು ವಿವಾದದಲ್ಲಿ ಭಾಗಿಯಾಗಿದ್ದರೆ, ಮಗಳಿಗೆ ಅದನ್ನು ಪಡೆಯಲು ಹಕ್ಕಿರುವುದಿಲ್ಲ.