Crops Insurance: ಬೆಳೆ ವಿಮೆ ನೋಂದಣಿ ಕುರಿತು ಬಿಗ್ ಅಪ್ಡೇಟ್! ಇಲ್ಲಿದೆ ಸಂಪೂರ್ಣ ಮಾಹಿತಿ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕೃಷಿ ಬೆಳೆಗಳಿಗೆ ವಿಮೆ ನೋಂದಣಿ ಮಾಡುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಕೊನೆಯ ದಿನಾಂಕದ ಕುರಿತು ಮಾಹಿತಿಯು ಇಲ್ಲಿದೆ.
ಕರ್ನಾಟಕದ ರೈತರು ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ, ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ (Crops Insurance) ನೋಂದಣಿ ಮಾಡಿಸಿಕೊಳ್ಳಬೇಕು.
ಮೆಕ್ಕೆಜೋಳ, ಕುಸುಮೆ, ಸೂರ್ಯಕಾಂತಿ, ಜೋಳ ಬೆಳಗಲಿಗೆ ಬೆಳೆ ವಿಮೆ ಮಾಡಿಸಿಕೊಳ್ಳುವುದು ಡಿಸೆಂಬರ್ 16 ಕೊನೆ ದಿನಾಂಕವಾಗಿತ್ತು, ಈ ಬೆಳೆಗಳಿಗೆ ನೋಂದಣಿ ಮಾಡಿಸುವ ದಿನಾಂಕವು ಮುಕ್ತಾಯವಾಗಿದೆ. ಬೆಳೆ ವಿಮೆಯ ಹೆಚ್ಚಿನ ಮಾಹಿತಿಗೆ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ರೈತರು ಕಡಿಲೇ ಬೆಳೆಗೆ ಡಿಸೆಂಬರ್ 31, ಬೆಳವಿಮೆ ಮಾಡಿಸಲು ಕೊನೆಯ ದಿನಾಂಕವಾಗಿದೆ. ರೈತರು ಕಡಲೆ ಬೆಳೆಗೆ, ಬೆಳೆ ವಿಮೆ ಮಾಡಿಸಿಕೊಳ್ಳಿ.
ಬೆಳೆ ವಿಮೆ ನೋಂದಣಿಗೆ ಹತ್ತಿರವಿರುವ ಗ್ರಾಮ ಪಂಚಾಯಿತಿ, ಹೋಬಳಿ, ತಾಲೂಕುಗಳಿಗೆ ನಿಗದಿಪಡಿಸಿದ್ದು ನಿಗದಿತ ಘಟಕಗಳಲ್ಲಿ ಬೆಳೆ ವಿಮೆ ನೋಂದಣಿ ಮಾಡಲಾಗುವುದು. ಬೆಳೆ ವಿಮೆ ನೋಂದಣಿಗಾಗಿ ಹತ್ತಿರವಿರುವ ಗ್ರಾಮ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ರೈತರು ತಮ್ಮ ವ್ಯವಹಾರದ ಬ್ಯಾಂಕುಗಳಿಗೆ ಸಂಪರ್ಕಿಸಬಹುದಾಗಿದೆ.
ಬೆಳೆ ವಿಮೆ ಸಂಬಂಧಿಸಿದ ಹಾಗೆ ಹೆಚ್ಚಿನ ಮಾಹಿತಿಗೆ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಿ.