Crop Insurance: ಬೆಳೆ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ;
PM Fasal Bima Yojana explained: ಪ್ರತಿಯೊಬ್ಬ ವ್ಯಕ್ತಿಗೂ ಲೈಫ್ ಇನ್ಶುರೆನ್ಸ್, ಮೆಡಿಕಲ್ ಇನ್ಸೂರೆನ್ಸ್ ಹೇಗೆ ಮುಖ್ಯವೋ ಹಾಗೆ ರೈತರಿಗೆ ಬೆಳೆ ವಿಮೆಯು ಕೂಡ ಬಹಳ ಮುಖ್ಯ. ಪ್ರವಾಹ, ಬರ, ಅತಿವೃಷ್ಟಿ ಇತ್ಯಾದಿ ಕಾರಣಗಳಿಂದ ರೈತರ ಬೆಳಗೆ ಹಾನಿಯಾದರೆ ಅದಕ್ಕೆ ವಿಮಾ ಪರಿಹಾರ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರವು ರೂಪಿಸಿರುವಂತಹ ಪಿಎಂ ಫಸಲ್ ಭೀಮಾ ಯೋಜನೆಯಡಿ ಅರ್ಹ ರೈತರು ಬೆಳೆ ವಿಮೆ ಪಡೆಯಬಹುದು, ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗ ವಾರ್ತೆಗಳ ಮಾಹಿತಿ ಪಡೆಯಲು ನಮ್ಮ ಹಾಗೂ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಕೃಷಿ ಎನ್ನುವುದು ಬಹಳ ಅನಿಶ್ಚಿತ ಆದಾಯವನ್ನು ತರುವ ಕೆಲಸವಾಗಿದೆ, ವರ್ಷವಿಡಿ ದುಡಿದರು ಬೆಳೆಸಿದ ಬೆಳೆಗಳು ಸರಿಯಾದ ರೀತಿಯಲ್ಲಿ ಪಸಲುಕೊಟ್ಟು, ಅದಕ್ಕೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಕ್ಕರೆ ರೈತನ ಪರಮ ಅದೃಷ್ಟ, ಹೆಚ್ಚಿನ ಸಲ ಹಾಗೆ ಆಗುವುದಿಲ್ಲ ಹವಾಮಾನ ವೈಪರಿತ್ಯ ಇತ್ಯಾದಿ ನಾನ ಕಾರಣಗಳಿಗೆ ಬೆಳೆಗಳು ಹಾಳಾಗಬಹುದು, ಅಥವಾ ನಿಶ್ಚಿತ ಪ್ರಮಾಣದಲ್ಲಿ ಬೆಳೆಯನ್ನು ನೀಡದೆ ಹೋಗಬಹುದು. ಆ ಬೆಳೆ ಬೆಳೆಯಲು ರೈತ ಹಾಕಿದ ಬಂಡವಾಳ, ಶ್ರಮ ಎಲ್ಲವೂ ನೀಡಲಿ ಹೋಮ ಮಾಡಿದಂತ ಆಗಿರುತ್ತದೆ, ಇಂತಹ ಹೊತ್ತಿನಲ್ಲಿ ರೈತರಿಗೆ ಸ್ವಲ್ಪ ಆಸರಿಯಾಗಬಹುದಾದಂತ ಬೆಳೆ ವಿಮೆ ಅಥವಾ ಕ್ರಾಫ್ಟ್ ಇನ್ಸೂರೆನ್ಸ್. ರೈತರ ಬೆಳೆಗಳು ಜಲ ನಿರ್ದಿಷ್ಟ ಕಾರಣಗಳಿಂದ ಹಾಳಾದಾಗ ಬೆಳೆ ವಿಮಾ ಇದರ ನೆರವಿಗೆ ಬರುತ್ತದೆ. ರೈತನ ನಷ್ಟಧರಿಸಿಕೊಡುತ್ತದೆ. ಅಂತದ್ದೊಂದು ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಸರ್ಕಾರವು ಮುನ್ನಡೆಸುತ್ತಿದೆ, ಅದರ ಹೆಸರಿನಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಥವಾ PMFBY ಆಗಿದೆ.
ಕೇಂದ್ರ ಸರ್ಕಾರವು ರೈತರ ಬೆಳೆಗಳಿಗೆ ವಿಮ ರಕ್ಷಣೆ ನೀಡುವ ಸಲುವಾಗಿ 2016ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತು, ಈ ಬೆಳೆ ವಿಮೆ ಪಾಲಿಸಿಗೆ ಅರ್ಜಿ ಸಲ್ಲಿಸುವುದು ಪರಿಹಾರ ಪಡೆಯುವುದು ಎಲ್ಲವೂ ಸುಲಭವಾದ ಕೆಲಸ. ಆನ್ಲೈನ್ ಮೂಲಕ ವ್ಯವಹಾರ ಮಾಡಬಹುದು ಇಲ್ಲವೇ ಹತ್ತಿರದ ಕೃಷಿ ಕೇಂದ್ರಕ್ಕೆ ಹೋಗಿ ಭೀಮ ಪಾಲಿಸಿ ಮಾಡಿಸಬಹುದು.
ಪಿಎಂ ಫಸಲ್ ಬಿಮಾ ಯೋಜನೆಗೆ ಸೇರುವುದು ಹೇಗೆ?
ರೈತರು ಯಾವುದಾದರು ಬ್ಯಾಂಕಿನಿಂದ ಬೆಳೆ ಸಾಲ ಪಡೆದುಕೊಂಡಿದ್ದರೆ, ಆಗ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಅನ್ವಯ ಆಗುತ್ತದೆ, ನಿಮಗೆ ನೀಡಲಾಗುವ ಸಾಲದಲ್ಲಿ ಬೆಳೆ ವಿಮೆಯ ಪ್ರೀಮಿಯಂ ಅನ್ನು ಮುರಿದುಕೊಳ್ಳಲಾಗುತ್ತದೆ. ಹೀಗಾಗಿ ಬೆಳೆಸಾಲ ಪಡೆದ ರೈತರು ಪ್ರತ್ಯೇಕವಾಗಿ ಕ್ರಾಪ್ ಇನ್ಸೂರೆನ್ಸ್ ಮಾಡುವ ಅಗತ್ಯವಿಲ್ಲ.
ಇತರ ರೈತರು ಬೆಳೆ ವಿಮೆ ಪಡೆಯುವ ಕ್ರಮಗಳು (Online)
ಬ್ಯಾಂಕುಗಳಲ್ಲಿ ಸಮೀಪದ CSC ಸೆಂಟರ್ ಅಥವಾ ಕೃಷಿ ಕೇಂದ್ರ ಇಲ್ಲವೇ ಅಧಿಕೃತ ವಿಮಾ ಸೆಂಟರ್ ಗೆ ಭೇಟಿ ನೀಡಿ ಬೆಳೆವಿಮೆಯ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸಬಹುದು.
ಜಮೀನಿನ ಪಹಣಿ, ಆಧಾರ್ ಕಾರ್ಡ್ ಅಥವಾ ಯಾವುದೇ ಐಡಿ ದಾಖಲೆ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಬೆಳೆ ವಿಮೆ ಮೊತ್ತದ 1.5%ರಿಂದ 5%ರಷ್ಟು ಹಣವನ್ನು ರೈತರ ತಮ್ಮ ಕೈಯಿಂದ ನೀಡಬೇಕಾಗುತ್ತದೆ.
ಪಿಎಂ ಫಸಲ್ ಬಿಮಾ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕ್ರಮ
ಪಿಎಂ ಫಸಲ್ ಭೀಮಾ ಯೋಜನೆಯ ಪ್ರತ್ಯೇಕವಾದ ವೆಬ್ಸೈಟ್ ರೂಪಿಸಲಾಗಿದೆ, ವೆಬ್ ಸೈಟ್ ಲಿಂಕ್ ಮೇಲೆ ನೀಡಲಾಗಿದೆ.
ಈ ಲಿಂಕ್ ಮೂಲಕ ಬೆಳೆ ವಿಮೆಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಇನ್ಸೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್, ಬೆಳೆ ಆರೋಗ್ಯ ಮೇಲ್ವಿಚಾರಣೆ, ಹವಾಮಾನ ವರದಿ ಇತ್ಯಾದಿ ಸಾಕಷ್ಟು ಸೌಲಭ್ಯಗಳಿವೆ. ಇದರಲ್ಲಿ ಎಲ್ಲಾ ಕಾರ್ಯಗಳಿಗೂ ಅಗತ್ಯವಾದ ಮಾರ್ಗಸೂಚಿಗಳನ್ನು ನೀವು ನೋಡಬಹುದು.
ರೈತರು ಬೆಳೆ ಸಾಲಗಳಿಗೆ ಅರ್ಜಿ ಸಲ್ಲಿಸುವುದಾದರೆ, ವೆಬ್ ಸೈಟ್ ನ ಮುಖಪುಟದಲ್ಲಿ ಸಿಗುವ ವಿವಿಧ ಟ್ಯಾಬ್ಗಳಲ್ಲಿ ಮೊದಲ ಟ್ಯಾಬ್ ಆದ ಫಾರ್ಮರ್ ಕಾರ್ನರ್ ಅನ್ನು ಆಯ್ಕೆ ಮಾಡಭೇಕು.
ಅಲ್ಲಿ ಲಾಗಿನ್ ಆದ ನಂತರ ಫಾರ್ ಫಾರ್ಮರ್ ಅನ್ನು ಕ್ಲಿಕ್ ಮಾಡಿ, ನೊಂದಣಿ ಪ್ರಕ್ರಿಯೆಗೆ ಮುಂದಾಗಿ. ನೊಂದಣಿ ಆಗಿದ್ದರೆ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಓಟಿಪಿ ಪಡೆದು ಲಾಗಿನ್ ಆಗಬೇಕು. ನೊಂದಣಿ ಆಗದೆ ಇದ್ದರೆ ನೋಂದಾಯಿಸಿಕೊಳ್ಳಬಹುದು. ಆದರೆ ಗುಜರಾತ್ ಮತ್ತು ಕರ್ನಾಟಕದ ರೈತರು ಈ ವೆಬ್ಸೈಟ್ ಮೂಲಕ ಬೆಳೆ ವಿಮೆ ಮಾಡಿಸಲು ಸಾಧ್ಯವಿಲ್ಲ. ಈ ರಾಜ್ಯಗಳು ಬೆಳೆವಿಮೆಗೆ ಪ್ರತ್ಯೇಕ ಅವಕಾಶವನ್ನು ಕಲ್ಪಿಸಲಾಗಿದೆ.
ಕರ್ನಾಟಕದ ರೈತರಿಗೆ ಬೆಳೆ ವಿಮೆಗೆ ಪ್ರತ್ಯೇಕ ಪೋರ್ಟಲ್
ಕರ್ನಾಟಕ ಸರ್ಕಾರವು ಆನ್ಲೈನ್ ಅಲ್ಲಿ ಬೆಳೆ ವಿಮೆ ಅರ್ಜಿ ಸಲ್ಲಿಸಲು ಪ್ರತ್ಯೇಕವಾದ ಹೋಟೆಲ್ ಅನ್ನು ರಚನೆ ಮಾಡಿದೆ. ವೆಬ್ ಸೈಟ್ ಲಿಂಕ್ ಕೆಳಗಿದೆ.
www.samrakshane.karnataka.gov.in/CropHome.aspx
ಇಲ್ಲಿ ಯಾವ ವರ್ಷ ಮತ್ತು ಯಾವ ಋತುವಿನ ಬೆಳೆಗೆ ವಿಮೆ ಮಾಡಿಸಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಿರಿ.
ನೀವು ಆನ್ಲೈನ್ಗಿಂತ ಆಫ್ಲೈನ್ ಮೂಲಕ ಬೆಳೆ ವಿಮೆ ಮಾಡಿಸುವುದು ಸೂಕ್ತ, ಹತ್ತಿರದ ಬ್ಯಾಂಕ್ ಇಲ್ಲವೇ ಕೃಷಿ ಕೇಂದ್ರವನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ.
ಇನ್ಷೂರೆನ್ಸ್ ಸೇವೆ ಯಾರು ಒದಗಿಸುತ್ತಾರೆ?
ರಾಜ್ಯ ಸರ್ಕಾರವು ಬೆಳೆ ವಿಮೆಗಾಗಿ ವಿವಿಧ ಇನ್ಸೂರೆನ್ಸ್ ಕಂಪನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇದರಲ್ಲಿ ಸರ್ಕಾರಿ ಇನ್ಸೂರೆನ್ಸ್ ಕಂಪನಿಗಳು, ಖಾಸಗಿ ಇನ್ಸೂರೆನ್ಸ್ ಕಂಪನಿ ಗಳೆಲ್ಲವೂ ಸೇರಿಕೊಂಡಿದೆ. ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿಯಿಂದ ಹಿಡಿದು ಟಾಟಾ AIG ವರೆಗೆ ವಿವಿಧ ಕಂಪನಿಗಳಿವೆ. ಒಂದೊಂದು ಜಿಲ್ಲೆಗೂ ಒಂದೊಂದು ಕಂಪನಿಗಳು ಇರಲಿದೆ.
ಉದಾಹರಣೆಗೆ ನೋಡುವುದಾದರೆ, ಬೆಳಗಾವಿ ಜಿಲ್ಲೆಯನ್ನು ತೆಗೆದುಕೊಂಡರೆ ಅಲ್ಲಿನ ರೈತರಿಗೆ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೇ ಒದಗಿಸುವುದು ಯುನಿವರ್ಸಲ್ ಸೋಂಪು GIC ಎನ್ನುವ ವಿಮಾ ಕಂಪನಿ. ಹಾಗೆಯೇ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಾದ ಡಬ್ಲ್ಯೂ ಬಿ ಸಿ ಐ ಎಸ್ ವಿಮೆಯನ್ನು ಬೆಳಗಾವಿಯಲ್ಲಿ ಟಾಟಾ AIG ಅವರು ನೀಡುತ್ತಾರೆ.
ರಾಜ್ಯ ಸರ್ಕಾರವು ಬಿಡ್ ಪ್ರಕ್ರಿಯೆ ಮೂಲಕ ಪ್ರತಿಯೊಂದು ಜಿಲ್ಲೆಗೂ ಇನ್ಸೂರೆನ್ಸ್ ಕಂಪನಿಯನ್ನು ಕಾಯ್ದುಕೊಳ್ಳುತ್ತದೆ . ಅತಿ ಕಡಿಮೆ ಪ್ರೀಮಿಯಂ ಕೋಟ ಮಾಡುವ ಭೀಮ ಕಂಪನಿಗೆ ಅವಕಾಶ ಸಿಗಲಿದೆ.