CET EXAM: ಸಿಇಟಿ ಪರೀಕ್ಷಾ ದಿನಾಂಕ ಬದಲಾವಣೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕನ್ನಡಿಗರಿಗಾಗಿ ನಡೆಸಲಾಗುವ ಕನ್ನಡ ಭಾಷಾ ಪರಿಚಯ ಪರೀಕ್ಷಾ ದಿನಾಂಕವನ್ನು ಮರು ನಿಗದಿ ಮಾಡಿದೆ, 18 ಏಪ್ರಿಲ್ 2025 ಶುಕ್ರವಾರದಂದು ನಡೆಯಲಿರುವ ಪರೀಕ್ಷೆಯನ್ನು ಈಗ ಮಂಗಳವಾರ 15 ಏಪ್ರಿಲ್ 2025 ರಂದು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಏಕೆ ಬದಲಾಯಿಸಿದರು ಎಂದರೆ, ಕ್ರಿಶ್ಚನ್ ಧಾರ್ಮಿಕ ಆಚರಣೆಯಾದ ಗುಡ್ ಫ್ರೈಡೆ ಶುಕ್ರವಾರದಂದು ಆಚರಿಸಲಾಗುತ್ತದೆ, ಆದ್ದರಿಂದ ಪರೀಕ್ಷಾ ಬರೆಯಲಿರುವ ಅಭ್ಯರ್ಥಿಗಳಿಗೆ ಕಷ್ಟವಾಗುವುದು ಎಂದು ಸರ್ಕಾರವು ಪರೀಕ್ಷಾ ದಿನಾಂಕವನ್ನು ಬದಲಿಸುವ ಯೋಜನೆಯನ್ನು ಕೈಗೊಂಡಿದೆ.
ಪರೀಕ್ಷಾ ವೇಳಾಪಟ್ಟಿ
ಕನ್ನಡ ಭಾಷಾ ಪರೀಕ್ಷೆ (ಗಡಿನಾಡು & ಹೊರನಾಡು ಕನ್ನಡಿಗರಿಗೆ)
ದಿನಾಂಕ: 15 ಏಪ್ರಿಲ್ 2025, ಮಂಗಳವಾರ
ಸಮಯ ಬೆಳಿಗ್ಗೆ 10:30 ರಿಂದ 11:30
ಪರೀಕ್ಷಾ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ವಿಜಯಪುರ, ಮಂಗಳೂರು ಸಿಟಿ 2025 ಪ್ರವೇಶ
ಪರೀಕ್ಷೆ (ಮುಖ್ಯ ವಿಷಯಗಳಿಗೆ):
ದಿನಾಂಕ: 16 ಏಪ್ರಿಲ್ 2025 ಮತ್ತು 17 ಏಪ್ರಿಲ್ 2025
ಇತರೆ ವಿವರಗಳು: ಈ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.
ಪ್ರವೇಶ ಪತ್ರದ ಮಾಹಿತಿ;
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಆಗಿರುವಂತಹ kea.kar.nic.in ನಲ್ಲಿ ಅರ್ಜಿ ಸಲ್ಲಿಸಿ, ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು., ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಹೆಸರು, ಪರೀಕ್ಷಾ ಕೇಂದ್ರ ವಿವರ, ರೀಸ್ಟರ್ ನಂಬರ್, ಸಮಯ ಮತ್ತು ನಿಯಮಗಳನ್ನು ಸ್ಪಷ್ಟವಾಗಿ ನಮೂದಿಸಲಾಗುತ್ತದೆ. ಒಂದು ವೇಳೆ ಪ್ರವೇಶ ಪತ್ರ ಇಲ್ಲದೆ ಅಭ್ಯರ್ಥಿಗಳನ್ನು ಪರೀಕ್ಷೆಗೆ ಅನುಮತಿಸಲಾಗುವುದಿಲ್ಲ.
ಅಧಿಕೃತ ವೆಬ್‌ಸೈಟ್: https://kea.kar.nic.in
ವಿದ್ಯಾರ್ಥಿಗಳ ಗಮನಕ್ಕೆ: ಈ ಪರೀಕ್ಷೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹೆಚ್ಚಳವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸುವರ್ಣ ಅವಕಾಶಗಳನ್ನು ಒದಗಿಸುತ್ತದೆ, ಸಮಯವನ್ನು ವ್ಯರ್ಥ ಮಾಡದೆ ಪರೀಕ್ಷಾ ತಯಾರಿಯನ್ನು ಮಾಡಿಕೊಳ್ಳಿ.