Central Government Jobs: ಕೇಂದ್ರ ಸರ್ಕಾರೀ ಉದ್ಯೋಗ, 40 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದು

Central Government Jobs: ಕೇಂದ್ರ ಸರ್ಕಾರೀ ಉದ್ಯೋಗ, 40 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದು

ರೈಲ್ವೆ ಇಲಾಖೆ ಅಡಿಯಲ್ಲಿ ಬರುವ ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮದಲ್ಲಿ ಹುದ್ದೆಗಳು ಖಾಲಿಯಿದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಈ ಇಲಾಖೆಯು ಭಾರತದ ಸಾರಿಗೆ, ಮೂಲಸೌಕರ್ಯ ಮತ್ತು ಕ್ಷೇತ್ರಗಳಲ್ಲಿ ಪ್ರಧಾನ ಶಿಸ್ತಿನ ಸಲಹಾ ಸಂಸ್ಥೆಯಾಗಿದೆ, ಇಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ, ಖಾಲಿ ಇರುವ ಹುದ್ದೆಗಳಿಗೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು, ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. RITES ಯ ಅಧಿಕೃತ ವೆಬ್ ಸೈಟ್ ಗ ಭೇಟಿ ನೀಡಿ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಉದ್ಯೋಗಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಹುದ್ದೆಗಳಾಗಿದ್ದು ಮಾಸಿಕ ವೇತನ ಕೂಡ ಒಳ್ಳೆಯ ರೀತಿಯಲ್ಲಿ ಇರುತ್ತದೆ. ಈ ಹುದ್ದೆಗಳನ್ನು ಗುತ್ತಿಗೆಯ ಆಧಾರದ ಮೇಲೆ  ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಖಾಲಿ ಇರುವ ಹುದ್ದೆಗಳು: 25

ವಯಸ್ಸಿನ ಮಿತಿ: ಈ ಹುದ್ದೆಗಳಿಗೆ 40 ವರ್ಷ ಬೆಳಗಿನ ಅವರು ಅರ್ಜಿ ಸಲ್ಲಿಸಬಹುದು.

ಕೆಲಸದಲ್ಲಿ 5 ರಿಂದ 10 ವರ್ಷಗಳ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗಿದೆ.

ಮಾಸಿಕ ವೇತನ ಶ್ರೇಣಿ: ರೂ.41,241 ರಿಂದ 46,417

ಆಯ್ಕೆಯ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನ ಮಾಡುವ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಹುದ್ದೆಯ ಹೆಸರು: ಸಹಾಯಕ ಹೆದ್ದಾರಿ ಇಂಜಿನಿಯರ್, ಸರ್ವೆ ಇಂಜಿನಿಯರ್, ಸಹಾಯಕ ಸೇತುವೆ ಇಂಜಿನಿಯರ್, ಪ್ರಮಾಣ ಸರ್ವೆಯರ್, ಎಲೆಕ್ಟ್ರಿಕಲ್ ಇಂಜಿನಿಯರ್ , CED ತಜ್ಞರು

ಶೈಕ್ಷಣಿಕ ಅರ್ಹತೆ: (ಪದವಿ) ಬಿಇ ಸಿವಿಲ್ ಇಂಜಿನಿಯರ್, ಡಿಪ್ಲೋಮಾದಲ್ಲಿ ಸಿವಿಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಸಿವಿಲ್ / ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಜನವರಿ 2025
ಸಂದರ್ಶನ ನಡೆಯುವ ದಿನಾಂಕ ಜನವರಿ 13 ರಿಂದ 17, 2025

 

BSNL RECHARGE PLAN: ಹೊಸ ವರ್ಷಕ್ಕೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಲು ಮುಂದಾದ BSNL

WhatsApp Group Join Now
Telegram Group Join Now

Leave a Comment

copy
share with your friends.