BUS Ticket: ರಾಜ್ಯದ ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್! ಟಿಕೆಟ್ ದರ ಹೆಚ್ಚಳ, ಸಚಿವರ ಅಭಿಪ್ರಾಯ ಏನು?
ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಸಾರಿಗೆ ನಿಗಮಗಳಲ್ಲಿ ಟಿಕೆಟ್ ದರವನ್ನು ಹೆಚ್ಚು ಮಾಡುವ ಕುರಿತು ಪ್ರಸ್ತಾವನೆ ಕಳಿಸಬೇಕಿದೆ, ಪ್ರಸ್ತಾವನೆ ಬಂದ ಬಳಿಕ ಸರ್ಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.
ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.15% ರಷ್ಟು ಬಸ್ದರ ಹೆಚ್ಚಳದ ಬಗ್ಗೆ ಸಲಹೆ ಯಾರು ಬೇಕಾದರೂ ಕೊಡಬಹುದು ಎಂದು ಹೇಳಿದ್ದಾರೆ. BMTC,KSRTC ಸೇರಿದಂತೆ ನಾಲ್ಕು ಬೋರ್ಡಗಳಲ್ಲಿ ನಾಲ್ಕು ಕಾರ್ಪೊರೇಷನ್ ಇರುತ್ತದೆ, ಅವರು ಅಲ್ಲಿನ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಂಡು ಟಿಕೆಟ್ ದರ ಎಷ್ಟು ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಿದ್ದಾರೆ.
ಹಿಂದಿನಿಂದಲೂ ಬಂದ ಸಂಪ್ರದಾಯವೇನೆದರೆ, ನಾಲ್ಕು ಬೋರ್ಡ್ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಂಡಳಿಯಲ್ಲಿರುವ ಎಲ್ಲಾ ಸದಸ್ಯರು ಎಲ್ಲಾ ರೀತಿಯ ಖರ್ಚು ವೆಚ್ಚಗಳನ್ನು ನೋಡಿಕೊಂಡು ನಮಗೆ ಪ್ರಸ್ತಾವನೆಯನ್ನು ಕಳುಹಿಸುತ್ತಾರೆ. ಆ ಪ್ರಸ್ತಾವನೆಯನ್ನು ನೋಡಿಕೊಂಡು ಸರ್ಕಾರವು ಏನು ತೀರ್ಮಾನ ತೆಗೆದುಕೊಳ್ಳಬೇಕು ಎಂದು ನಿರ್ಣಯಿಸುತ್ತದೆ ಎಂದು ಹೇಳಿದ್ದಾರೆ.
ಟಿಕೆಟ್ ದರ ಹೆಚ್ಚಳದ ಬಗ್ಗೆ, ಸೋಶಿಯಲ್ ಮೀಡಿಯಾಗಳಲ್ಲಿ ಬಿಜೆಪಿ ಟೀಕೆ ಮಾಡುತ್ತಾರೆ. ಆದರೆ ಬಿಜೆಪಿ ಸರ್ಕಾರವು ಅಧಿಕಾರದಲ್ಲಿದ್ದಾಗ ಸಾವಿರಾರು ಸಾರಿಗೆ ನೌಕರರನ್ನು ಸಸ್ಪೆಂಡ್ ಮಾಡಿತ್ತು, 3000 ಸಾರಿಗೆ ನೌಕರರನ್ನು ತೆಗೆದುಹಾಕಿದ್ದರು, ಸುಮಾರು 15 ರಿಂದ 20,000 ಜನರಿಗೆ ನೋಟಿಸ್ ಕಳುಹಿಸಿದ್ದರು, ಇವುಗಳನ್ನೆಲ್ಲ ವಿತ್ ಡ್ರಾ ಮಾಡಿ ಎಲ್ಲರಿಗೂ ಈಗ ಕೆಲಸಕ್ಕೆ ಸೇರಿಸಿಕೊಂಡಿದ್ದೇವೆ. ಎಲ್ಲರೂ ಈಗ ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ, ಸುಮಾರು 5,900 ಕೋಟಿ ರೂಪಾಯಿ ಸಾಲವನ್ನು ಬಿಜೆಪಿಯವರು ಮಾಡಿ ಹೋಗಿದ್ದರು, ಈಗ ಅವರೇ ನಮಗೆ ನೀತಿ ಪಾಠವನ್ನು ಹೇಳಲು ಬರುತ್ತಿದ್ದಾರೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಗರಂ ಆಗಿ ಹೇಳಿದ್ದಾರೆ.