BSNL OFFER’S: ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ! ಕೇವಲ ರೂ.4 ನೋಡಿ ಉಳಿದ ಖಾಸಗಿ ಕಂಪನಿಗಳಿಗೆ ಬಿಗ್ ಶಾಕ್;
ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಆರು ತಿಂಗಳ ವಾಯಿದೆಯ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ, ಈ ಪ್ಲಾನ್ ಅಲ್ಲಿ ಅನಿಯಮಿತ ಕರೆ ಮತ್ತು ಡಾಟಾ ಸೌಲಭ್ಯವನ್ನು ಪಡೆಯಬಹುದು. ಇದು ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸವಾಲಾಗಿದೆ, ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದ ಹಾಗೆ ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಸರ್ಕಾರಿ ಸ್ವಾಮ್ಯದ ಕಂಪನಿ ಯಾಗಿರುವ BSNL ತನ್ನೆಲ್ಲಾ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಜಾರಿಗೆ ತಂದಿದೆ, ಈ ಹೊಸ ಪ್ಲಾನ್ ಆರು ತಿಂಗಳ ವ್ಯಾಲಿಡಟಿ ಪಡೆದುಕೊಂಡಿದ್ದು, ಡೇಟಾ ಮತ್ತು ಅನ್ಲಿಮಿಟೆಡ್ ಕಾಲಿಂಗ್ ಸೌಲಭ್ಯವು ಗ್ರಾಹಕರಿಗೆ ಸಿಗಲಿದೆ, ಈ ಬಜೆಟ್ ಸ್ನೇಹಿ ರಿಚಾರ್ಜ್ ಪ್ಲಾನ್ ಬಿಡುಗಡೆಗೊಳಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ಗುರಿಯನ್ನು BSNL ಮಾಡುತ್ತಿದ್ದು ಇದು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸವಾಲ್ ಆಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಪದೇಪದೇ ರಿಚಾರ್ಜ್ ಮಾಡಿಸಿಕೊಳ್ಳುವ ಕಿರಿಕಿರಿಯಿಂದ ಹೊರಬರಲು ಗ್ರಾಹಕರು ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಖಾಸಗಿ ಟೆಲಿಕಾಂ ಕಂಪನಿಗಳ ವಿರುದ್ಧ ತನ್ನ ಸ್ಥಿತಿಯನ್ನು ಬಲಪಡಿಸಿಕೊಳ್ಳಲು BSNL ಕಡಿಮೆ ಬೆಲೆಯ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿದೆ, ಇದರ ಜೊತೆಯಲ್ಲಿ 4G ನೆಟ್ವರ್ಕ್ ಅಳವಡಿಕೆಯು ಕೂಡ ಕಾರ್ಯವು ಅತ್ಯಂತ ವೇಗದಲ್ಲಿ ಸಾಗುತ್ತಿದೆ.
ಇತರೆ ಟೆಲಿಕಾಂ ಕಂಪನಿಗಳ ದುಬಾರಿ ಫ್ರೀ ಪೈಡ್ ರಿಚಾರ್ಜ್ ಪ್ಲಾನ್ ಗಳಿಂದ ನೀವು ಬೇಸತ್ತಿದ್ದರೆ, ಈ ಪ್ಲಾನ್ ಆಕ್ಟಿವೇಟ್ ಮಾಡಿಸಿಕೊಳ್ಳಬಹುದು, ಎಂದಿನಂತೆ BSNL ಕಡಿಮೆ ಬೆಲೆಗೆ ಆರು ತಿಂಗಳ ಅವಧಿಯ ಹೊಸ ಪ್ಲಾನ್ ಅನ್ನು ಹೊರತಂದಿದೆ, BSNL ಆರು ತಿಂಗಳ ರಿಚಾರ್ಜ್ ಪ್ಲಾನ್ ಬೆಲೆ ರೂ.750 ಆಗಿದೆ, ಅಂದರೆ ದಿನಕ್ಕೆ ಕೇವಲ ರೂ.4.66 ಪಾವತಿಸಿದಂತೆ ಆಗುತ್ತದೆ.
750 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ವಿಶೇಷತೆ ಏನು?
ಈ ಯೋಜನೆಯನ್ನು ವಿಶೇಷವಾಗಿ ಜಿಪಿ2 ಬಳಕೆದಾರರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ, ತಮ್ಮ ಹಿಂದಿನ ರಿಚಾರ್ಜ್ ಪ್ಲಾನ್ ಅವಧಿ ಮುಗಿದರು ರಿಚಾರ್ಜ್ ಮಾಡಿಸಿಕೊಳ್ಳಲು ಸಾಧ್ಯವಾಗದ ಬಳಕೆದಾರರಿಗೆ ಈ ಪ್ಲಾನ್ ಅನ್ನು ಜಾರಿಗೆ ತರಲಾಗಿದೆ. ಪದೇ ಪದೇ ರಿಚಾರ್ಜ್ ಮಾಡಿಸಿಕೊಳ್ಳುವ ಕಿರಿಕಿರಿಯಿಂದ ಹೊರಬರಲು BSNL ರೂ.750 ರೂಪಾಯಿ ಪ್ಲಾನ್ ತಂದಿದೆ, ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡು ಗ್ರಾಹಕರಿಗೆ 180 ದಿನಗಳವರೆಗೆ ಯಾವುದೇ ರಿಚಾರ್ಜ್ ಮಾಡಿಕೊಳ್ಳುವ ಕಿರಿಕಿರಿ ಇರುವುದಿಲ್ಲ, ಯಾವುದೇ ನೆಟ್ವರ್ಕ್ ಆನಿಯಮಿತ ಕರೆ ಮಾಡಬಹುದು ಹಾಗೆಯೇ ಪ್ರತಿದಿನ 100 SMS ಉಚಿತವಾಗಿ ಕಳುಹಿಸಬಹುದು.
ಎಷ್ಟು ಡೇಟಾ ಸಿಗುತ್ತೆ?
ರೂ.750 ಪ್ರಿಫೈಡ್ ಪ್ಲಾನ್ ಅಲ್ಲಿ ಗ್ರಾಹಕರಿಗೆ 180 ದಿನಕ್ಕೇ ಒಟ್ಟು 180GB ಡಾಟಾ ಸಿಗುತ್ತದೆ, ಅಂದರೆ ಪ್ರತಿದಿನ ನಿಮಗೆ ಒಂದು 1GB ಡಾಟಾ ಸಿಗಲಿದೆ, ಡೇಟಾ ಪ್ಯಾಕ ಮುಕ್ತಾಯಗೊಂಡ ಬಳಿಕ ಇಂಟರ್ನೆಟ್ ಸ್ಪೀಡ್ 40kbps ಗೆ ಇಳಿಕೆಯಾಗುತ್ತದೆ.
BSNL ಪರಿಚಯಿಸಿರುವ ಈ ಹೊಸ ಯೋಜನೆಯಿಂದ JIO, Airtel ಮತ್ತು ವೊಡಾಫೋನ್ ಐಡಿಯಾದಂತಹ ಇತರೆ ಟೆಲಿಕಾಂ ಕಂಪನಿಗಳಿಗೆ ತೀವ್ರ ಸ್ಪರ್ಧೆಯನ್ನು ನೀಡಲಿದೆ, ನೆಟ್ವರ್ಕ್ ಸಮಸ್ಯೆಯಿಂದಾಗಿ ಮತ್ತು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಮುಖ ಮಾಡುತ್ತಿರುವ ಗ್ರಾಹಕರನ್ನು ಹಿಂತರಲು BSNL ಬಜೆಟ್ ಸ್ನೇಹಿತ ಅನ್ನು ಬಿಡುಗಡೆ ಮಾಡಿದೆ.