BSNL 3G ಸೇವೆ ಬಂದ್! ಸಿಮ್ ಚೇಂಜ್ ಮಾಡಬೇಕಾ?
ದೇಶದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಸಿಮ್ ಬಳಸುತ್ತಿದ್ದಾರೆ, BSNL 3G ಸೇವೆಯನ್ನು ಜನವರಿ 15ರಿಂದ ನಿಲ್ಲಸಲು ತೀರ್ಮಾನ ನಡೆಸಿದೆ, ಏನದು ಅಂತ ತಿಳಿದುನೋಡೋಣ.
BSNL 4G: ದೇಶದ ಖಾಸಗಿ ಕಂಪನಿಗಳಾದ Jio, Airtel ಮತ್ತಿತರ ಕಂಪನಿಗಳು 4G,5G ಸೇವೆ ತಲುಪಿರುವಾಗ, ಸರ್ಕಾರಿ ಸೌಮ್ಯದ ಕಂಪನಿಯಾಗಿರುವ BSNL ಇನ್ನು 3G ಸೇವೆ ಕೊಡ್ತಿದೆ, ಆದರೆ ಗ್ರಾಹಕರು 4G ಸೇವೆ ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಿದ್ದಾರೆ, BSNL 4G ತರುವ ಕೆಲಸದಲ್ಲಿ ನಿರತವಾಗಿದೆ.
BSNL ಅಧಿಕಾರಿಗಳು ಮಾರ್ಚ್ ಒಳಗೆ 4G ಸೇವೆಯನ್ನು ನೀಡುತ್ತೇವೆ ಮತ್ತು ವರ್ಷದ ಕೊನೆಯೊಳಗೆ ದೇಶದಾದ್ಯಂತ 4G ಸೇವೆ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ, ದೇಶದಲ್ಲಿ 4G ನೆಟ್ವರ್ಕ್ ವಿಸ್ತರಿಸಲು ಟವರ್ ಗಳನ್ನು ಹಾಕಲಾಗಿದೆ.
3G ಸೇವೆ ಬಂದ್!
ಬಿಎಸ್ಎನ್ಎಲ್ ಜನವರಿ 15 ರಿಂದ 3G ಸೇವೆಯನ್ನು ನಿಲ್ಲಿಸಲು ತೀರ್ಮಾನ ನಡೆಸಿದೆ, ಪಾಟ್ನಾದಲ್ಲಿ 4G ಸೇವೆ ಆರಂಭಿಸಲು 3G ಸೇವೆ ನಿಲ್ಲುತಿದೆ. ಮೊದಲ ಹಂತದಲ್ಲಿ ದೇಶದ ಕಗಾರಿಯ, ಬೇಗುಸರೈ, ಮುಂಗೇರ್, ಮೋತಿಹಾರಿ ಮತ್ತು ಕತಿಹಾರ್ ನಲ್ಲಿ 3G ಸೇವೆಯನ್ನು ನಿಲ್ಲಿಸಲಾಗಿದೆ.
ಎಲ್ಲಿ ಮೊದಲು ಸೇವೆ ನಿಲ್ತಿದೆ?:
ಇನ್ನು ಮುಂದೆ BSNL 3G ಬಳಕೆದಾರರಿಗೆ ಕಾಲ್ ಮಾತ್ರ ಸಿಗುತ್ತೆ, ಡೇಟಾ ಬಳಕೆ ಮಾಡಲಿಕ್ಕೆ ಆಗಲ್ಲ, 4G ಅಪ್ಡೇಟ್ ಮಾಡುವುದಕ್ಕೆ ಹಲವು ಜಿಲ್ಲೆಗಳಲ್ಲಿ 3G ನಿಲ್ತಿದೆ, ಜನವರಿ 15ರಿಂದ ಪಾಟ್ನಾ ಮತ್ತು ದೇಶದ ಬೇರೆ ಬರೆ ನಗರಗಳಲ್ಲಿ 3G ಸೇವೆ ನಿಲ್ಲುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಇದರಿಂದ ದೇಶದ ಲಕ್ಷಾಂತರ ಗ್ರಾಹಕರಿಗೆ ತೊಂದರೆ ಆಗಬಹುದು, ನಿಮಗೆ ಇನ್ನು ಮುಂದೆ 3G ನಿಂತರೆ ಇಂಟರ್ನೆಟ್ ಹೇಗೆ ಎಂದು ಅನಿಸಬಹುದು.
4G ಸಿಮ್ ಹೇಗೆ ಪಡೆಯೋದು?
3G ಬಳಕೆದಾರರು ಚಿಂತಿಸುವ ಅಗತ್ಯವಿಲ್ಲ, 3G ನಿಂತರೆ ಹೊಸ 4G ಸಿಮ್ ಸಿಗುತ್ತೆ, ಗ್ರಾಹಕರು ಹತ್ತಿರವಿರುವ ಸೇವಾಕೇಂದ್ರ ಇಲ್ಲವೇ BSNL ಆಫೀಸ್ಗೆ ತೆರಳಿ, ಹಳೆಯ 3G ಸಿಮ್ ಕೊಟ್ಟು 4G sim ಪಡೆದುಕೊಳ್ಳಬಹುದು.
ಗ್ರಾಹಕರು ಸಿಮ್ ಬದಲಿಸಲು ತೆರಳುವಾಗ, ಫೋಟೋ ಐಡಿ ಕಾರ್ಡ್ ತೆಗೆದುಕೊಂಡು ಹೋಗಬೇಕು, 2017ಕ್ಕಿಂತ ಮೊದಲು ಕೊಟ್ಟ ಸಿಮ್ ಗಳನ್ನು ಈಗ ಬದಲಾಯಿಸಲಾಗುತ್ತಿದೆ, ಸಿಮ್ ಬದಲಾಯಿಸಲು ಯಾವುದೇ ಶುಲ್ಕವಿಲ್ಲ.