BSF GD CONSTABLE RECRUITMENT: ಭಾರತೀಯ ಗಡಿ ಭದ್ರತಾ ಪಡೆ ನೇಮಕಾತಿ 2024

BSF GD CONSTABLE RECRUITMENT: ಭಾರತೀಯ ಗಡಿ ಭದ್ರತಾ ಪಡೆ ನೇಮಕಾತಿ 2024

ಭಾರತೀಯ ಗಡಿ ಭದ್ರತಾ ಪಡೆ(BSF)ಯಲ್ಲಿ ಕ್ರೀಡಾಕೂಟ ವಿಭಾಗದಲ್ಲಿ 275 ಕಾನ್ಸ್ಟೇಬಲ್(Constable) ಗ್ರೂಪ್ ಸಿ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, 10ನೇ ತರಗತಿ ಪಾಸಾದ ಅರ್ಹ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

BSF ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವೀಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕ ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಅಭ್ಯರ್ಥಿಗಳು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿ ನಂತರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು:

ಇಲಾಖೆಯ ಹೆಸರು ಭಾರತೀಯ ಗಡಿ ಭದ್ರತಾ ಪಡೆ (BSF)
ಹುದ್ದೆಯ ಹೆಸರು ಕಾನ್ಸ್ಟೇಬಲ್ ‘ಗ್ರೂಪ್ ಸಿ’
ಖಾಲಿ ಇರುವ ಹುದ್ದೆಗಳು 275
ಉದ್ಯೋಗ ಸ್ಥಳ ಭಾರತದಾದ್ಯಂತ
ವೇತನ ಶ್ರೇಣಿ ರೂ.60,100
ಅರ್ಜಿ ಸಲ್ಲಿಸುವ ಬಗೆ Online

ಶೈಕ್ಷಣಿಕ ಅರ್ಹತೆ: 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು BSF ಹೊರಡಿಸಿದ ಅಧಿಸೂಚನೆಯ ಪ್ರಕಾರ ಮಾನ್ಯತೆ ಪಡೆದು ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ:

BSF ನ ಅದಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠವಾಗಿ 23 ವರ್ಷ ವಯೋಮಿತಿಯನ್ನು ಮೀರಿರಬಾರದು.

ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ 01 ಡಿಸೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಡಿಸೆಂಬರ್ 2024

ಅರ್ಜಿ ಶುಲ್ಕದ ವಿವರ:

  • OBC, ಸಾಮಾನ್ಯ ಮತ್ತು EWS ಅಭ್ಯರ್ಥಿಗಳಿಗೆ ರೂ.147.20 ಅರ್ಜಿ ಶುಲ್ಕ
  • SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಹುಲ್ಕದ ವಿನಾಯಿತಿ ಇದೆ.

ನೇಮಕಾತಿ ವಿಧಾನ: 

BSF ನ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕ್ರೀಡಾ ವಿಭಾಗಕ್ಕೆ ಅನುಗುಣವಾಗಿ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ, ನಂತರ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ, ನಂತರ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನೆ ಮಾಡುವ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೇತನ ಶ್ರೇಣಿ:

BSF ನ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.21,700 ರಿಂದ 60,100 ರ ವರೆಗೆ ವೇತನವನ್ನು ನೀಡಲಾಗುತ್ತದೆ.

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್ಸೈಟ್ rectt.bsf.gov.in
ಅಧಿಕೃತ ಅಧಿಸೂಚನೆ Download Now
ಅರ್ಜಿ ಸಲ್ಲಿಸುವ ಲಿಂಕ್ Click Here

 

 

Leave a Comment

WhatsApp Group Join Now
Telegram Group Join Now