BPL RATION CARD: ಹೊಸ ಅರ್ಜಿ ಸಲ್ಲಿಕೆಗೆ ಮಹತ್ವದ ಆದೇಶ! ಇಲ್ಲಿದೆ ಸಂಪೂರ್ಣ ಮಾಹಿತಿ;
BPL Ration Card: ರೇಷನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ, ಅದರಲ್ಲೂ ಹೊಸ ಬಿಪಿಎಲ್ ಕಾಡಿಗೆ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಕೆಯು ರದ್ದಾಗಿದೆ. ಹಾಗಾದರೆ ಕಾರಣ ಏನು, ಯಾವಾಗಿನಿಂದ ಸ್ಥಗಿತ ಮಾಡಲಾಗಿದೆ ಹಾಗೂ ಯಾರಿಗೆಲ್ಲ ಸರ್ವ ತೊಂದರೆ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಈಗಾಗಲೇ ರಾಜ್ಯದಲ್ಲೆಡೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬಿಪಿಎಲ್ ಕಾರ್ಡ್ ಕಾಡುಗಳನ್ನು ಕಾರ್ಡುಗಳನ್ನು ರದ್ದು ಮಾಡಿ, ಅಂತವರ ಕಾರ್ಡ್ ಅನ್ನು ಎಪಿಎಲ್ ಕಾರ್ಡಿಗೆ ವರ್ಗಾಯಿಸುವ ಕೆಲಸವನ್ನು ಮಾಡಲು ಸರ್ಕಾರವು ಮುಂದಾಗಿದೆ. ಇದರ ಬೆನ್ನಲ್ಲೇ ಅರ್ಹರ ಬಿಪಿಎಲ್ ಕಾರ್ಡುಗಳನ್ನು ಸರ್ಕಾರ ರದ್ದುಪಡಿಸಿದೆ ಎನ್ನುವ ಆಕ್ರೋಶಗಳು ಎಲ್ಲೆಡೆ ಬು. ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಅರ್ಹರಿಗೆ ಬಿಪಿಎಲ್ ಕಾರ್ಡ್ಗಳನ್ನು ಮತ್ತೆ ಹಿಂತಿರುಗಿಸಲಾಗುತ್ತದೆ ಎಂದು ಸರ್ಕಾರವು ಭರವಸೆಯನ್ನು ಸಹ ನೀಡಿತ್ತು.
ಇನ್ನೊಂದೆಡೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಯ ಆನ್ಲೈನ್ ಪೋರ್ಟಲ್ ಅನ್ನು ಇನ್ನು ಕೂಡ ಪುನರ್ ಆರಂಭಿಸಿಲ್ಲ, ರಾಜ್ಯಾದ್ಯಂತ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಸುಮಾರು 2.94 ಲಕ್ಷ ಮಂದಿ ಕಾಡಿಗಾಗಿ ಕಾಯುತ್ತಿದ್ದಾರೆ. ಆದರೆ ಹೊಸದಾಗಿ ಅರ್ಜಿದಾರರಿಗೆ ಅವಕಾಶವನ್ನು ಕಲ್ಪಿಸಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೇಳುತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನಿಲ್ಲಿಸಿದ್ದ ಪೋರ್ಟಲ್ ಅನ್ನು ಇದುವರೆಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮುಕ್ತಗೊಳಿಸಿಲ್ಲ. ಆದರೆ ಆರೋಗ್ಯ ತುರ್ತು ಇರುವವರಿಗೆ ಹಾಗೂ ಕಾರ್ಮಿಕರಿಗೆ ಮಾತ್ರ ಈ ವೆಬ್ಸೈಟ್ ತೆಗೆದುಕೊಳ್ಳುತ್ತದೆ. ಹೀಗೆ ಬಂದ ಅರ್ಜಿಗಳನ್ನು ಆಯಾ ಜಿಲ್ಲೆಗಳ ಉಪ ನಿರ್ದೇಶಕರ ಶಿಫಾರಸ್ಸಿನ ಮೇರೆಗೆ ಆಹಾರ ಇಲಾಖೆ ಆಯುಕ್ತರು ಅನುಮೋದನೆಯನ್ನು ನೀಡಲಿದ್ದಾರೆ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಜನ ಸಾಗರವೇ ಬಿಪಿಎಲ್ ಕಾರ್ಡ್ ಪಡೆಯಲು ಮುಂದಾಗಿದ್ದಾರೆ ಎನ್ನುವ ಕಾರಣದಿಂದ ಆನ್ಲೈನ್ ಪಡಿತರ ಚೀಟಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಇದೀಗ ಈ ಹಿಂದೆ ಅರ್ಜಿ ಸಲ್ಲಿಸಲು ಯಾವ ನಿಯಮಗಳನ್ನು ಜಾರಿಯಲ್ಲಿದೆಯೋ ಅದೇ ನಿಯಮಗಳನ್ನು ಅನುಸರಿಸಲಾಗುವುದು, ಒಂದು ವೇಳೆ ಹೊಸದಾಗಿ ಮಾರ್ಗಸೂಚಿಗಳು ಬಂದರೆ, ಸರ್ಕಾರದ ಸೂಚನೆ ಮೇರೆಗೆ ಅವುಗಳನ್ನು ಅಳವಡಿಸಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ತಿಳಿಸಿದೆ.
2022-23ರಲ್ಲಿ ಚುನಾವಣೆ ನೀತಿ ಸಂಹಿತೆಗು ಮುಂಚೆ ಅಂದರೆ ಬಿಪಿಎಲ್ ಕಾರ್ಡಿಗಾಗಿ 2.94 ಲಕ್ಷ ಅರ್ಜಿಗಳು ಬಂದಿದೆ, ಇವುಗಳ ಪರಿಶೀಲನೆ ನಡೆಯುತ್ತಿದೆ. ಸ್ವಂತ ಮನೆ, ಕಾರು, ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ, ಅರ್ಹರಿಗೆ ರಶೀದಿಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಸದ್ಯ ಅಂತ್ಯೋದಯ, ಬಿಪಿಎಲ್ ಅನ್ನ ಯೋಜನೆ ಕಾರ್ಡುಗಳು ಸೇರಿ 1.28 ಕೋಟಿ ಕಾರ್ಡುಗಳಿವೆ. 4.42 ಕೋಟಿಗೂ ಅಧಿಕ ಫಲಾನುಭವಿಗಳು ಇದ್ದಾರೆ.
ಬಿಪಿಎಲ್ ಕಾರ್ಡ್ ಪಡೆಯಲು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು, ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷ ಮಿತಿಯಲ್ಲಿರಬೇಕು. ಇಂಥವರು ತುರ್ತು ಆರೋಗ್ಯ ಸಮಸ್ಯೆ ಇದ್ದರೆ ಹೊಸ ಕಾರ್ಡುಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲದೆ ರಾಜ್ಯದ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಆದ https://ahara.karnataka.gov.in/ ನಲ್ಲಿ ಸ್ವಯಂ ಆಗಿ ಅರ್ಜಿ ಸಲ್ಲಿಕೆ ಮಾಡಬಹುದು. ಎಪಿಎಲ್ ಕಾರ್ಡ್ ಗಳಿಗೂ ಅರ್ಜಿ ಸಲ್ಲಿಸುವವರು ಆನ್ಲೈನ್ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬಹುದಾಗಿದೆ.