BPL CARD: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ.

BPL CARD: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯದ ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದಾಗಿದೆ, ಅದನ್ನು ಬಡವರಿಗೆ ಬಿಪಿಎಲ್ ಕಾರ್ಡ್ ಸರ್ಕಾರದ ಹೆಚ್ಚಿನ ಸೌಲಭ್ಯಗಳನ್ನು ಪಡೆಯುವಲ್ಲಿ ಸಕಾರಿಯಾಗಲಿದೆ. ಈ ಕಾರ್ಡಿಗೆ ಸಂಬಂಧಿಸಿದ ಹಾಗೆ ಆಗಾಗ ಬದಲಾವಣೆಗಳು ಆಗುತ್ತಲೇ ಇರುತ್ತದೆ, ಇದೇ ವಿಚಾರವಾಗಿ ಆಹಾರ ಸಚಿವರು ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದ್ದಾರೆ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ.

ರಾಜ್ಯದಲ್ಲಿ ಈಗಾಗಲೇ ನಕಲಿ ದಾಖಲೆ ಸೃಷ್ಟಿಸಿ ಪಡೆದಿರುವಂತಹ ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರವು ರದ್ದು ಮಾಡುವ ನಿರ್ಧಾರಕ್ಕೆ ಕೈ ಹಾಕಿದ್ದು, ಈ ಮೂಲಕವಾಗಿ ಅನರ್ಹರನ್ನು APL ಕಾರ್ಡಿಗೆ ವರ್ಗಾಯಿಸುವ ಕೆಲಸವನ್ನು ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಸಂಬಂಧಿಸಿದ ಹಾಗೆ ಸರ್ಕಾರವು ಮಹತ್ವದ ಮಾಹಿತಿ ಒಂದನ್ನು ಹೊರಹಾಕಿದೆ.

ಬಿಪಿಎಲ್ ಕಾರ್ಡ್ದಾ(BPL CARD)ರರು, ಪಡಿತರವನ್ನು ಪಡೆಯುವುದಕ್ಕೆ ಕುಟುಂಬದವರ ಎಲ್ಲರ ವೇತನ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯ ಎಂದು ಹೇಳಲಾಗುತ್ತಿದೆ, ಆದರೆ ಈಗ ಎಲ್ಲರ ವೇತನ ಪ್ರಮಾಣ ಪತ್ರ ಕಡ್ಡಾಯವಲ್ಲ ಎನ್ನುವುದು ಆಹಾರ ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪನವರು ಕಷ್ಟಪಡಿಸಿದ್ದಾರೆ. ಈ ಮೂಲಕ ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ಕೋಲಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವರು, ಅರ್ಹರಲ್ಲದವರು ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಇಲಾಖೆಯಿಂದ ಪರಿಶೀಲನೆಯನ್ನು ನಡೆಸಲಾಗುತ್ತಿದೆ, ಸರ್ಕಾರಿ ನೌಕರರು ಈ ಕಾರ್ಡ್ ಪಡೆದಿದ್ದಾರೆ ಅಂತವರ ಕಾರ್ಡುಗಳನ್ನೂ ರದ್ದುಪಡಿಸುವುದಾಗಿ ಹೇಳಿದ್ದಾರೆ, ಅಕ್ರಮ ಪಡಿತರ ಚೀಟಿಗೆ ಸಂಬಂಧಿಸಿದ ಹಾಗೆ, ಪಡಿತರ ಪಡೆಯುವ, ವಿತರಣೆ ಸೇರಿದಂತೆ ವಿವಿಧ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾಗಿತ್ತು, ಈಗ ಎಲ್ಲ ಸಮಸ್ಯೆಯು ಒಂದು ಹಂತಕ್ಕೆ ಬಂದಿದೆ, ಇನ್ನು ಮುಂದೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

ಬಿಪಿಎಲ್ ಕಾರ್ಡ್ ಷರತ್ತುಗಳು:

  • ಬಿಪಿಎಲ್ ಕಾರ್ಡ್ ಹೊಂದಿರುವವರು ಸರ್ಕಾರಿ ನೌಕರರಾಗಿರಬಹುದು,
  • ಅವರ ವಾರ್ಷಿಕ ಆದಾಯ ಮಿತಿ 1.20 ಲಕ್ಷ ಮೀರಿರಬಾರದು

ಇಂಥವರ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸುವುದಿಲ್ಲ ಅಂತಲೂ ತಿಳಿಸಿದ್ದಾರೆ, ಈ ವಿಷಯವಾಗಿ ಅರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದಂತಾಗಿದೆ, ಇದರಿಂದ ಅರ್ಹರಿಗೆ ಸರಿಯಾಗಿ ರೇಷನ್ ಪಡೆಯಲು ಸಹಾಯವಾಗಲಿದೆ.

 

WhatsApp Group Join Now
Telegram Group Join Now

Leave a Comment

copy
share with your friends.