BPL CARD| ಕೇಂದ್ರ ಸರ್ಕಾರದಿಂದ ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್! ಸಂಪೂರ್ಣ ಉಚಿತ…
ಕೇಂದ್ರ ಸರ್ಕಾರವು BPL CARD ಹೊಂದಿರುವವರಿಗೆ ಎರಡು ಸಿಹಿ ಸುದ್ದಿ ಒಂದನ್ನು ನೀಡಿದೆ, ಬಡವರ ಆರ್ಥಿಕ ಸುಧಾರಣೆಗಾಗಿ ಪಿಎಂ ಆವಾಸ್ (PM Awas Yojana) ಮತ್ತು ಪಿಎಂ ಉಜ್ವಲ ಯೋಜನೆಗಳ (PM Ujwal Yojana) ಅಡಿ ಉಚಿತ ಮನೆ ಹಾಗೂ LPG GAS ಸೌಲಭ್ಯವನ್ನು ಘೋಷಿಸಲಾಗಿದೆ. ಈ ಸೌಲಭ್ಯಗಳಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಸಹಾಯವಾಗಲಿದೆ.
ಪಿಎಂ ಆವಾಸ್ ಯೋಜನೆಯಡಿ ಉಚಿತ ಮನೆ ಸೌಲಭ್ಯ
ಕೇಂದ್ರದ ಮೋದಿ ಸರ್ಕಾರವು ಈ ಭಾರಿ ಬಜೆಟ್ನಲ್ಲಿ ಮೂರು ಕೋಟಿ ಬಡವರಿಗೆ ಹೊಸ ಮನೆಗಳನ್ನು ನೀಡುವ ಗುರಿ ಹೊಂದಿದ್ದು, ಈ ಯೋಜನೆಯಡಿ BPL CARD ಹೊಂದಿರುವ ಫಲಾನುಭವಿಗಳಿಗೆ ರೂ.2,67,000 ವರೆಗಿನ ಹಣಕಾಸು ನೆರವು ನೀಡಲಾಗುತ್ತದೆ.
ಮನೆ ನಿರ್ಮಾಣಕ್ಕಾಗಿ ಇನ್ನು ಹೆಚ್ಚುವರಿ ಹಣ ಬೇಕಾದರೆ ಕೇಂದ್ರ ಸರ್ಕಾರವು ಕಡಿಮೆ ಬಡ್ಡಿ ದರದಲ್ಲಿ ರೂ.10 ಲಕ್ಷದವರೆಗೆ ಬ್ಯಾಂಕ್ ಸಾಲ(Bank Loan) ನೀಡಲಿದ್ದು, ಈ ಮೂಲಕ ಜನರು ತಾವು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬಹುದು.
ಉಚಿತ ಮನೆಯನ್ನು ಪಡೆಯಲು ಅರ್ಜಿದಾರರು ತಮ್ಮ ಹತ್ತಿರವಿರುವ ಆನ್ಲೈನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು, ಇಲ್ಲವೇ ಮೊಬೈಲ್ ನಲ್ಲಿಯೇ ಅಧಿಕೃತ ವೆಬ್ಸೈಟ್ಗೆ(Official Website) ಭೇಟಿ ನೀಡಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.
ಪಿಎಂ ಉಜ್ವಲ ಯೋಜನೆಯಡಿ ಉಚಿತ ಎಲ್ಪಿಜಿ ಗ್ಯಾಸ್
ಮತ್ತೊಂದೆಡೆ BPL ಕಾರ್ಡ್ ಹೊಂದಿರುವ ಮಹಿಳೆಯರಿಗೆ ಪಿಎಂ ಉಜ್ವಲ ಯೋಜನೆ ಅಡಿ ಉಚಿತ LPG ಗ್ಯಾಸ್ ಕನೆಕ್ಷನ್ ಪಡೆಯಬಹುದು. ಸರ್ಕಾರಿ ಇದರಲ್ಲಿ ಕೇವಲ ಉಚಿತ ಸಿಲಿಂಡರ್ ನೀಡುವುದಲ್ಲದೆ, ಪ್ರತಿ ತಿಂಗಳು ರೂ.300 ಸಬ್ಸಿಡಿ ನೀಡಲಿದೆ.
ಇದರಿಂದ ಫಲಾನುಭವಿಗಳು ಸಿಲೆಂಡರ್ ಬೆಲೆಯನ್ನು ರೂ.500- 600 ರಲ್ಲಿ ಖರೀದಿಸಲು ಸಾಧ್ಯವಾಗುತ್ತದೆ, ಜೊತೆಗೆ ಗ್ಯಾಸ್ ಸ್ಟವ್ ಕೂಡ ಉಚಿತವಾಗಿ ನೀಡಲಾಗುತ್ತದೆ.
ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳು ಕೆಳಗೆ ನೀಡಲಾದ ದಾಖಲಾತಿಗಳನ್ನು ಹೊಂದಿರಬೇಕು.
- BPL RATION CARD
- AADHAR CARD
- BANK PASSBOOK
- INCOME AND CAST CIRTIFICATE
- ಇತ್ತೀಚಿನ ಫೋಟೋ
- ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸಲು ಹತ್ತಿರವಿರುವ ಆನ್ಲೈನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲವೇ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಸೌಲಭ್ಯ ಪಡೆಯಲು ವಿಳಂಬ ಮಾಡದೆ ಅರ್ಜಿ ಹಾಕಿ!
ಈ ಸೌಲಭ್ಯಗಳು BPL ಕುಟುಂಬಗಳಿಗೆ ದೊಡ್ಡ ಉಡುಗೊರೆಯಾಗಿದ್ದು, ಇದರ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಅವಶ್ಯಕ. ಹೀಗಾಗಿ ನಿಮಗೆ ಈ ಸೌಲಭ್ಯಗಳು ಅಗತ್ಯವಿದ್ದರೆ ಈ ಕಲೆ ಅರ್ಜಿ ಸಲ್ಲಿಸಿ ಉಚಿತ ಎಲ್ಪಿಜಿ ಗ್ಯಾಸ್ ಹಾಗೂ ಉಚಿತ ಮನೆ ಸೌಲಭ್ಯ ಪಡೆಯಿರಿ.