Borwell Subsidy: ಸರ್ಕಾರದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು, 4,923 ಬೋರ್ ವೆಲ್ ಕೊರೆಸಲು ಅನುಮತಿ;
ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆಯನ್ನು ಬೆಳೆಯಲು ನೀರಾವರಿ ಸೌಲಭ್ಯವನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಲು ಅಂತರ್ಜಲ ಅಭಿವೃದ್ಧಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಮೂಲಕ 4,923 ಕೊಳವೆ ಬಾವಿಗಳನ್ನು ಕೊರೆಸಲು ಅಧಿಕೃತವಾಗಿ ಅನುಮತಿಯನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2024-25 ನೇ ಸಾಲಿನ ವಿಶೇಷ ಘಟಕ ಯೋಜನೆ ಅಡಿ 3,095 ಮತ್ತು ಬುಡಕಟ್ಟು ಉಪ ಯೋಜನೆ ಅಡಿ 1,828 ಒಟ್ಟು ಎರಡು ಯೋಜನೆ ಸೇರಿ 4.923 ಕೊಳವೆ ಬಾವಿಗಳನ್ನು ಕೊರೆಸಲು ರೈತರ ಜಮೀನಿನಲ್ಲಿ ಕೊರಿಸಲು ಅನುಮತಿ ನೀಡುವುದರ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರದಿಂದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ರಾಜ್ಯದಲ್ಲಿ ನೀರಾವರಿ ವ್ಯವಸ್ಥೆಯನ್ನು ಒದಗಿಸಲು ರೈತರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದ್ದು, ಈ ಕುರಿತು ಒಂದಿಷ್ಟು ಉಪಯುಕ್ತವಾದ ಮತ್ತು ರೈತರಿಗೆ ಅವಶ್ಯಕತೆ ಇರುವ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ಮಾಹಿತಿಯು ಉಪಯುಕ್ತ ಎನಿಸಿದ್ದಲ್ಲಿ, ತಪ್ಪದೇ ನಿಮ್ಮ ಬಳಿ ಇರುವ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ.
Borewell Permission- 4,923 ಕೊಳವೆ ಬಾವಿ ಕೊರೆಸಲು ಅನುಮತಿ:
ದಿನದಿಂದ ದಿನಕ್ಕೆ ಹೆಚ್ಚುತ್ತಿರುವರುವ ತಾಪಮಾನಕ್ಕೆ ಅಂತರ್ಜಲ ಮಟ್ಟವು ರಾಜ್ಯದ ಅನೇಕ ಭಾಗಗಳಲ್ಲಿ ಕುಸಿಯುತ್ತಿದ್ದು ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಬೇಸಿಗೆ ಸಮಯದಲ್ಲಿ ನೀರನ್ನು ಪೂರೈಸಲು ರೈತರು ಹರಸಾಹಸ ಪಡುತ್ತಿದ್ದಾರೆ.
ರೈತರಿಗೆ ಬೋರ್ವೆಲ್ ಕೊರಿಸಲು ಆರ್ಥಿಕವಾಗಿ ಸರ್ಕಾರದಿಂದ ನೆರವು ನೀಡಲು ರಾಜ್ಯ ಸರ್ಕಾರದಿಂದ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು, ಒಟ್ಟು 2024-25 ನೇ ಸಾಲಿನಲ್ಲಿ 4,923 ಕೊಳವೆ ಬಾವಿಗಳನ್ನು ಕೊರೆಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿಯನ್ನು ನೀಡಲಾಗಿರುತ್ತದೆ.
Application Timing-ಯಾವ ಸಮಯದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ?
ಪ್ರತಿ ವರ್ಷ ಗಂಗಾ ಕಲ್ಯಾಣ ಯೋಜನೆಯಡಿ ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಸಾಮಾನ್ಯವಾಗಿ ಸಪ್ಟೆಂಬರ್ ನಿಂದ ನಂಬರ್ ತಿಂಗಳ ಮಧ್ಯದಲ್ಲಿ ರೈತರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ.
Ganga Kalyana Yojane Subsidy-ಗಂಗಾ ಕಲ್ಯಾಣ ಯೋಜನೆಯಡಿ ಎಷ್ಟು ಸಬ್ಸಿಡಿ ನೀಡಲಾಗುತ್ತದೆ?
ವೈಯಕ್ತಿಕ ಕೊಳೆಬಾವಿ ಯೋಜನೆಗೆ ಒಟ್ಟು ಘಟಕದ ವೆಚ್ಚ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ರೂ.4.75 ಲಕ್ಷ ಇದರಲ್ಲಿ ವಿದ್ಯುತ್ ಈ ಕರಣ ಸ್ವಚ್ಛ ಕೊಳವೆಬಾವಿ ರೂ.75,000/-ಗಳನ್ನು ಎಸ್ಕಾಂ ಗಳಿಗೆ ಪಾವತಿಸಲಾಗುತ್ತದೆ.
ಉಳಿದ ಜಿಲ್ಲೆಗಳಿಗೆ ರೂ.3.75 ಲಕ್ಷಗಳು ಇದರಲ್ಲಿ ವಿದ್ಯುತ್ ಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ಹೆಸ್ಕಾಂ ಗಳಿಗೆ ಪಾವತಿಸಲಾಗುವುದು. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000/- ಗಳ ಸಾಲವನ್ನು ಶೆ.4 ರಸ್ಟು ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುತ್ತದೆ.
Documents For Ganga Kalyana Scheme-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
- ರೈತರ ಆಧಾರ್ ಕಾರ್ಡ್ ಜೆರಾಕ್ಸ್
- ಫೋಟೋ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಜಮೀನಿನ ಪಹಣಿ/RTC
- ಹಿಡುವಳಿ ಪ್ರಮಾಣ ಪತ್ರ
- ರೇಷನ್ ಕಾರ್ಡ್ ಜೆರಾಕ್ಸ್
- ಪ್ರಸ್ತುತ ಕೊಳವೆ ಬಾವಿ ಜಮೀನಿನಲ್ಲಿ ಇಲ್ಲದಿರುವ ಕುರಿತು ಪ್ರಮಾಣ ಪತ್ರ
How To Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದ ಸಮಯದಲ್ಲಿ ಅರ್ಹ ರೈತರು ಅಗತ್ಯ ದಾಖಲಾತಿಗಳನ್ನು ಸರಿಪಡಿಸಿಕೊಂಡು ನಿಮ್ಮ ಹತ್ತಿರದ ಬೆಂಗಳೂರು ಒನ್/ ಗ್ರಾಮ ಒನ್ ಕಂಪ್ಯೂಟರ್ ಸೆಂಟ್ ರ್ ಭೇಟಿ ನೀಡಿ ಅರ್ಜಿ ಸಾಲ್ಲಿಸಬೇಕು.