Bhagtalaksmi Bond: ಭಾಗ್ಯಲಕ್ಷ್ಮಿ ಬಾಂಡ್ ಹಣ ಜಮಾ! ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಇಲ್ಲಿದೆ ಸಂಪೂರ್ಣ ಮಾಹಿತಿ.

Bhagtalaksmi Bond: ಭಾಗ್ಯಲಕ್ಷ್ಮಿ ಬಾಂಡ್ ಹಣ ಜಮಾ! ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ, ಇಲ್ಲಿದೆ ಸಂಪೂರ್ಣ ಮಾಹಿತಿ.

2006ರ ರಾಜ್ಯ ಸರ್ಕಾರವು ಭಾಗ್ಯಲಕ್ಷ್ಮಿ ಯೋಜನೆಯಡಿ 2006-07ನೇ ಸಾಲಿನಲ್ಲಿ ಬಾಂಡ್ ಮಾಡಿಸಿದ ಹೆಣ್ಣು ಮಕ್ಕಳಿಗೆ ಬಾಂಡ್ ಹಣವು ಈಗ ಪಕ್ವಗೊಂಡಿದೆ. ಫಲಾನುಭವಿಗಳು ಕೂಡಲೇ ಬಾಂಡ್ ತೆಗೆದುಕೊಂಡು, ಹತ್ತಿರದ ಅಂಗನವಾಡಿಗೆ ಭೇಟಿ ನೀಡಿ ಹಣ ಪಡೆದುಕೊಳ್ಳಬಹುದು.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ, ಜನಿಸಿದ ಹೆಣ್ಣು ಮಗುವಿಗೆ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ 2006 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಆರಂಭಿಸಲಾಯಿತು. ಈಗ 2006-07 ಸಾಲಿನಲ್ಲಿ ಭಾಗ್ಯಲಕ್ಷ್ಮಿ ಮಾಡಿಸಿದ ಹೆಣ್ಣು ಮಗುವಿನ ಬಾಂಡ್ ಈಗ ಪಕ್ವತೆಯನ್ನು (Maturity) ಪಡೆದಿದ್ದು, ಫಲಾನುಭವಿಗಳಿಗೆ ಹಣವನ್ನು ನೀಡಲಾಗುತ್ತಿದೆ. ಆದ್ದರಿಂದ ಫಲಾನುಭವಿಗಳು ಬಾಂಡ್ ತೆಗೆದುಕೊಂಡು ಹತ್ತಿರದ ಅಂಗನವಾಡಿಗೆ ಭೇಟಿ ನೀಡಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಡಿ, ಬೆಂಗಳೂರು ರಾಜ್ಯ ವ್ಯಾಪ್ತಿಯಲ್ಲಿ ಬರುವ, 2006-07 ನೆ ಸಾಲಿನಲ್ಲಿ ಒಟ್ಟು 1,527 ಫಲಾನುಭವಿಗಳು ನೋಂದಣಿಯನ್ನು ಮಾಡಿಕೊಂಡಿದ್ದರು. ಇದೀಗ ನೊಂದಣಿ ಮಾಡಿಸಿಕೊಂಡ ಫಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿರುವುದರಿಂದ, ಎಲ್ಐಸಿ ಯಿಂದ ಪರಿಪಕ್ವತೆ ಮೊತ್ತ (Maturity Amount) ಈಗ ಮಂಜೂರಾಗಿದೆ.

ಅರ್ಜಿ ಸಲ್ಲಿಸಿದ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಹತ್ತಿರದ ಅಂಗನವಾಡಿ ಕೇಂದ್ರಗಳು ಹಾಗೂ ಶಿಶು ಅಭಿವೃದ್ಧಿ, ಬೆಂಗಳೂರು ರಾಜ್ಯ ಯೋಜನಾ ಕಚೇರಿಯಾದ NR ಕಾಲೋನಿ ಇಲ್ಲಿಗೆ ಭೇಟಿ ನೀಡಿ ಸರಿಯಾದ ಮಾಹಿತಿಯನ್ನು ಪಡಿಯಬಹುದು. ಇಲ್ಲವೇ ದೂರವಾಣಿ ಸಂಖ್ಯೆ 080-26601917 ಕರೆ ಮಾಡಿ ಸಂಪರ್ಕಿಸಬಹುದು, ಇಂದು ಬೆಂಗಳೂರು ನಗರ ಜಿಲ್ಲಾ, ಬೆಂಗಳೂರು ರಾಜ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಯೋಜನೆ ವಿಲೀನ:

ಇದೀಗ ಭಾಗ್ಯಲಕ್ಷ್ಮಿ ಯೋಜನೆಯನ್ನು ಸುಕನ್ಯ ಸಮೃದ್ಧಿ ಯೋಜನೆಯೊಂದಿಗೆ ವಿಲೀನ ಮಾಡಲಾಗಿದೆ, ಹೆಣ್ಣು ಮಗುವಿನ ಸ್ಥಾನವನ್ನು ಉನ್ನತಿಕರಿಸುವ ನಿಟ್ಟಿನಲ್ಲಿ ಈಗಲೂ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿರುವ ಮಗುವಿನ ಜನನವನ್ನು ಉತ್ತೇಜಿಸುವ ನಿಟ್ಟಿನಲ್ಲಿ 2006-07 ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ‘ ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು, ಆದರೆ 2020-21 ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆಯ ಸುಖನ್ಯ ಸಮೃದ್ಧಿ ಖಾತೆ ಯೋಜನೆಯ ಮೂಲಕ ಅನುಷ್ಠಾನ ಗೊಳಿಸಲಾಯಿತು.

ಈ ಸದರಿ ಯೋಜನೆಯನ್ನು ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಎಂದು ಮರುನಾಮಕರಣ ಮಾಡಲಾಗಿದೆ, BPL ಕುಟುಂಬದ ಎರಡು ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕವಾಗಿ ರೂ.3,000 ನಂತೆ, 15 ವರ್ಷಗಳವರೆಗೆ ರೂ.45,000 ಗಳನ್ನು ಅಂಚೆ ಇಲಾಖೆಯ ಸುಖನ್ಯ ಸಮೃದ್ಧಿ ಯೋಜನೆ ಅಡಿ ಹೂಡಿಕೆ ಮಾಡಲಾಗುತ್ತದೆ, 21 ವರ್ಷ ಅವಧಿ ಪೂರ್ಣಗೊಂಡ ಬಳಿಕ ಅಂದಾಜು ಪರಿಪಕ್ವ ಮೊತ್ತವು, ರೂ.1.27 ಲಕ್ಷ ನೀಡಲಾಗುತ್ತದೆ. 10ನೇ ತರಗತಿಯ ಉನ್ನತ ಶಿಕ್ಷಣಕ್ಕಾಗಿ ಖಾತೆಯಲ್ಲಿರುವ ಅರ್ಧ ಮೊತ್ತವನ್ನು ಹಿಂತೆಗೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಉಳಿದಂತೆ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಅಳವಡಿಸಿರುವ ಇನ್ನಿತರ ಕಾರ್ಯವಿಧಾನಗಳು ಮುಂದುವರಿಯುತ್ತದೆ.

 

 

 

WhatsApp Group Join Now
Telegram Group Join Now

Leave a Comment

copy
share with your friends.