ಬೆಂಗಳೂರು ಬೈಕ್ ಟ್ಯಾಕ್ಸಿ ಬ್ಯಾನ್ ಪರಿಣಾಮ: ನಾಗರಿಕರಿಗೆ ಆದ ಎದುರಾದ ಸಾಲು ಸಾಲು ಕಷ್ಟಗಳು

ಬೆಂಗಳೂರು ಬೈಕ್ ಟ್ಯಾಕ್ಸಿ ಬ್ಯಾನ್ ಪರಿಣಾಮ: ನಾಗರಿಕರಿಗೆ ಆದ ಎದುರಾದ ಸಾಲು ಸಾಲು ಕಷ್ಟಗಳು

ಬೆಂಗಳೂರು ನಗರದಲ್ಲಿ ಜೂನ್ 16ರಿಂದ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದ್ದು, ನಿತ್ಯ ಪ್ರಯಾಣಿಕರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ದುಬಾರಿ ಆಟೋ ಪ್ರಯಾಣ, ಸಂಚಾರದಲ್ಲಿ ವ್ಯತಿಯಾನ, ಸಮಯದ ನಷ್ಟ ಹಾಗೂ ಹೆಚ್ಚಾದ ದೈನಂದಿನ ಖರ್ಚು ಇವು ಈ ನಿರ್ಣಯದ ಪ್ರಮುಖ ಪರಿಣಾಮಗಳಾಗಿವೆ.

ರಾಪಿಡೋ ಮುಂತಾದ ಬೈಕ್ ಟ್ಯಾಕ್ಸಿ ಆ್ಯಪ್‌ಗಳ ಸೇವೆ ನಿಲ್ಲಿಸಿದ್ದರಿಂದ, ಬಡ ಮತ್ತು ಮಧ್ಯಮ ವರ್ಗದ ಉದ್ಯೋಗಿಗಳು ತೀವ್ರವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಪ್ರತಿದಿನ ಕೆಲಸಕ್ಕೆ ಹೋಗಲು ಈಗ 400-500 ರೂ. ಖರ್ಚು ಮಾಡಬೇಕಾಗಿದೆ. ಈ ಮೊದಲು ಇದೇ ಪ್ರಯಾಣಕ್ಕೆ 80-100 ರೂ. ಸಾಲುತ್ತಿತ್ತು.

ಸಾಮಾನ್ಯವಾಗಿ ಬೈಕ್ ಟ್ಯಾಕ್ಸಿ ಸೇವೆ ವೇಗವಾಗಿ, ಕಡಿಮೆ ಬೆಲೆಗೆ ಗಮ್ಯಸ್ಥಳಕ್ಕೆ ತಲುಪುವ ವಿಶ್ವಾಸ ನೀಡುತ್ತಿತ್ತು. ಆದರೆ ಇದೀಗ ಆಟೋವಾಡರು ಮೀಟರ್ ಹಾಕದೆ, ಎರಡು ಅಥವಾ ಮೂರು ಪಟ್ಟು ಹೆಚ್ಚು ಹಣ ಕೇಳುತ್ತಿದ್ದಾರೆ. ಕೆಲವರು ರಾತ್ರಿ ಸಮಯದಲ್ಲಿ ಸೇವೆ ನೀಡಲು ನಿರಾಕರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜನರ ಬೇಸರ ಸ್ಪಷ್ಟವಾಗಿದೆ. “ಸರಿಯಾದ ರಸ್ತೆ ಇಲ್ಲದೆ, ಪಾದಚಾರಿ ಮಾರ್ಗವಿಲ್ಲದೆ, ಸಾರ್ವಜನಿಕ ಸಾರಿಗೆ ಸಾಕಷ್ಟು ಇಲ್ಲದ ಈ ನಗರದಲ್ಲಿ, ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸೋದೇನು ತಾತ್ವಿಕ ನಿರ್ಧಾರ?” ಎಂದು ಕಿಡಿಕಾರುತ್ತಿದ್ದಾರೆ.

ಈ ನಿರ್ಧಯದಿಂದಾಗಿ ವಾಹನಗಳ ಸಂಖ್ಯೆ ದ್ವಿಗುಣಗೊಂಡಿದ್ದು, ತೀವ್ರ ಟ್ರಾಫಿಕ್ ಉಂಟಾಗಿದೆ. ಬೆಂಗಳೂರಿನ ಜನತೆಗೆ ಬೈಕ್ ಟ್ಯಾಕ್ಸಿ ಸೇವೆಯ ಪುನರ್ ಆರಂಭವೇ ಸರಿಯಾದ ಪರಿಹಾರ ಎಂದು ಹಲವರು ಒತ್ತಾಯಿಸುತ್ತಿದ್ದಾರೆ.

Leave a Comment

WhatsApp Group Join Now
Telegram Group Join Now