Banking: ಈ ಬ್ಯಾಂಕುಗಳು ಪ್ರತಿದಿನ ರೂ.100 ಪಾವತಿಸುತ್ತದೆ, ಅದನ್ನು ಪಡೆದುಕೊಳ್ಳುವುದು ಹೇಗೆ?

Banking: ಈ ಬ್ಯಾಂಕುಗಳು ಪ್ರತಿದಿನ ರೂ.100 ಪಾವತಿಸುತ್ತದೆ, ಅದನ್ನು ಪಡೆದುಕೊಳ್ಳುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಎಲ್ಲಾ ನಾಗರಿಕರಿಗೂ ಬ್ಯಾಂಕಿಂಗ್ ಸೇವೆಗಳು ದೊರೆಯುತ್ತಿದೆ, ಜನರು ಬೇರೆ ಬೇರೆ ಕೆಲಸಗಳಿಗಾಗಿ ಬ್ಯಾಂಕುಗಳಿಗೆ (Banks) ಹೋಗಿ ಬರುತ್ತಾರೆ. ಬ್ಯಾಂಕಿಂಗ್ ಸೇವೆಗಳಲ್ಲಿ ಎಟಿಎಂ ಸೇವೆಗಳು (Atm Services) ಎಲ್ಲರಿಗೂ ಅತ್ಯಂತ ಹತ್ತಿರದ್ಧವಾಗಿದೆ, ದಿನಗಳು ಕಳೆಯುತ್ತಿದ್ದ ಹಾಗೆ ಬ್ಯಾಂಕಿಂಗ್ ಸೇವೆಗಳಲ್ಲಿಯೂ ಗಮನ ಹಾರ ಬದಲಾವಣೆಗಳಾಗಿವೆ, ಅದರಂತೆ ಬ್ಯಾಂಕುಗಳಿಗೆ ಹೋಗದೆ ATM ಮೂಲಕ ಹಣವನ್ನು ತೆಗೆದುಕೊಳ್ಳುವುದು (Withdrawal) ಈಗ ಮಾಮೂಲಿಯಾಗಿದೆ.

WhatsApp Group Join Now
Telegram Group Join Now

ಆದರೆ ಕೆಲವೊಂದು ಬಾರಿ, ನಮ್ಮ ಖಾತೆಯಿಂದ ಹಣವನ್ನು ಕಡಿತಗೊಂಡರು ATM ನಿಂದ ಬಾರದೇ ಇರಬಹುದು, ಇಂತಹ ಸಮಯದಲ್ಲಿ ಬ್ಯಾಂಕುಗಳು ನಮ್ಮ ಖಾತೆಗೆ ನಿಗದಿತ ಸಮಯದೊಳಗೆ ಹಣವನ್ನು ಮರುಪಾವತಿ ಮಾಡಬೇಕು, ಹಣವನ್ನು ಮರುಪಾವತಿ ಮಾಡದಿದ್ದರೆ, ಬ್ಯಾಂಕುಗಳು(Banks) ಖಾತೆದಾರರಿಗೆ ದಂಡವನ್ನು(Fine) ಪಾವತಿಸಬೇಕಾಗುತ್ತದೆ. ನೀವು ಹಣವನ್ನು ATM ನಿಂದ ಹಿಂಪಡೆಯಲು ಪ್ರಯತ್ನಿಸಿದಾಗ, ನಿಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ (Balance) ಇಲ್ಲದಿದ್ದರೆ ವಹಿವಾಟು (Transaction) ವಿಫಲಗೊಳ್ಳುತ್ತದೆ.

ಆದರೆ, ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಕೂಡ ATM ನಿಂದ ಹಣ ಬರದೇ ಇರಬಹುದು, ಇದು ತಾಂತ್ರಿಕ ಕಾರಣಗಳಿಂದ ಸಂಭವಿಸಿದ್ದಲ್ಲಿ ಬ್ಯಾಂಕುಗಳು ಸರಿಯಾದ ಸಮಯದಲ್ಲಿ ಹಣವನ್ನು ಹಿಂತಿರುಗಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಬ್ಯಾಂಕುಗಳು ನಿಮಗೆ ಪ್ರತಿದಿನ ರೂ.100 ದಂಡ(FINE) ತೆರೆ ಬೇಕಾಗುತ್ತದೆ, ಈ ಮೂಲಕವಾಗಿ RBI ಸಪ್ಟೆಂಬರ್ 2019ರಲ್ಲಿ ಸುತ್ತೋಲೆಯನ್ನು ಹೊರಡಿಸಿತ್ತು.

ಬ್ಯಾಂಕುಗಳು ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಹಣವನ್ನು ಮರುಪಾವತಿ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ, ಒಂದು ವೇಳೆ ವಹಿವಾಟು ವಿಫಲವಾದರೆ, Debit ಮಾಡಿದ ಮೊತ್ತವನ್ನು ನಿಗದಿತ ಸಮಯದ ಮೊದಲು ಬ್ಯಾಂಕುಗಳು ಮರುಪಾವತಿ ಮಾಡದಿದ್ದರೆ, ದಂಡವು ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತದೆ. ಬ್ಯಾಂಕುಗಳು(Banks) ವಹಿವಾಟಿನ ಪ್ರಕಾರವನ್ನು ಅವಲಂಬಿಸಿ ದಂಡವನ್ನು ಪಾವತಿಸಬೇಕಾಗಬಹುದು.

RBI ನ ಸುತ್ತೋಲೆಯ ಪ್ರಕಾರ ಎಟಿಎಂ ವಹಿವಾಟು ವಿಫಲವಾದಾಗ, ಹಣವನ್ನು ಕಡಿತಗೊಳಿಸಿದ ಐದು ದಿನಗಳಲ್ಲಿ ಬ್ಯಾಂಕ್ ಹಣವನ್ನು ಹಿಂತಿರುಗಿಸಬೇಕು, ಇಲ್ಲದಿದ್ದರೆ ಖಾತೆದಾರರು ದಿನಕ್ಕೆ ರೂ.100 ಅಲ್ಲದೆ, CARD-TO-CARD ವರ್ಗಾವಣೆ ಅಥವಾ ಡೆಬಿಟ್ ವೈವಾಟಿನ ಸಮಯದಲ್ಲಿ ಫಲಾನುಭವಿಯ ಖಾತೆಗೆ ಹಣ ತಲುಪದೇ ಇದ್ದಾಗ, ಬ್ಯಾಂಕ್ ಎರಡು ದಿನಗಳಲ್ಲಿ ಹಣವನ್ನು ಹಿಂತುರುಗಿಸಬೇಕು. ಅದರ ಈ ನಿಗದಿತ ಸಮಯದಲ್ಲಿ ದಂಡವನ್ನು ಕಟ್ಟಬೇಕಾಗುತ್ತದೆ.

ನಿಮ್ಮ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳದೆ ಇದ್ದಾಗ, ಮತ್ತು ಇನ್ನೊಂದು ಖಾತೆಗೆ ಕ್ರೆಡಿಟ್ ಆಗದೆ ಇದ್ದಾಗ ಬ್ಯಾಂಕಿಗೆ”T+1″ ದಿನಗಳಲ್ಲಿ ವಹಿವಾಟು ಪೂರ್ಣಗೊಳಿಸಬೇಕೆಂದು RBI ನಿರ್ಧರಿಸಿದೆ. ಈ ಅವಧಿಯಲ್ಲಿ ಬ್ಯಾಂಕುಗಳು ಹಣವನ್ನು ಮರುಪಾವತಿ ಮಾಡದಿದ್ದರೆ ದಿನಕ್ಕೆ ರೂ.100 ರಂತೆ ದಂಡ ಪಾವತಿಸಬೇಕು, ಈ ಹೊಸ ನಿಯಮಗಳೊಂದಿಗೆ ಕಾತೆದಾರರು ತಮ್ಮ ವಹಿವಾಟುಗಳನ್ನು ಹೆಚ್ಚು ಎಚ್ಚರಿಕೆಯಿಂದ ಪರಿಶೀಲನೆ ಮಾಡಬೇಕು.

Read more

 

Leave a Comment

WhatsApp Group Join Now
Telegram Group Join Now