ಬ್ಯಾಂಕ್‌ ಆಫ್‌ ಬರೋಡಾ 2500 ಸ್ಥಳೀಯ ಬ್ಯಾಂಕ್‌ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ

ನವದೆಹಲಿ: ಇತ್ತೀಚೆಗೆ ಪದವಿ ಪಡೆದರೂ ಕೂಡ ಉದ್ಯೋಗ ಸಿಗುವುದು ಬಹಳ ಕಷ್ಟವಾಗಿದೆ. ಯುವಕರು ನಿರೋದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದು, ಯಾವುದಾದರೂ ಉದ್ಯೋಗ ಸಿಕ್ಕಿದರೆ ಸಾಕು ಎಂದು ಉದ್ಯೋಗ ಹುಡುಕುತ್ತಿರುತ್ತಾರೆ. ಇದೀಗ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಬ್ಯಾಂಕ್‌ ಆಫ್‌ ಬರೋಡ ಬಂಪರ್‌ ಅವಕಾಶ ನೀಡಿದೆ.
ಭಾರತದಾದ್ಯಂತ ಬ್ಯಾಂಕ್‌ ಆಫ್‌ ಬರೋಡಾ 2500 ಸ್ಥಳೀಯ ಬ್ಯಾಂಕ್‌ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಡ್ರೈವ್‌ ಬ್ಯಾಂಕಿಂಗ್‌ ವಲಯದಲ್ಲಿ ವೃತ್ತಿಪರವಾಗಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದೆ. ಹಾಗಾದ್ರೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದೆ ಓದಿ….
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಸಿಎ, ಐಸಿಡಬ್ಲ್ಯೂಎ, ಎಂಜಿನಿಯರಿಂಗ್‌, ವೈದ್ಯಕೀಯ ಪದವಿ ಪಡೆದವರೂ ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ ಒಂದು ವರ್ಷದ ಬ್ಯಾಂಕಿಂಗ್‌ ಅನುಭವ ಹೊಂದಿರಬೇಕು. ಶೆಡ್ಯೂಲ್ಡ್‌ ಕಮರ್ಷಿಯಲ್‌ ಬ್ಯಾಂಕ್‌ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ನಲ್ಲಿ ಅನುಭವ ಹೊಂದಿರಬೇಕು. ಎನ್‌ಬಿಎಫ್‌ಸಿ, ಸಹಕಾರಿ ಬ್ಯಾಂಕುಗಳು, ಫಿನ್ಟೆಕ್‌ ಕಂಪೆನಿಗಳ ಅನುಭವವನ್ನು ಪರಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ತಮ್ಮ ರಾಜ್ಯದ ಸ್ಥಳೀಯ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು, ಓದಲು ಮತ್ತು ಬರೆಯಲು ಬರಬೇಕು.
ಬ್ಯಾಂಕ್‌ ಆಫ್‌ ಬರೋಡಾ ಸ್ಥಳೀಯ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಬಳಿಕ ಮೊಬೈಲ್‌ ನಂಬರ್‌ ಮತ್ತು ಇಮೇಲ್‌ ಐಡಿ ಬಳಸಿ ನೋಂದಾಯಿಸಿಕೊಳ್ಳಿ, ನಂತರ ಅರ್ಜಿ ಫಾರ್ಮ್‌ ಅನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್‌ ಮಾಡಿ, ಬಳಿಕ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್‌ಟಿ/ಎಸ್‌ಸಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರಿಯಾಯಿತಿ ಇರಬಹುದು. ಬಳಿಕ ಅರ್ಜಿಯ ಪ್ರಿಂಟ್‌ ತೆಗೆದುಕೊಳ್ಳಿ.
ಅರ್ಜಿದಾರರ ಆಯ್ಕೆಯು ಬ್ಯಾಂಕಿಂಗ್‌ ಅನುಭವ, ಶೈಕ್ಷಣಿಕ ಅರ್ಹತೆ ಮತ್ತು ಸಾಕ್ಷಾತ್ಕಾರ ಆಧಾರದ ಮೇಲೆ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಂಳವನ್ನು ಇತರ ನಿಯಮಗಳ ಪ್ರಕಾರ ನೀಡಲಾಗುತ್ತದೆ. ಸೂಕ್ತ ಅರ್ಹತೆ ಮತ್ತೆ ಅನುಭವ ಹೊಂದಿರುವ ಅಭ್ಯರ್ಥಿಗಳು ಜುಲೈ 24 ರೊಳಗೆ ಅರ್ಜಿ ಸಲ್ಲಿಸಬೇಕು.

Leave a Comment