Bank Loan: ಬ್ಯಾಂಕ್ ಲೋನ್ ಸರಿಯಾಗಿ ತೀರಿಸಲಿಕ್ಕೆ ಆಗ್ತಿಲ್ವಾ? ಹಾಗಾದರೆ ಈ ಕೆಲಸ ಮಾಡಿ, ಸಾಲದ ಹೊರೆತಗ್ಗಿಸಿ!

Bank Loan: ಬ್ಯಾಂಕ್ ಲೋನ್ ಸರಿಯಾಗಿ ತೀರಿಸಲಿಕ್ಕೆ ಆಗ್ತಿಲ್ವಾ? ಹಾಗಾದರೆ ಈ ಕೆಲಸ ಮಾಡಿ, ಸಾಲದ ಹೊರೆತಗ್ಗಿಸಿ!

ಜನರು ತಮ್ಮ ವಿವಿಧ ಬೇಡಿಕೆಗಳಿಗೆ, ಹಣದ ಕೊರತೆಯಿಂದ ಸಾಲದ ಮೊರೆ ಹೋಗುತ್ತಾರೆ. ಆದರೆ ನಂತರದ ದಿನಗಳಲ್ಲಿ ತೆಗೆದುಕೊಂಡ ಸಾಲವನ್ನು ತೀರಿಸಲು ತುಂಬಾ ಕಷ್ಟಪಡುತ್ತಾರೆ, ಅಂತೆಯೇ ನೀವು ಬ್ಯಾಂಕಿನಲ್ಲಿ ಸಾಲ ಮಾಡಿ ಅದನ್ನು ತೀರಿಸಲು ಹರಸಾಹಸ ಪಡುತ್ತಿದ್ದೀರಾ? ಹಾಗಾದರೆ ಇನ್ನು ಮುಂದೆ ಆ ಚಿಂತೆ ನಿಮಗೆ ಬೇಡ, ಯಾಕೆಂದರೆ ಸಾಲ ತೀರಿಸಲು ಎಲ್ಲಿದೆ ಸುಲಭ ಉಪಾಯ, ಅದೇನೆಂದರೆ ಲೋನ್ ಸೆಟಲ್ಮೆಂಟ್…!

WhatsApp Group Join Now
Telegram Group Join Now

ಲೋನ್ ಸೆಟಲ್ಮೆಂಟ್ ಅಂದರೆ ಏನು?

ಎಲ್ಲ ವ್ಯಕ್ತಿಗಳು ಬ್ಯಾಂಕಿನಲ್ಲಿ ಸಾಲ(Bank Loan) ಪಡೆದು ಅದನ್ನು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ, ಅಂತಹ ಸಮಯದಲ್ಲಿ ಸಾಲದ ಪರಿಹಾರ ಆಯ್ಕೆಯನ್ನು ಆಯ್ಕೆ ಮಾಡಲಾಗುತ್ತದೆ. ನೀವು ತೆಗೆದುಕೊಂಡು ಸಾಲಕ್ಕೆ ಅದನ್ನು ಮರುಪಾವತಿ(Repayment) ಮಾಡಲು ಸಾಧ್ಯವಾಗದಿದ್ದರೆ ಈ ವಿಧಾನವು ಪೂರ್ಣ ಸಾಲಕ್ಕಿಂತ(Loan) ಸ್ವಲ್ಪ ಕಡಿಮೆ ಹಣವನ್ನು ಸಂಗ್ರಹಿಸುವ ಆಯ್ಕೆಯನ್ನು ಹೊಂದಿದೆ. ನೀವು ಸಾಲದ ಪರಿಹಾರ ಆಯ್ಕೆಯನ್ನು ಆಯ್ದುಕೊಂಡರೆ, ನೀವು ಪಾವತಿಸಬೇಕಾದ ಸಾಲದ ಮೊತ್ತವು ಕೂಡ ಕಡಿಮೆಯಾಗುತ್ತದೆ.

ವೈಯಕ್ತಿಕ ಸಾಲವನ್ನು ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಅವರ ಆದಾಯ (Income) ಮತ್ತು ಸಿಬಿಲ್ ಸ್ಕೋರ್ (Cibil Score) ಗಳ ಆಧಾರವನ್ನು ತೆಗೆದುಕೊಂಡು ಅವರಿಗೆ ಸಾಲವನ್ನು ನೀಡುತ್ತದೆ. ನಿಮಗೆ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದಿದ್ದಲ್ಲಿ, ಸಾಲದ ಸೆಟಲ್ಮೆಂಟ್ ಆಯ್ಕೆಯನ್ನು ಆರಿಸಿಕೊಳ್ಳಲು ಅವಕಾಶವಿದೆ, ಅಂದರೆ ನೀವು ಸಾಲವನ್ನು ಪೂರ್ಣವಾಗಿ ಪಾವತಿಸದಿದ್ದರೂ, ಬಾಕಿ ಮೊತ್ತದ ಶೇಕಡವಾರು ಮೊತ್ತವನ್ನು ಕಡಿಮೆ ಮಾಡಿ, ಉಳಿದ ಮೊತ್ತವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.

ನೀವು ಲೋನ್ ಸ್ಮೆಟಲ್ಮೆಂಟ್ ಆರಿಸಿಕೊಂಡರೆ ಪ್ರಯೋಜನಗಳ ಜೊತೆಗೆ, ಗಂಭೀರ ನಷ್ಟಗಳು ಕೂಡ ಇವೆ. ಹೀಗೆ ಮಾಡುವುದರಿಂದ ನಿಮ್ಮ CIBIL ಸ್ಕೋರ್ ಕಡಿಮೆಯಾಗುತ್ತದೆ, ಇದರ ಜೊತೆಗೆ ನಿಮಗೆ ಭವಿಷ್ಯದಲ್ಲಿ ಸಾಲ ಪಡೆಯುವುದು ಕೂಡ ಕಷ್ಟವಾಗುತ್ತದೆ.

ಲೋನ್ ಸೆಟಲ್ಮೆಂಟ್ ಪಡೆಯುವುದು ಹೇಗೆ?

ಮೊದಲು ನೀವು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರಬೇಕು, ನೀವು ಎಷ್ಟು ಸಾಲವನ್ನು ನಿಭಾಯಿಸಬಹುದು ಎನ್ನುವುದನ್ನು ಮೊದಲು ನಿರ್ಧರಿಸಿ, ನಂತರ ಎರವಲು ಪಡೆಯುವ ಬ್ಯಾಂಕ್(Bank) ಅನ್ನು ಸಂಪರ್ಕಿಸಿ ಮತ್ತು ನಿಮ್ಮ ಹಣಕಾಸಿನ ಸ್ಥಿತಿಯನ್ನು ಅವರಿಗೆ ವಿವರಿಸಿ, ನೀವು ಎಷ್ಟು ಪ್ರಮಾಣದ ಸಾಲ (Loan) ಮರುಪಾವತಿ ಮಾಡಬೇಕು ಮತ್ತು ಪ್ರಸ್ತುತವಾಗಿ ನೀವು ಎಷ್ಟೋ ಪಾವತಿಸಬಹುದು ಎಲ್ಲವನ್ನು ಚರ್ಚಿಸಿ.

 

 

Leave a Comment

WhatsApp Group Join Now
Telegram Group Join Now