Annabhagya Scheme: ಅನ್ನಭಾಗ್ಯ ಯೋಜನೆಯ ಹಣ ಜಮಾ! ಅಕೌಂಟ್ ಚೆಕ್ ಮಾಡಿಕೊಳ್ಳಿ…

Annabhagya Scheme: ಅನ್ನಭಾಗ್ಯ ಯೋಜನೆಯ ಹಣ ಜಮಾ! ಅಕೌಂಟ್ ಚೆಕ್ ಮಾಡಿಕೊಳ್ಳಿ…

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ನೀಡಲು ಸರಕಾರವು ಮುಂದಾಗಿತ್ತು. ಆದರೆ ದೇಶದಲ್ಲಿ ಅಕ್ಕಿಯ ಕೊರತೆಯಿಂದಾಗಿ ಈ ಯೋಜನೆಯಲ್ಲಿ ಸಣ್ಣ ಬದಲಾವಣೆಯನ್ನು ಮಾಡಲಾಗಿದ್ದು, 5 ಕೆ.ಜಿ ಅಕ್ಕಿಯನ್ನು ವಿತರಿಸಿ ಉಳಿದ 5 ಕೆಜಿ ಅಕ್ಕಿಯ ಬದಲಾಗಿ ನಗದು ಸಹಾಯ ನೀಡಲಾಗುತ್ತಿದೆ.

WhatsApp Group Join Now
Telegram Group Join Now

680 ರೂಪಾಯಿ ಹಣ ಖಾತೆಗೆ ಜಮಾ:

ಅನ್ನಭಾಗ್ಯ ಯೋಜನೆಯಡಿ ಅಂಚಾರ್ಯ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಪ್ರತಿ ಕೆಜಿಗೆ ರೂ.34 ದರದಲ್ಲಿ 5 ಕೆಜಿ ಅಕ್ಕಿಯ ಬದಲು ರೂ.170 ನಗದನ್ನು ನೀಡಲಾಗುತ್ತಿದೆ, ಹುಟ್ಟು ನಾಲ್ಕು ತಿಂಗಳ ಹಣ ರೂ.680 ಜನವರಿ 23 ರಿಂದ ಫಲಾನುಭವಿಗಳ ಖಾತೆಗೆ ಹಂತ ಹಂತವಾಗಿ ಜಮಾ ಆಗುತ್ತಿದೆ.

ಹಣ ವರ್ಗಾವಣೆಯ ಪ್ರಕ್ರಿಯೆ:

ಈ ಯೋಜನೆಯ ಹಣ ಪಡಿತರ ಚೀಟಿಯಲ್ಲಿ ನೋಂದಾಯಿಸಿದ ಪ್ರಮುಖ ವ್ಯಕ್ತಿಯ ಬ್ಯಾಂಕ್ ಖಾತೆಗೆ ನೇರವಾಗಿ (DBT) ವರ್ಗಾವಣೆ ಆಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಹಣವು ಹಂತ ಹಂತವಾಗಿ ಜಮಾ ಆಗುತ್ತಿದೆ.

ಹಣ ಜಮಾ ಆಗಿದೆ ಎಂದು ಪರೀಕ್ಷಿಸಬಹುದು ಹೇಗೆ?

https://ahara.karnataka.gov.in/

ಅನ್ನಭಾಗ್ಯ ಯೋಜನೆಯ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ ಎಂದು ಪರಿಶೀಲಿಸುವುದು ಮೇಲೆ ನೀಡಿದ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಮಾಹಿತಿಯನ್ನು ಪಡೆಯಬಹುದು.

ಹಣವು ಜಮಾ ಆಗಿದಿಯಾ ಎಂದು DBT ಅಪ್ಲಿಕೇಶನ್ ಮೂಲಕವೂ ಪರಿಶೀಲನೆ ಮಾಡಬಹುದು, ಇದರ ಮೂಲಕ ನೀವು ಹಣ ವರ್ಗಾವಣೆ ಆಗಿದೆಯಾ ಎನ್ನುವುದನ್ನು ಸುಲಭವಾಗಿ ಪರಿಶಿಸಬಹುದು.

 

Leave a Comment

WhatsApp Group Join Now
Telegram Group Join Now