AI SCHOLARSHIP: 75,000 ರೂ. ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸುವುದು ಹೇಗೆ?
AI Scholarship: ಡಿಪ್ಲೋಮ, ಪಾಲಿಟೆಕ್ನಿಕ್, ಐಟಿಐ, ಜನರಲ್ ಗ್ರಾಜುಯೇಟ್ ಓದುತ್ತಿರುವ ವಿದ್ಯಾರ್ಥಿಗಳಿಗೆ, 2024 25ನೇ ಸಾಲಿನ ಅಲ್ಸ್ತಮ್ ಇಂಡಿಯಾ ಸ್ಕಾಲರ್ಶಿಪ್ ನೀಡಲಾಗುತ್ತಿದ್ದು, ಆಸಕ್ತಿ ಹೊಂದಿರುವ ಅರ್ಹಬ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಬಹುದು.
ಭಾರತದಾದ್ಯಂತ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸುವ ಸಲುವಾಗಿ ಮತ್ತು ಓದನ್ನು ಅರ್ಧಕ್ಕೆ ನಿಲ್ಲಿಸಿದಂತೆ ಆರ್ಥಿಕ ಸಹಾಯ ಮಾಡುವ ಗುರಿಯೊಂದಿಗೆ ಈ ವಿದ್ಯಾರ್ಥಿ ವೇತನವನ್ನು ಆಲ್ಸ್ಟಮ್ ಇಂಡಿಯಾ ಕಡೆಯಿಂದ ನೀಡಲಾಗುತ್ತಿದೆ.
2024 25ನೇ ಆರ್ಥಿಕ ವರ್ಷದಲ್ಲಿ ಪಾಲಿಟೆಕ್ನಿಕ್, ಡಿಪ್ಲೋಮೋ, ಐ ಟಿ ಐ, ಜನರಲ್ ಗ್ರಾಜುಯೇಷನ್ ಅಥವಾ ಸ್ಟೆಮ ಕೋರ್ಸ್ ಗಳಲ್ಲಿ ವೃತ್ತಿಪರ ಗ್ರಾಜುಯೇಷನ್ ಅಭ್ಯಾಸವನ್ನು ನಡೆಸುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.6,00,000 ಕಿಂತಾ ಕಡಿಮೆ ಅಥವಾ ಅದಕ್ಕೆ ಸಮನಾಗಿರಬೇಕು.
- ಅರ್ಜಿದಾರರು ತಮ್ಮ ಶೈಕ್ಷಣಿಕ ವರ್ಷದಲ್ಲಿ ಸೆಮಿಸ್ಟರ್ ನಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.
- ಮಾದೇಪುರ (ಮಧ್ಯ ಪ್ರದೇಶ್), ಕೊಯಮತ್ತೂರ್ (ತಮಿಳುನಾಡು), ಶ್ರೀ ಸಿಟಿ (ಆಂಧ್ರಪ್ರದೇಶ) ಅಥವಾ ವಡೋದರ (ಗುಜರಾತ್ ದಲ್ಲಿ ನಿರ್ದಿಷ್ಟ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಈ ಸ್ಕಾಲರ್ಶಿಪ್ ಲಭಿಸುತ್ತದೆ.
ಎಷ್ಟು ಸ್ಕಾಲರ್ ಶಿಪ್ ಲಭ್ಯ?:
- ರೂ.75,000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
- 04-05-2025
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಮೇಲೆ ನೀಡಲಾದ ಅಧಿಕೃತ ವೆಬ್ಸೈಟ್ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.