Agriculture Loan: ತೆಲಂಗಾಣದಲ್ಲಿ ರೈತರ ಸಾಲ ಮನ್ನಾ! ಕರ್ನಾಟಕದಲ್ಲಿಯೂ ಈ ಯೋಜನೆ ಜಾರಿಗೆ ಬರುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.
ತೆಲಂಗಾಣ ರಾಜ್ಯದಲ್ಲಿ 5ನೇ ಕಂತಿನ ರೈತ ಸಾಲವು ಮನ್ನಾ ಎನ್ನುವ ಸುದ್ದಿಯು ಎಲ್ಲಾ ಕಡೆ ಹರಿದಾಡುತ್ತಿದೆ, ಆ ರಾಜ್ಯದಲ್ಲಿ ಬಹುನಿರೀಕ್ಷಿತ ರೈತರ ಸಾಲ ಮನ್ನಾ ಹಲವು ಯೋಜನೆಗಳಲ್ಲಿ ಜಾರಿಯಾಗಿದ್ದು, ಕೃಷಿ ಸಮುದಾಯಗಳಿಗೆ ಕೊಂಚ ನೆಮ್ಮದಿ, ಸಿಕ್ಕಿದಂತಾಗಿದೆ. ತೆಲಂಗಾಣದಲ್ಲಿ ಈ ವರೆಗೆ 4 ಕಂತುಗಳಲ್ಲಿ ಮನ್ನಾ ಬಿಡುಗಡೆಯಾಗಿದ್ದು, ನಾಲ್ಕನೇ ಕಂತಿನ ಮೊತ್ತ ರೂ.2,747.67 ಕೋಟಿ. ಕರ್ನಾಟಕದಲ್ಲಿ ಈ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದ ಹಾಗೆ ಈ ಕೆಳಗಿನ ಲೇಖನದ ಮೂಲಕ ತಿಳಿಯೋಣ.
ತೆಲಂಗಾಣದಲ್ಲಿ ಭರವಸೆ ನೀಡಿದ ನೆರವಿಗಾಗಿ ಇನ್ನು ಹಲವಾರು ರೈತರು ಕಾಯುತ್ತಿದ್ದಾರೆ, ಸಾಲ ಮನ್ನಾ ಯೋಜನೆಗೆ ಕೆಲವು ರೈತರು ಅರ್ಹರಾಗಿದ್ದಾರೆ- ವಿಶೇಷವಾಗಿ ಒಂದೇ ಪಡಿತರ ಚೀಟಿಯ ಹೊಂದಿರುವ ಕುಟುಂಬಗಳು, ಸಾಲ ಮನ್ನಾ ಇನ್ನು ಬಂದಿಲ್ಲ ಎಂದು ಅನೇಕ ಸದಸ್ಯರು ಭಾವಿಸುತ್ತಿದ್ದಾರೆ.
ಮುಂಬರುವ 5ನೇ ಕಂತಿನಲ್ಲಿ ಬಾಕಿ ಉಳಿದಿರುವ ಸಾಲ ಮನ್ನಾಕ್ಕೆ ಪರಿಹಾರ ಸಿಗಲಿದೆ ಎಂದು ಅಲ್ಲಿನ ಕೃಷಿ ಇಲಾಖೆಯ ಅಧಿಕಾರಿಗಳು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ, ಈ ಹಂತಕ್ಕೆ ಉಳಿದಿರುವ ರೈತರ ಕೂಡ ಅರ್ಹರಾಗಲಿದ್ದಾರೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಯೋಜನೆಯು ಅನುಷ್ಠಾನದ ಅಂತಿಮ ಹಂತವನ್ನು ತಲುಪುತ್ತದೆ ಎಂದು ಖಚಿತಪಡಿಸುತ್ತದೆ.
ಬಹುನಿರೀಕ್ಷಿತ ಪ್ರಕ್ರಿಯೆಯಾಗಿದ್ದು, ಪೂರ್ಣಗೊಳ್ಳಲು ಸರ್ಕಾರವು ಶೀಘ್ರವೇ ಹಣ ಬಿಡುಗಡೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಎಲ್ಲಾ ರೈತರಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ, ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಅಧಿಕೃತ ಘೋಷಣೆಯು ಇವರಿಗೆ ಸಲ್ಲಿಕೆಯಾಗಿಲ್ಲ. ಸಿದ್ದರಾಮಯ್ಯನವರು ರೈತರ ಸಾಲ ಮನ್ನಾ ವಿಚಾರವನ್ನು ಯಾವುದೇ ಸುದ್ದಿಗೋಷ್ಠಿಯಲ್ಲಿ ಪ್ರಚಾರ ಮಾಡಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯವು ಇದೇ ರೀತಿಯ ಯೋಜನೆಗಳನ್ನು ಕೈಗೊಳ್ಳಲಿದೆ ಎನ್ನುವ ಭರವಸೆಯು ನಮ್ಮಲ್ಲಿದೆ, ಮುಂದಿನ ದಿನಗಳ ಅಪ್ಡೇಟ್ ಗಾಗಿ ಈ ರೀತಿಯ ಸುದ್ದಿಗಳನ್ನು ಓದುತ್ತಿರಿ.