Agriculture Loan: ರೈತರಿಗೆ ಸಿಹಿ ಸುದ್ದಿ ನೀಡಿದ RBI! ಕೃಷಿ ಸಾಲ;
ಭಾರತೀಯ ರಿಸರ್ವ್ ಬ್ಯಾಂಕ್(RBI) ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಹೊಸ ಘೋಷಣೆಯನ್ನು ಮಾಡಿದೆ, ಕೃಷಿ ಸಾಲದ ಮೇಲಿನ ಮಿತಿಯನ್ನು ಏರಿಕೆ ಮಾಡಿದ್ದು, ಜನವರಿ 1 2025 ರಿಂದ ಈ ಹೊಸ ಘೋಷಣೆಯ ಸಹಾಯಧನವನ್ನು ಪಡೆಯಬಹುದು. RBI ನ ಹೊಸ ಘೋಷಣೆಯಿಂದ ದೇಶದ ಸುಮಾರು ಶೆ.86 ರಷ್ಟು ಚಿಕ್ಕ ರೈತರಿಗೆ ಅನುಕೂಲವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಆರ್ ಬಿ ಐ ನ ಹೊಸ ಗೌರ್ನರ್ ಆದ ಸಂಜಯ್ ಮಲ್ಹೊತ್ರಾ ಅವರು ಮಾಡಿದ ಮೊದಲ ಘೋಷಣೆಯೇ ರೈತರಿಗೆ ಸಂಬಂಧಪಟ್ಟದ್ದಾಗಿದೆ. ಸಣ್ಣ ರೈತರಿಗೆ ಸುಲಭವಾಗಿ ಹೆಚ್ಚಿನ ಮತದ ಕೃಷಿ ಸಾಲವು ಲಭ್ಯವಾಗುವಂತೆ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಉತ್ತೇಜಿನ ನೀಡಲು ಮತ್ತು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
RBI ನ ಹೊಸ ಘೋಷಣೆಯ ವಿವರಗಳು;
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೈತರಿಗೆ ಅಡವು ರಹಿತ ಕೃಷಿ ಸಾಲದ ಮಿತಿಯನ್ನು ರೂ.1.6 ಲಕ್ಷ ಗಳಿಂದ 2 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದೆ, ಈ ಹೊಸ ಘೋಷಣೆಯು 1 ಜನವರಿ 2025 ರಿಂದ ಜಾರಿಗೆ ಬರಲಿದೆ ಎಂದು RBI ಹೇಳಿದೆ.
RBIನ ಈ ಹೊಸ ಘೋಷಣೆಯಿಂದಾಗಿ ಸಣ್ಣ ರೈತರಿಗೆ ಅನುಕೂಲವಾಗಲಿದ್ದು, ಕಡಿಮೆ ಮೊತ್ತದ ಸಾಲಕ್ಕೆ ಯಾವುದೇ ಜಮೀನು, ಮನೆ ಅಡವಿಡುವ ಪ್ರಶ್ನೆ ಬರುವುದಿಲ್ಲ, ಇದರಿಂದಾಗಿ ಅತಿ ಸಣ್ಣ ಮತ್ತು ಸಣ್ಣ ರೈತರಿಗೆ ಸಹಾಯವಾಗಲಿದೆ, ಜೊತೆಗೆ ಕೃಷಿ ಚಟುವಟಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ.
ಆರ್ ಬಿ ಐ ದೇಶದ ರೈತರಿಗೆ ಅನುಕೂಲ ಮಾಡಿಕೊಡಲು ಕಾಲದಿಂದ ಕಾಲಕ್ಕೆ ಕೃಷಿ ಸಾಲದ ಮೇಲಿನ ಮಾರ್ಗಸೂಚಿಯನ್ನು ಪರಿಷ್ಕಣೆ ಮಾಡುತ್ತಿದೆ, ಅಡವು ರಹಿತ ಕೃಷಿ ಸಾಲದ ಮಿತಿಯ ಏರಿಕೆಯಿಂದಾಗಿ ಶೇಕಡ. 86 ರಷ್ಟು ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿಕೆಯನ್ನು ನೀಡಿದೆ.
RBI ನ ಆ ದಿನದಲ್ಲಿರುವ ಬ್ಯಾಂಕುಗಳಿಗೆ ಕೃಷಿ ಸಾಲದ ವಿಚಾರದಲ್ಲಿ ಮಾರ್ಗಸೂಚಿ ಬದಲಾವಣೆ ಮಾಡಿರುವ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಎಂದು ಹೇಳಿಕೆಯನ್ನು ನೀಡಿದೆ, ದೇಶದ ಪ್ರತಿಯೊಂದು ರೈತರಿಗೂ ಈ ಮಾಹಿತಿಯು ತಲುಪಬೇಕು, ಆರ್ ಬಿ ಐ ನ ಹೊಸ ಘೋಷಣೆಯ ವಿಚಾರವನ್ನು ಎಲ್ಲರಿಗೂ ತಲುಪಿ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು RBI ಹೇಳಿಕೆಯನ್ನು ನೀಡಿದೆ.
ಮುಂದಿನ ದಿನಮಾನಗಳಲ್ಲಿ ಕಿಸಾನ್ ಕ್ರೇಟ್ ಕಾರ್ಡ್ ಮೇಲಿರುವ ಸಾಲದ ಮಿತಿಯನ್ನು ಕೂಡ ಏರಿಕೆ ಮಾಡುವ ಕುರಿತು RBI ಸುಳಿವನ್ನು ನೀಡಿದೆ, ಇದರಿಂದಾಗಿ ಕೃಷಿ ವಲಯದ ಮೇಲಿನ ಹೂಡಿಕೆಯು ಹೆಚ್ಚಾಗಲಿದ್ದು ಕೃಷಿ ಚಟುವಟಿಕೆಯು ಸುಗಮವಾಗಿ ನಡೆಯಲಿದೆ.
ಇದಲ್ಲದೆ ಮಾರ್ಪಡಿಸಿರುವ ಬಡ್ಡಿ ಸಹಾಯಧನ ಯೋಜನೆಯಡಿ ರೈತರಿಗೆ 3 ಲಕ್ಷದ ತನಕ ಶೇಕಡ 4ರ ಬಡ್ಡಿ ದರದಲ್ಲಿ ಸಾಲ ದೊರೆಯಲಿದೆ, ಈ ರೀತಿಯಾಗಿ ಕೃಷಿಗೆ ಉತ್ತೇಜನ ನೀಡಿದರೆ ಗ್ರಾಮೀಣ ಪ್ರದೇಶದಲ್ಲಿರುವ ಜನರ ಜೀವನ ಮಟ್ಟವು ಆರ್ಥಿಕವಾಗಿ ಸುಧಾರಿಸಲಿದೆ, ಇದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ.