Adike: ಅಡಿಕೆ ಬೆಳೆಗಾರರಿಗೆ ಸಿಕ್ತು, ಗುಡ್ ನ್ಯೂಸ್ ಇಲ್ಲಿದೆ ಸಂಪೂರ್ಣ ಮಾಹಿತಿ;
ರಾಜ್ಯ ಸರ್ಕಾರದಿಂದ ಈಗ ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಮಹತ್ವದ ಸುದ್ದಿ ಎಂದು ದೊರಕಿದೆ. ಕರ್ನಾಟಕ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಡಿಕೆ ನೇರ ಖರೀದಿಗೆ ಕಡಿವಾಣ ಹಾಕಲಿದೆ. ಇದರಿಂದಾಗಿ ಸಹಕಾರಿ ಸಂಘಗಳಿಗೆ ಅಡಿಕೆ ಖರೀದಿ ಮಾಡಲು ಬೆಂಬಲ ದೊರೆಯಲಿದ್ದು, ಮ್ಯಾಮ್ ಕೋಸ್, ಕ್ಯಾಮ್ಕೋ ನಂತಹ ಸಂಸ್ಥೆಗಳಲ್ಲಿ ಅಡಿಕೆ ಉತ್ತಮ ದರಕ್ಕೆ ಮಾರಾಟವಾಗಲಿದೆ, ಇದರಿಂದಾಗಿ ರೈತರಿಗೆ ಉತ್ತಮ ಬೆಲೆ ಸಿಕ್ಕಿ ಸಹಾಯವಾಗಲಿದೆ.
ಸಚಿವರು ಎಪಿಎಂಸಿ ಅಧಿಕಾರಿಗಳಿಗೆ ಅಡಿಕೆಯಲ್ಲಿ ನೇರ ಖರೀದಿ ಮೂಲಕ ಸಂಗ್ರಹವಾಗುವ ಕ್ಯಾಂಪ್ಕೋ ಮತ್ತು ಸೆಸ್, ಮ್ಯಾಮ್ ಕೋಸಿನಂತಹ ಸಂಸ್ಥೆಗಳಲ್ಲಿ ಅಡಿಕೆ ಖರೀದಿ ಮೂಲಕ ಸಂಗ್ರಹವಾಗುವ ಸೆಸ್ ಕುರಿತು ವರದಿಯನ್ನು ನೀಡುವಂತೆ ಸೂಚನೆಯನ್ನು ನೀಡಿದ್ದಾರೆ. APMS ಯಲ್ಲಿ ಅಡಿಕೆ ನೇರ ಖರೀದಿಗೆ ತಡೆ ಬಿದ್ದರೆ ಮ್ಯಾಮ್, ಕ್ಯಾಂಪ್ಕೋ ಖರೀದಿ ಹೆಚ್ಚಾಗಲಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಶಾಸಕರಾದ ಅರಗ ಜ್ಞಾನೇಂದ್ರ ಅವರು, ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಸಹಕಾರ ಸಂಘಗಳ ಮುಖಂಡರು ಬೆಂಗಳೂರಿನಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಭೇಟಿ ಮಾಡಿದರು, ವಿವಿಧ ವಿಚಾರಗಳ ಕುರಿತು ಚರ್ಚೆಯನ್ನು ನಡೆಸಿದರು. ಆಗ ಅಲ್ಲಿನ ಸಚಿವರು ಎಪಿಎಂಸಿಗಳಲ್ಲಿ ನೇರ ಅಡಿಕೆ ಖರೀದಿಗೆ ಖಾಸಗಿ ಕಡಿವಾಣವನ್ನು ಹಾಕಲಾಗುತ್ತದೆ ಎಂದು ಭರವಸೆಯನ್ನು ನೀಡಿದ್ದಾರೆ.
ಖಾಸಗಿ ಎಪಿಎಂಸಿ ಬಂದ್?
ಸಚಿವರ ಜೊತೆಗೆ ಸಭೆಯಲ್ಲಿ ಮಾತನಾಡಿದ ಸಾಗರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಖಾಸಗಿ ಎಪಿಎಂಸಿಗಳನ್ನು ಬಂದ್ ಮಾಡಬೇಕು ಎಂದು ಸೂಚಿಸಿದ್ದಾರೆ.
ಹೊಸ ಖಾಸಗಿ ಎಪಿಎಂಸಿ ತೆರೆಯಲು ಸರ್ಕಾರವು ಯಾವುದೇ ಅವಕಾಶವನ್ನು ನೀಡಬಾರದು ಎಂದು ಮನವಿಯನ್ನು ಸಲ್ಲಿಕೆ ಮಾಡಿದರು. ಸಚಿವರು ಖಾಸಗಿ ಎಪಿಎಂಸಿ ಗಳಿಗೆ ಯಾವುದೇ ಕಾರಣಕ್ಕೂ ಅವಕಾಶವನ್ನು ನೀಡುವುದಿಲ್ಲ, ಸರ್ಕಾರದ ಎಪಿಎಂಸಿಗಳನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸಿ ಎಲ್ಲ ರೈತರಿಗೆ ಮೂಲ ಸೌಕರ್ಯ ಒದಗಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಹಲವಾರು ಖಾಸಗಿ ಎಪಿಎಂಸಿ ಗಳಲ್ಲಿ ಕೃಷಿಯೇತರ ವಹಿವಾಟು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಸ್ಟೀಲ್ ವಿತರಕರು, ಕಿರಾಣಿ, ಸಿಮೆಂಟ್, ಪ್ಲಾಸ್ಟಿಕ್ ವ್ಯಾಪಾರಿಗಳು ಇದ್ದಾರೆ. ಎಪಿಎಂಸಿ ಸಂಪೂರ್ಣ ಕೃಷಿ ವಹಿವಾಟಿಗೆ ಮಾತ್ರ ಸೀಮಿತವಾಗಿರಬೇಕು, ಇದಕ್ಕಾಗಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ, ಎಂದು ಭರವಸೆ ನೀಡಿದರು.
ಅಡಿಕೆ ಖರೀದಿಯಲ್ಲಿ ತೆರಿಗೆ ವಂಚನೆ ಮಾಡುವುದನ್ನು ತಡೆಯಲು ಕ್ರಮ!
ಅಡಿಕೆ ಖರೀದಿ ಮಾಡುವ ಕೆಲವು ವರ್ತಕರು ತೆರಿಗೆ ವಂಚನೆಯನ್ನು ಮಾಡುವುದನ್ನು ತಡೆಯಲು ವಿಚಕ್ಷಣದಳವನ್ನು ರಚನೆ ಮಾಡಲಾಗಿದೆ, ಇದಕ್ಕಾಗಿ 4 ಚೆಕ್ ಪೋಸ್ಟ್ಗಳನ್ನು ತೆರೆಯಲಾಗುತ್ತದೆ, ಅಡಿಕೆ ದಾಸ್ತಾನು ಮಾಡುವ ಗೋದಾವುಗಳ ಬಾಡಿಗೆಯನ್ನು ಶೇಕಡ 40ರಷ್ಟು ಕಡಿಮೆ ಮಾಡಲಾಗಿದೆ, ಎಪಿಎಂಸಿಗೆ ಮಾಹಿತಿ ಇಲ್ಲವಾದರೆ ಬಾಡಿಗೆ ತರದ ಕುರಿತು ಇನ್ನೊಮ್ಮೆ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಪಿಎಂಸಿಯಲ್ಲಿ ನೇರ ಖರೀದಿಗೆ ಕಡಿವಾಣ ಹಾಕಿದರೆ ರೈತರಿಗೆ ಅನುಕೂಲ!
ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಯುವ ಹಲವಾರು ರೈತರು ಅಡಿಕೆಯನ್ನು ನೇರವಾಗಿ ಮ್ಯಾಮ್ ಕೊಸ್, ಕಕ್ಯಾಂಪ್ಕೋ ಗೆ ಹಾಕುತ್ತಾರೆ ಆದರೆ ಎಪಿಎಂಸಿಯಲ್ಲಿ ವರ್ತಕರು ನೇರವಾಗಿ ಖರೀದಿ ಮಾಡುವುದರಿಂದ ಮ್ಯಾಮ್ ಕೋಸ, ಕ್ಯಾಂಪ್ಕೋ ಸಿನಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ. ಈಗ ಎಪಿಎಂಸಿಯಲ್ಲಿ ನೇರ ಖರೀದಿಗೆ ಕಡಿವಾಣವನ್ನು ಹಾಕಿದ್ದರೆ ರೈತರಿಗೆ ಅನುಕೂಲವಾಗಲಿದೆ.