Aadhar: ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ

Aadhar: ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ

Aadhar Update: ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಎಷ್ಟು ಪ್ರಮುಖವಾದ ದಾಖಲೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ನಮ್ಮ ದೈನಂದಿನ ವ್ಯವಹಾರಿಕ ಚಟುವಟಿಕೆಗಳಲ್ಲಿ ಅನೇಕ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಆಧಾರ್ ಕಾರ್ಡ್ (Aadhar Card) ಕಡ್ಡಾಯವಾಗಿದೆ. ಚಿಕ್ಕ ಮಗುವನ್ನು ಶಾಲೆಗೆ ದಾಖಲಾತಿ ಮಾಡಿಸುವುದರಿಂದ ಹಿಡಿದು, ವಯೋ ವೃದ್ಧರು ತಮ್ಮ ಪೆನ್ಷನ್ ಹಣ ಪಡೆಯುವವರಿಗೆ, ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗವನ್ನು ಬಯಸುವಾಗ ಆಧಾರ್(Aadhar) ಕಾರ್ಡನ್ನು ಗುರುತಿನ ಚೀಟಿಯಾಗಿ ಬಳಸಲಾಗುತ್ತದೆ.

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಭಾರತದ ಪ್ರಸಿದ್ಧ ಗುರುತಿನ ಪ್ರಾಧಿಕಾರ(UIDAI) ಸಂಸ್ಥೆಯು 12 ಅಂಕಿಯುಳ್ಳ ಈ ದಾಖಲೆ ಪತ್ರವನ್ನು ನೀಡಿದೆ, ದಿನ ಕಳೆದಂತೆ ಕಾಲಕ್ಕೆ ಅನುಗುಣವಾಗಿ ಸರ್ಕಾರದ ಕಡೆಯಿಂದ ಆಧಾರ್ ಕಾರ್ಡ್ ಸಂಬಂಧಿಸಿದ ಹಾಗೆ ಅನೇಕ ಬದಲಾವಣೆಗಳು ಮತ್ತು ಹೊಸ ಹೊಸ ನಿಯಮಗಳನ್ನು ಘೋಷಿಸಲಾಗುತ್ತದೆ. ಸರ್ಕಾರದ ಈ ನಿಯಮಗಳನ್ನು ನೀವು ಪಾಲಿಸದೆ ಇದ್ದಲ್ಲಿ ನಿಮ್ಮ ಆಧಾರ್ ಕಾರ್ಡ್(Aadhar Card) ರದ್ದಾಗುವ ಸಾಧ್ಯತೆ ಹೆಚ್ಚಿದೆ, ಇಲ್ಲದೆ ನೀವು ಅದರ ಸಂಬಂಧಿಸಿದ ಚಟುವಟಿಕೆಗಳಲ್ಲಿ ನೀವು ಸಮಸ್ಯೆಯನ್ನು ಎದುರಿಸಬಹುದು. ಸದ್ಯ 2025 ಹೊಸ ವರ್ಷದ ಆರಂಭದಲ್ಲಿ ಆಧಾರ್ ಕಾರ್ಡ್ ಸಂಬಂಧಿಸಿದ ಕೇಂದ್ರ ಸರ್ಕಾರವು 5 ಹೊಸ ನಿಯಮಗಳನ್ನು (New Rules) ಜಾರಿಗೆ ತಂದಿದೆ. ಅವುಗಳೆಂದರೆ,

1. ಪ್ರಮುಖ ದಾಖಲೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ (Aadhar link):-

ಬ್ಯಾಂಕ್ ಖಾತೆ, ಪಾನ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಹಲವು ಮುಖ್ಯ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡುವುದು ಮುಖ್ಯವಾಗಿದೆ, ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದೆ ಇದ್ದಲ್ಲಿ ಅದೇ ತೆರಿಗೆ ಪಾವತಿ ಮಾಡಲು ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಯಾವುದೇ ವ್ಯವಹಾರಿಕ ಚಟುವಟಿಕೆಗಳನ್ನು ನಿರ್ವಹಿಸಲು ನಿಮಗೆ ಕಷ್ಟವಾಗುತ್ತದೆ. ಅದರಂತೆ, ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದೆ ಇದ್ದಲ್ಲಿ ಪಡಿತರ ಸಂಬಂಧಿಸಿದ ಸೌಲಭ್ಯಗಳು ನಿಮಗೆ ಸಿಗುವುದಿಲ್ಲ. ಎಲ್ಲಾ ಕಾರ್ಡ್ ಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ.

 

2.ಆಧಾರ್ ಕಾರ್ಡ್ ಅಪ್ಡೇಟ್ಗೆ (Aadhar Update):-

ಆಧಾರ್ ಅಪ್ಡೇಟ್ ಬಗ್ಗೆ ಸರ್ಕಾರವು ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದೆ, ಸರ್ಕಾರದ ವತಿಯಿಂದ ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶವನ್ನು ಕೂಡ ನೀಡಿತ್ತು, ಯಾಕೆಂದರೆ ಪ್ರತಿಯೊಂದು ನಾಗರಿಕನ ವೈಯಕ್ತಿಕ ವಿವರಗಳು ಕಳೆದ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತದೆ ಹಾಗಾಗಿ 10 ವರ್ಷಗಳಿಂದ ಒಮ್ಮೆಯು ಅಪ್ಡೇಟ್ ಮಾಡಿಕೊಳ್ಳದೆ ಇದ್ದವರು ಡೇಟ್ ಮಾಡಿಕೊಳ್ಳುವಂತೆ ತಿಳಿಸಿದೆ, ನೀವು ಆಧಾರ್ ಅಪ್ಡೇಟ್ (Aadhar Update) ಮಾಡದಿದ್ದಲ್ಲಿ ಕಡಿಮೆ ಶುಲ್ಕದಲ್ಲಿ ಕೂಡಲೇ ಅಪ್ಡೇಟ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಆಧಾರ್ ಅಪ್ಡೇಟ್ ಡೆಡ್ ಲೈನ್ ದಿನಾಂಕವನ್ನು ಘೋಷಿಸಲಾಗುವುದು, ನಿಗದಿಪಡಿಸಿದ ದಿನಾಂಕದೊಳಗೆ ಆಧಾರ್ ಅಪ್ಡೇಟ್ ಮಾಡದೇ ಇದ್ದಲ್ಲಿ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯಗಳು ನಿಮಗೆ ಸಿಗುವುದಿಲ್ಲ, ಮತ್ತು ನಂತರದ ತಿದ್ದುಪಡಿಗೆ ಹೆಚ್ಚಿನ ಶುಲ್ಕವನ್ನು ವಿಧಿಸಬಹುದು.

3. ಆಧಾರ್ ವೆರಿಫೈ (Aadhar Verify):-

ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಸರಿಯಾಗಿ ವೆರಿಫೈ ಮಾಡೋದೇ ಇದ್ದಲ್ಲಿ ಸರ್ಕಾರದ ಸವಲತ್ತುಗಳು ನಿಮಗೆ ಸಿಗುವುದಿಲ್ಲ, ಮಹಾಲಕ್ಷ್ಮಿ ಯೋಜನೆ ಹಣ, ಅನ್ನಭಾಗ್ಯ, ಉಜ್ವಲ್ ಯೋಜನೆಯ ಸಬ್ಸಿಡಿ, ಪಿಂಚಣಿ ಸೇರಿದಂತೆ ಸರ್ಕಾರದ ಅನುದಾನ ಪಡೆಯಲು ಆಧಾರ್ ವೆರಿಫಿಕೇಶನ್ ಆಗಿರಬೇಕು. ಹಾಗಾಗಿ ನೀವು ಎಲ್ಲ ದಾಖಲೆಗಳಿಗೂ ಆಧಾರ್ ಲಿಂಕ್ (Aadhar Link) ಆಗಿದಿಯಾ ಎಂದು ಒಮ್ಮೆ ಪರಿಶೀಲಿಸಿ.

4. ಬಯೋಮೆಟ್ರಿಕ್ ಅಪ್ಡೇಟ್ (Biometric Update)

ಆಧಾರ್ ಕಾರ್ಡಿಗೆ Finger Print ಸೇರಿದಂತೆ ಐರಿಷ್ ಸ್ಕ್ಯಾನ್ ಬಗ್ಗೆಯ ಬಯೋಮೆಟ್ರಿಕ್ ಮಾಹಿತಿಗಳನ್ನು ಕೂಡ ಕಡ್ಡಾಯವಾಗಿ 2025 ರಲ್ಲಿ ಅಪ್ಡೇಟ್ ಮಾಡುವಂತೆ ಸರ್ಕಾರವು ಸೂಚಿಸಿದೆ, ಹೀಗಾಗಿ ನೀವು ಹತ್ತಿರವಿರುವ ಆದ ಸೆಂಟರ್ ಗೆ ಭೇಟಿ ನೀಡಿ, ಬಯೋಮೆಟ್ರಿಕ್ ಅಪ್ಡೇಟ್ ಕೊಳ್ಳುವುದು ಸೂಕ್ತ.

5. ಆಧಾರ್ ಕಾರ್ಡ್ ದುರುಪಯೋಗಕ್ಕೆ ಕಠಿಣ ನಿಯಮ:-

ಈಗ ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ದುರ್ಬಳಕೆಯು ಹೆಚ್ಚಾಗುತ್ತಿದೆ, ಇದರ ಬಗ್ಗೆ ಸರ್ಕಾರವು ಮೊದಲಿನಿಂದಲೂ ಎಚ್ಚರಿಸುತ್ತಾ ಬಂದಿದೆ, ನಿಮ್ಮ ಆಧಾರ್ ಸಂಖ್ಯೆಯಿಂದ ಏನಾದರೂ ಅಹಿತಕರ ಘಟನೆ ನಡೆದರೆ, ಆಧಾರ್ ಸಂಖ್ಯೆ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರೇ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರವು ಘೋಷಿಸಿದೆ. ಹಾಗಾಗಿ ನೀವು ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಂಚಿಕೊಳ್ಳುವುದು ಮತ್ತು ಆಧಾರ್ ಪ್ರತಿಗಳನ್ನು ಅಪರಿಚಿತರಿಗೆ ನೀಡುವುದನ್ನು ತಪ್ಪಿಸಿ.

ಆಧಾರ್ ಸಂಬಂಧಿಸಿದ ಹಾಗೆ ನೀವು ಎಚ್ಚರಿಕೆಯಿಂದ ಇರುವುದು ಸೂಕ್ತ, ಮತ್ತು ಸರ್ಕಾರಿ ಪ್ರತಿಗಳಿಗೆ ಆಧಾರ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

 

 

WhatsApp Group Join Now
Telegram Group Join Now

Leave a Comment

copy
share with your friends.