LIC| ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ ರೂ.7,000, ಇಂದೇ ಅರ್ಜಿ ಸಲ್ಲಿಸಿ
ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ, ಕೇವಲ ಒಂದು ತಿಂಗಳೊಳಗೆ ಸುಮಾರು 50,000 ಕ್ಕೂ ಹೆಚ್ಚು ಮಹಿಳೆಯರು LIC ಭೀಮಾಸಖಿ ಯೋಜನೆಗೆ ಸಹಿ ಹಾಕಿದ್ದಾರೆ, ಈ ಯೋಜನೆಯನ್ನು ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣದ ಮೂಲಕ ಅಭಿವೃದ್ಧಿ ಹೊಂದಿದ ಭಾರತಕ್ಕೆ ಉಪಕ್ರಮವಾಗಲಿ ಎಂದು ಆರಂಭಿಸಲಾಗಿದೆ.
ಇದೆ ಬೆಳವಣಿಗೆಯ ಬಗ್ಗೆ ಮಾತನಾಡಿದ ಎಲ್ಐಸಿ ವ್ಯವಸ್ಥಾಪಕ, ನಿರ್ದೇಶಕ ಹಾಗೂ CEO ಸಿದ್ದಾರ್ಥ್ ಮೋಹಂತಿ ಅವರು ಬರುವ ವರ್ಷದೊಳಗೆ ದೇಶದ ಪ್ರತಿ ಪಂಚಾಯತಿಯಲ್ಲಿ ಒಬ್ಬ ಭೀಮಾ ಸಖಿಯನ್ನು ತರುವುದು ನಮ್ಮ ಗುರಿ ಎಂದು ಹೇಳಿದರು.
ಈ ಯೋಜನೆಯು ಮಹಿಳೆಯರಿಗೆ ಸಂಬಂಧಿತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ಬಲವಾದ ಡಿಜಿಟಲ್ ಸಾಧನಗಳೊಂದಿಗೆ ಅವರನ್ನು ಸಬಲೀಕರಣ ಗೊಳಿಸುವ ಗುರಿಯನ್ನು ಹೊಂದಿದೆ, ಮತ್ತು ಈ ಯೋಜನೆಯು ಖರೀದಿಸಿದ ವ್ಯವಹಾರದಲ್ಲಿ ಗಳಿಸಿದ ಕಮಿಷನ್ ಜೊತೆಗೆ 3 ವರ್ಷಗಳ ಮಾಸಿಕ ಸ್ಟೇಯಫಂಡ್ ಪ್ರಯೋಜನವನ್ನು ಸಹ ಒಳಗೊಂಡಿದೆ ಎಂದು ಹೇಳಿದರು.
ಈ ಯೋಜನೆಯ ಪ್ರಕಾರ ಪ್ರತಿ ಭೀಮಾಸಕಿ ಫಲಾನುಭವಿಯು ಮೊದಲ ವರ್ಷದಲ್ಲಿ ಮಾಸಿಕವಾಗಿ ರೂ.7,000, ಎರಡನೇ ವರ್ಷದಲ್ಲಿ ರೂ.6,000 ಮತ್ತು ಮೂರನೇ ವರ್ಷದಲ್ಲಿ ರೂ.5,000 ಮಾಸಿಕ ಸ್ಟೈಫಂಡ್ ಪಡೆಯಲಿದ್ದಾರೆ..
ಈ ಯೋಜನೆಯು ಮೂಲಭೂತ ಬೆಂಬಲ ವಿದ್ಯಾರ್ಥಿ ವೇತನವಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ಮಹಿಳಾ ಏಜೆಂಟ್ ಗಳು ಅವರ ಸ್ವೀಕರಿಸುವ ಎಲ್ಲಾ ವಿಮಾ ಪಾಲಸಿಗಳ ಆಧಾರದ ಮೇಲೆ ಆದಾಯವನ್ನು ಗಳಿಸಬಹುದು ಮತ್ತು ಅವರು ತರುವ ವ್ಯವಹಾರಕ್ಕನುಗುಣವಾಗಿ ಅವರ ಗಳಿಕೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ.
LIC ಯು ಮುಂದಿನ ಮೂರು ವರ್ಷಗಳಲ್ಲಿ 2 ಲಕ್ಷ ಭೀಮ ಸಖಿಯರನ್ನು ನೇಮಕ ಮಾಡುವ ಗುರಿಯನ್ನು ಹೊಂದಿದೆ, ಈ ಭೀಮಸಖಿ ಯೋಜನೆಗೆ 10ನೇ ತರಗತಿ ತೇರ್ಗಡೆ ಹೊಂದಿದ 18 ರಿಂದ 70 ವರ್ಷದೊಳಗಿನ ಯಾವುದೇ ಮಹಿಳೆಯು ಅರ್ಜಿ ಸಲ್ಲಿಸಬಹುದು.