Gruhalakshmi Scheme: ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್! ಈ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಸ್ಥಗಿತ; ಯಾವ ಜಿಲ್ಲೆ?
GST ಪಾವತಿ, ಆದಾಯ ತೆರಿಗೆ ಪಾವತಿಯ ಕಾರಣದಿಂದಾಗಿ ಕೋಲಾರ ಜಿಲ್ಲೆಯ ಸುಮಾರು 4,000 ಮಹಿಳೆಯರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗುವುದು ಕಂಡುಬಂದಿದೆ.
ರಾಜ್ಯ ಸರ್ಕಾರವು ರೂಪಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದ ಗೃಹಲಕ್ಷ್ಮಿ ಯೋಜನೆಯಿಂದ ಅರ್ಹ ಮಹಿಳಾ ಫಲಾನುಭವಿಗಳಿಗೆ ತಿಂಗಳು ರೂ.2000 ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದರು, ಇದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಅನುಕೂಲವಾಗುತ್ತಿತ್ತು.
ಅದರಂತೆ ಕೋಲಾರ ಜಿಲ್ಲೆಯಲ್ಲಿ GST ಹಾಗೂ ಆದಾಯ ತೆರಿಗೆ ಪಾವತಿದಾರರೆಂದು ಸುಮಾರು 4,268 ಮಂದಿಯನ್ನು ಗುರುತಿಸಲಾಗಿದೆ, ಅವರಿಗೆ ಸರ್ಕಾರದಿಂದ ನೀಡಲಾಗುತ್ತಿದ್ದ 2,000 ರೂ.ಗಳನ್ನು ತೆಗಿತಾ ಗೊಳಿಸಲಾಗಿದ್ದು, ತಾವು GST, IT ಪಾವತಿದಾರರಾದ್ದರಿಂದ ತಮ್ಮ ಹೆಸರನ್ನು ಕೈ ಬಿಡಲಾಗಿದೆ ಎಂದು ಅವರಿಗೆ ದೂರು ಕೇಳಿ ಬಂದಿದೆ.
ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದ ರೂ.2,000 ಸ್ಥಗಿತಗೊಂಡ ಹಿನ್ನಲೆಯಲ್ಲಿ ಕೋಲಾರ ಜಿಲ್ಲೆಯ ಸಾಕಷ್ಟು ಮಹಿಳೆಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತೆರಳಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುತ್ತಿದ್ದಾರೆ, ಇನ್ನಷ್ಟು ಮಹಿಳೆಯರು ನಾವು ಯಾವುದೇ ವ್ಯಾಪಾರ ಚಟುವಟಿಕೆ ನಡೆಸುತ್ತಿಲ್ಲವೆಂದು ದಾಖಲೆಗಳನ್ನು ಸಲ್ಲಿಸಿ ಕೂಡಲೆ ಯೋಜನೆಗೆ ತಮ್ಮ ಹೆಸರನ್ನು ಪಿನ್ಹ ಸೇರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೋಲಾರದಲ್ಲಿ 3 ಲಕ್ಷ ಅರ್ಹ ಫಲಾನುಭವಿಗಳು
ಕೋಲಾರ ಜಿಲ್ಲೆಯಲ್ಲಿ ಒಟ್ಟು 3,41,846 ಗೃಹಲಕ್ಷ್ಮಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 3,20,659 ಫಲಾನುಭವಿಗಳನ್ನು ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಮಾಡಿಕೊಂಡಿದ್ದಾರೆ, ಅವರ ಪೈಕಿ ಬ್ಯಾಂಕ್ ಖಾತೆಗೆ ನಿಷ್ಕ್ರಿಯೆ ಆಗಿರುವುದು, ಆಧಾರ್ ಸಂಖ್ಯೆ ಸೀಡಿಂಗ್ ಆಗದಿರುವುದು, ಪಾನ್ ಕಾರ್ಡ್ ಕೆವೈಸಿ, ಬ್ಯಾಂಕ್ ಖಾತೆಯ ಲಿಂಕ್ ಇತರೆ ಕಾರಣಗಳಿಂದ ಸುಮಾರು 3,397 ಮಹಿಳೆಯರಿಗೆ ಯೋಜನೆಯ ಸೌಲಭ್ಯ ಸಿಗುದಂತಾಗಿದೆ.
21 ಸಾವಿರ ಮಹಿಳೆಯರು ನೋಂದಣಿಯಾಗಿಲ್ಲ
ಕೋಲಾರ ಜಿಲ್ಲೆಯ 3,41,846 ಮಂದಿ ಅರ್ಹ ಮಹಿಳೆಯರಲ್ಲಿ 21,187 ಮಂದಿ ಮಹಿಳೆಯರು ತಮ್ಮ ಹೆಸರನ್ನು ಯೋಜನೆಯ ನೊಂದಣಿಗೆ ಆಸಕ್ತಿ ತೋರಿಸಿಲ್ಲ, ಕೆಲವೊಂದಿಷ್ಟು ಮಹಿಳೆಯರು ಸ್ವಯಂ ಪ್ರೇರಿತವಾಗಿ ನೋಂದಣಿ ಮಾಡಿಸದಿರಲು ನಿರ್ಧರಿಸಿದರೆ, ಇನ್ನು ಕೆಲವರು ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ನೋಂದಣಿ ಮಾಡಿಸದಿರುವುದು ಕಂಡುಬಂದಿದೆ.