Airtel| ಏರ್ಟೆಲ್ ಗ್ರಾಹಕರಿಗೆ ಎಚ್ಚರಿಕೆ! ಈ ಒಂದು ತಪ್ಪು ನಿಮಗೆ ದುಬಾರಿಯಾಗಬಹುದು
ದೇಶದಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆಯ (Online Scam) ಬಗ್ಗೆ ಏರ್ಟೆಲ್ ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸುದ್ದಿಯನ್ನು ನೀಡಿದೆ, ದೇಶದ ಅತಿ ದೊಡ್ಡ ಖಾಸಗಿ ಕಂಪನಿ ಯಾಗಿರುವ Airtel ಅಪರಿಚಿತ ಸಂಖ್ಯೆಗಳಿಂದ ಬರುವ ಕರೆ (Calls) ಮತ್ತು ಸಂದೇಶಗಳಿಂದ (Sms) ದೂರವಿರಿ ಎಂದು ಹೇಳಿದೆ. ಟೆಲಿಕಾಂ ಕಂಪನಿಯು SMS ಮೂಲಕ ವಂಚನೆಯನ್ನು ತಪ್ಪಿಸಲು ಬಳಕೆದಾರರಲ್ಲಿ ಕೇಳಿಕೊಂಡಿದೆ. ಇತ್ತೀಚಿಗಷ್ಟೇ ದೂರಸಂಪರ್ಕ ಇಲಾಖೆಯು ಆನ್ಲೈನ್ ವಂಚನೆಯನ್ನು ತಡೆಯಲು ಟೆಲಿಕಾಂ ಕಂಪನಿಗಳಿಗೆ(Telicom Company) ಹೊಸ ಮಾರ್ಗ ಸೂಚಿಯನ್ನು ಪ್ರಕಟಿಸಿತ್ತು, ಸಂದೇಶಗಳನ್ನು ಪತ್ತೆ ಹಚ್ಚುವಿಕೆ, ಹಲವಾರು ಹೊಸ ನಿಯಮಗಳನ್ನು ಅಳವಡಿಸಲಾಗಿತ್ತು.
ಏರ್‌ಟೆಲ್ ನೀಡಿದ ಎಚ್ಚರಿಕೆ ಏನು?
ಯೂಸರ್ ಐಡಿ, ಕೆ ವೈ ಸಿ ಅಪ್ಡೇಟ್, ಡೆಬಿಟ್ ಕಾರ್ಡ್ ಸಂಖ್ಯೆ, ಪಾಸ್ವರ್ಡ್, CVV ಅಥವಾ OTP, ಪಿನ್ ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ಕರೆ ಇಲ್ಲವೇ ಇ-ಮೇಲ್ ಅಥವಾ ಸಂದೇಶಗಳು ಬಂದರೆ, ಅದನ್ನು ಲಿಂಕ್ ಎಂದು ನಿರ್ಲಕ್ಷಿಸಿ ಎಂದು ಏರ್ಟೆಲ್ (Airtel) ತನ್ನ ಗ್ರಾಹಕರಿಗೆ ಸಂದೇಶದ ಮೂಲಕ ಎಚ್ಚರಿಕೆಯನ್ನು ನೀಡಿದೆ. ಈ ಮೂಲಕವಾಗಿ ನಿಮ್ಮ ವೈಯಕ್ತಿಕ ವಿವರಗಳನ್ನು ಗೊತ್ತಿದ್ದು ಅಥವಾ ತಿಳಿಯದೆಯೇ ಹಂಚಿಕೊಳ್ಳುವುದು ದೊಡ್ಡ ವಂಚನೆಗೆ ಕಾರಣವಾಗಬಹುದು ಎಂದು ಹೇಳಿದೆ.
ಇತ್ತೀಚಿಗೆ, ಅನೇಕ ಆನ್ಲೈನ್ ವಂಚನೆಯ ಘಟನೆಗಳು ಬೆಳಕಿಗೆ ಬಂದಿವೆ, ಇದರಿಂದ Hackers ಗಳು ಜನರಿಂದ ಮಾಹಿತಿ ಪಡೆದ ನಂತರ ಅವರ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಖಾಲಿ ಮಾಡುತ್ತಾರೆ. Airtel ಹೊರತಾಗಿ RBI ಮತ್ತು SBI ಕೂಡ ಬ್ಯಾಂಕಿಂಗ್ ಮತ್ತು ಯುಪಿಐ ವಂಚನೆಗೆ ಸಂಬಂಧಿಸಿದಂತೆ ಬಳಕೆದಾರರನ್ನು ಹಲವಾರು ಬಾರಿ ಎಚ್ಚರಿಸಿದೆ. ಈ ರೀತಿಯ ವಂಚನೆಯನ್ನು ಎಸಗಲು ಹ್ಯಾಕರ್ ಗಳು ಸಾಮಾಜಿಕ ಇಂಜಿನಿಯರಿಂಗ್ ಮೂಲಕ ಜನರನ್ನು ಬಳಕೆ ಬೀಳಿಸುತ್ತಾರೆ, ಮತ್ತು ಅವರ ಎಲ್ಲಾ ವೈಯಕ್ತಿಕ ವಿವರಗಳನ್ನು ಪಡೆಯುವ ಮೂಲಕ ವಂಚನೆಯನ್ನು ಮಾಡುತ್ತಾರೆ.
ಇವುಗಳನ್ನು ತಪ್ಪಿಸುವುದು ಹೇಗೆ?:
ಈ ರೀತಿಯ ವಂಚನೆಯನ್ನು ತಪ್ಪಿಸುವುದು ಎಚ್ಚರಿಕೆಯೆ ದೊಡ್ಡ ಅಸ್ತ್ರವಾಗಿದೆ, ನೀವು ಅಂತಹ ಯಾವುದೇ ಕರೆ ಅಥವಾ ಸಂದೇಶ ಪಡೆದರೆ ಅದನ್ನು ನಿರ್ಲಕ್ಷಿಸಿ.
ಉಚಿತ ಬಹುಮಾನಗಳು ಅಥವಾ ಉಡುಗೊರೆಗಳ ಹೆಸರಿನಲ್ಲಿ ಸೈಬರ್ ಅಪರಾಧಿಗಳು ನಿಮ್ಮನ್ನು ಬಲೆಗೆ ಬೀಳಿಸಬಹುದು, ಇಂತಹ ಪರಿಸ್ಥಿತಿಯಲ್ಲಿ ನೀವು ಯಾವುದೇ ಉಚಿತ ಉಡುಗೊರೆ ಅಥವಾ ಲಾಟರಿ ಗೆ ಸಂಬಂಧಿಸಿದ ಯಾವುದೇ ಸಂದೇಶ ಅಥವಾ ಕಾರ್ಯವನ್ನು ಪಡೆದರೆ ಅದಕ್ಕೆ ಪ್ರತಿಕ್ರಿಸಬೇಡಿ.
ಸಾಕಷ್ಟು ಜನ ಸೈಬರ್ ಅಪರಾಧಿಗಳಿಂದ ಉದ್ವೇಗಗೊಳಿಸುವ ಆಫರ್ ಗಳ(Offers) ಬಲೆಗೆ ಬಿಡುತ್ತಾರೆ ಇದರಿಂದ ತಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುತ್ತಾರೆ ಹೀಗೆ ಮಾಡುವುದರಿಂದ ದೊಡ್ಡದಾಗಿ ಮೋಸ ಹೋಗಬಹುದು.
RBI (ಭಾರತೀಯ ರಿಸರ್ವ್ ಬ್ಯಾಂಕ್) ನ ಯಾವುದೇ ಬ್ಯಾಂಕ್ ಅಥವಾ ಏಜೆನ್ಸಿಯು ನಿಮ್ಮ ಬಳಿ OTP ಅಥವಾ PIN ನಂಬರ್ ಕೇಳುವುದಿಲ್ಲ ಅಥವಾ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ಖಾತೆ ಸಂಖ್ಯೆಯನ್ನು ಎಂದಿಗೂ ಕೇಳುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿಮಗೆ ಆ ರೀತಿಯ ಕರೆಗಳು ಬಂದರೆ ಅದು ಸೈಬರ್ ಕ್ರಿಮಿನಲ್(Cyber Criminal) ಇಂದ ಬಂದಿರುವ ಕರೆ ಆಗಿರಬಹುದು.
ನೀವು ಈ ರೀತಿಯ ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ ದೂರು ದಾಖಲಿಸಬೇಕು, ಸೈಬರ್ ಕ್ರೈಂ ಪೋರ್ಟಲ್ ನಲ್ಲಿ ದೂರು ದಾಖಲಿಸಿದ ನಂತರವೂ ಶೇಕಡ 99 ರಷ್ಟು ಪ್ರಕರಣಗಳಲ್ಲಿ ಹಣ ವಾಪಸ್ ಆಗಿರುವುದಿಲ್ಲ. ವಂಚನೆಯಾದ ಅರ್ಧ ಗಂಟೆ ಇಲ್ಲವೇ 01 ಗಂಟೆಯೊಳಗೆ ದೂರು ದಾಖಲಿಸಿದರೆ, ನಿಮ್ಮ ಹಣ ಮರಳಿ ಬರುವ ಸಾಧ್ಯತೆ ಇರುತ್ತದೆ. ದೂರು ದಾಖಲಿಸಲು 1930 ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಬಹುದು, ಅಥವಾ cybercrime.gov.in ಈ ಹೋಟೆಲ್ ನಲ್ಲಿ ದೂರು ದಾಖಲಿಸಬೇಕು.