Free Electricity: ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! 300 ಯೂನಿಟ್ ಉಚಿತ ವಿದ್ಯುತ್, ಅರ್ಜಿ ಸಲ್ಲಿಸುವುದು ಹೇಗೆ?

Free Electricity: ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! 300 ಯೂನಿಟ್ ಉಚಿತ ವಿದ್ಯುತ್, ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರ ಸರ್ಕಾರವು ಈ ಯೋಜನೆಯನ್ನು ಎಲ್ಲರಿಗೂ ಉಚಿತ ವಿದ್ಯುತ್ ಸಿಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾಗಿದೆ, ಯೋಜನೆಯ ಹೆಸರು ಪ್ರಧಾನಮಂತ್ರಿ ಸೂರ್ಯ ಘರ್ ಮುಪ್ತ್ ಬಿಜ್ಲಿ ಯೋಜನೆಯಾಗಿದೆ. ಈ ಯೋಜನೆಗೆ ಸಂಬಂಧಿಸಿದ ಹಾಗೆ ಹೊಸ ಮಾರ್ಗ ಸೂಚಿಯನ್ನು ಪ್ರಕಟಿಸಿದ್ದು ಇದೀಗ ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಇನ್ನಷ್ಟು ಸುಲಭವಾಗಿದೆ.

WhatsApp Group Join Now
Telegram Group Join Now

ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬೀಜ್ಲಿ ಯೋಜನೆಯಡಿ ಫಲಾನುಭವಿಗಳು 300 ಯೂನಿಟ್ ಉಚಿತ ವಿದ್ಯುತ್ ಪಡೆಯಬಹುದು. ಅಲ್ಲದೆ ಸೋಲಾರ್ ಅಳವಡಿಸಲು ರೂ.78,000 ವರೆಗೆ ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ.

ನವೀಕರಿಸಬಹುದಾದ ಇಂಧನ ಸಚಿವಾಲಯ

ನವೀಕರಿಸಬಹುದಾದ ಮತ್ತು ಹೊಸ ಇಂಧನ ಸಚಿವಾಲಯ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ ಬಿಜ್ಲಿ ಯೋಜನೆಯಡಿ ನಿಮ್ಮ ಮನೆಯ ಚಾವಣಿಗೆ ಸೋಲಾರ್ ಫಲಗಳನ್ನು ಅಳವಡಿಸಲು ಈ ಎರಡು ಆಯ್ಕೆಗಳನ್ನು ನಿಮಗೆ ನೀಡುತ್ತಿದೆ.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ

PM ಸೂರ್ಯ ಘರ್ ಯೋಜನೆಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳಲ್ಲಿ ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೌರಪಲಕಗಳನ್ನು ಅಳವಡಿಕೆ ಮಾಡಲು ಇಚ್ಚಿಸುವವರು ಪಾವತಿ ಯೋಜನೆಯ ಅಡಿಯಲ್ಲಿ ಒಂದು ರೂಪಾಯಿಯನ್ನು ಖರ್ಚು ಮಾಡದೆ ಹಾಗೆಯೇ ಇದರ ಲಾಭವನ್ನು ಪಡೆದುಕೊಳ್ಳಬಹುದು.

ಮೊದಲ ಆಯ್ಕೆಯಾಗಿ, ರೆಸ್ಕೋ ಮಾದರಿಯಲ್ಲಿ ಸಂಸ್ಥೆ ಅಥವಾ ಮೂರನೇ ವ್ಯಕ್ತಿ ನಿಮ್ಮ ಮನೆಯ ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಕೆ ಮಾಡಲು ನೀವು ಹಣವನ್ನು ಪಾವತಿಸಬೇಕಾಗಿಲ್ಲ, ಫಲಕಗಳನ್ನು ಅಳವಡಿಕೆ ಮಾಡಿದ ನಂತರ ನೀವು ಸೋಲಾರ್ ಪ್ಯಾನಲ್ ಮೂಲಕ ಬಳಸುವ ವಿದ್ಯುತ್ ಗೆ ನೀವು ಬಿಲ್ ಪಾವತಿಸಬೇಕಾಗುತ್ತದೆ.

ಎಎರಡನೇ ಆಯ್ಕೆಯಾಗಿ, ULA ( ಯುಟಿಲಿಟಿ ನೇತೃತ್ವದ ಒಟ್ಟುಗೂಡಿಸುವಿಕೆ) ಮಾದರಿಯಲ್ಲಿ ಡಿಸ್ಕಮ್ ಅಥವಾ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಸಂಸ್ಥೆಯ ಮೂಲಕ ನಿಮ್ಮ ಮನೆಗೆ ಸೌರ ಫಲಗಳನ್ನು ಅಳವಡಿಸಲಾಗುತ್ತದೆ. ಇದಕ್ಕೂ ಕೂಡ ನೀವು ಯಾವುದೇ ಹಣ ಕಟ್ಟಬೇಕಾಗಿಲ್ಲ.

ಈ ಹೊಸ ಯೋಜನೆಯು ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ, ರಾಷ್ಟ್ರೀಯ ಪೋರ್ಟಲ್ ಮೂಲಕ ಈ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ ಗೊಳಿಸಲಾಗಿದೆ. ಫಲಾನುಭವಿಯು ಹೊಸ ಮಾರ್ಗಸೂಚಿಯ ಅನ್ವಯ ತನ್ನ ಸಹಾಯಧನದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಈ ಯೋಜನೆಯಡಿ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಲಭ್ಯವಿದೆ ಮತ್ತು ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರದಿಂದ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಮನೆಯ ಮೇಲೆ ಸೋಲಾರ್ ಫಲಕಗಳನ್ನು ಸ್ಥಾಪಿಸಲು ಸರ್ಕಾರವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತದೆ. ನೀವು 2 ಕಿಲೋ ವ್ಯಾಟ್ ಪ್ಯಾನೆಲ್ ಅಳವಡಿಸಲು ರೂ.20,000, 3 ಕಿಲೋ ವ್ಯಾಟ್ ಪ್ಯಾನೆಲ್ ಅಳವಡಿಸಲು ರೂ.30,000 ಹಾಗೂ 3 ಕಿಲೋ ವ್ಯಾಟ್ ಗಿಂತ ಹೆಚ್ಚಿನ ಪ್ಯಾನೆಲ್ ಅಳವಡಿಸಲು ರೂ.78,000 ದವರಿಗೆ ಸಹಾಯಧನವನ್ನು ನೀಡಲಾಗುತ್ತದೆ.

Leave a Comment

WhatsApp Group Join Now
Telegram Group Join Now