Ration Card ತಿದ್ದುಪಡಿಗೆ ಇದುವೇ ಕೊನೆಯ ದಿನಾಂಕ! ಇಲ್ಲಿದೆ ಸಂಪೂರ್ಣ ಮಾಹಿತಿ

Ration Card ತಿದ್ದುಪಡಿಗೆ ಇದುವೇ ಕೊನೆಯ ದಿನಾಂಕ! ಇಲ್ಲಿದೆ ಸಂಪೂರ್ಣ ಮಾಹಿತಿ

ಆಹಾರ ಇಲಾಖೆಯು ಬಹಳ ದಿನಗಳಿಂದ ಪಡಿತರ ಚೀಟಿಗಾಗಿ(Ration Card) ಕಾಯುತ್ತಿದ್ದ ಜನರಿಗೆ ಇದೀಗ ಸಿಹಿ ಸುದ್ದಿಯೊಂದನ್ನು ನಿಡಿದೆ. ಪಡಿತರ ಚೀಟಿದಾರರು ಹೊಸ ಸದಸ್ಯರ ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಅವಕಾಶವನ್ನು ನೀಡಲಾಗಿದೆ. ಇದೆ ಜನವರಿ 31ರವರೆಗೆ ಬೆಳಿಗ್ಗೆ 10:00 ಯಿಂದ ಸಂಜೆ 05:00 ವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

WhatsApp Group Join Now
Telegram Group Join Now

ಪಡಿತರ ಚೀಟಿದಾರರು ಗ್ರಾಮ್ ಒನ್, ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. APL ಕಾರ್ಡ್ ಪಡೆಯುವವರು ಕೂಡ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ತಮ್ಮ ಮಕ್ಕಳ ಹೆಸರು ಅಥವಾ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ.

ರೇಷನ್ ಕಾರ್ಡ್ ನಲ್ಲಿ ಹೆಂಡತಿ ಹೆಸರು ಸೇರ್ಪಡೆ ಮಾಡಲು ಈ ದಾಖಲೆಗಳು ಕಡ್ಡಾಯ;

  • ಆಧಾರ್ ಕಾರ್ಡ್
  • ಮದುವೆ ಪ್ರಮಾಣ ಪತ್ರ
  • ಪೋಷಕರ ಪಡಿತರ ಚೀಟಿ

ಪಡಿತರ ಚೀಟಿಗೆ ಮಗುವಿನ ಹೆಸರು ಸೇರ್ಪಡೆ ಮಾಡಲು ಈ ದಾಖಲೆಗಳು ಕಡ್ಡಾಯ;

  • ಮಗುವಿನ ಜನನ ಪ್ರಮಾಣ ಪತ್ರ
  • ಹೆತ್ತವರ ಆಧಾರ್ ಕಾರ್ಡ್

ಪಡಿತರ ಚೀಟಿಗೆ ನಿಮ್ಮ ಕುಟುಂಬದ ಯಾವುದೇ ಸದಸ್ಯರನ್ನು ಆನ್ಲೈನ್ ಮೂಲಕ ಸೇರ್ಪಡೆ ಮಾಡಲು, ನೀವು ಕರ್ನಾಟಕ ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ ಟ್ ಗೆ ಭೇಟಿ ನೀಡಬೇಕು, ನಂತರ ವೆಬ್ ಸೈಟ್ ನಲ್ಲಿ ID ರಚಿಸಬೇಕಾಗುತ್ತದೆ. ಈಗಾಗಲೇ ID ರಚಿಸಿದ್ದರೆ ಲಾಗಿನ್ ಆಗಬಹುದು, ನಂತರ ನಿಮ್ಮ ವಿವರಗಳನ್ನು ನೋಡುವಿರಿ, ಅಲ್ಲಿ ಹೊಸ ಸದಸ್ಯರ ಸೇರ್ಪಡೆಯ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಒಂದು ಭರ್ತಿ ಮಾಡಬೇಕಾಗುತ್ತದೆ.

ಆಹಾರ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಾಗರಿಕ ಸರಬರಾಜು, ಆಹಾರ, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪ್ರಗತಿಪರಿಶೀಲನೆ ಸಭೆ ನಡೆಸಿದ್ದು, ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಯಡಿ 4695 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅಕ್ಟೋಬರ್ ಅಂತ್ಯದವರಿಗೆ 3253ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಯೋಜನೆಯಡಿ ರಾಜ್ಯದ 4,44,48,294 ಫಲಾನುಭವಿಗಳು ಇದರ ಲಾಭವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 

Leave a Comment

WhatsApp Group Join Now
Telegram Group Join Now