SBI ಕಡೆಯಿಂದ ಮಹಿಳೆಯರಿಗೆ ಸಿಹಿ ಸುದ್ದಿ, ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ!
SBI MONEY: ಈ ಯೋಜನೆಯ ಮೂಲಕ ಮಹಿಳೆಯರು ಕಡಿಮೆ ಬಡ್ಡಿ ದರದಲ್ಲಿ(Intrest Rate) ಸಾಲವನ್ನು ಪಡೆದು ತಮ್ಮ ಉದ್ದಿಮೆಯನ್ನು ಆರಂಭಿಸಬಹುದು. 2 ಲಕ್ಷ ರೂ. ಗಿಂತ ಕಡಿಮೆ ಸಾಲಕ್ಕೆ 0.5% ಹೆಚ್ಚುವರಿ ಬಡ್ಡಿ ಸಬ್ಸಿಡಿ(Subsidy) ದೊರೆಯಲಿದೆ.
ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷವಾಗಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಜಾರಿಗೆ ತಂದಿದೆ.
SBI ನ ಹೊಸ ಯೋಜನೆಯ ಹೆಸರಿನಂದರೆ, ಎಸ್ಬಿಐ ಸ್ತ್ರೀ ಶಕ್ತಿ ಸಾಲ ಯೋಜನೆಯಾಗಿದೆ. ಈ ಯೋಜನೆಯಡಿ ಮಹಿಳೆಯರು ರೂ. 24 ಲಕ್ಷದವರೆಗೆ ಆರ್ಥಿಕ ನೆರವನ್ನು ಪಡೆಯಬಹುದು, ನೀವೇನಾದರೂ ಸ್ವಂತ ಉದ್ದಿಮೆಯನ್ನು(Business) ಆರಂಭಿಸಲು ಯೋಜಿಸುತ್ತಿದ್ದರೆ ಈ ಸೌಲಭ್ಯವನ್ನು ಪಡೆದುಕೊಳ್ಳಿ.
ಯೋಜನೆಯ ವೈಶಿಷ್ಟ್ಯತೆಗಳು:
ಮಹಿಳೆಯರು ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು (Loan) ಪಡೆಯಬಹುದು, ರೂ. ಲಕ್ಷಕ್ಕಿಂತ ಕಡಿಮೆ ಸಾಲಕ್ಕೆ 0.5% ಹೆಚ್ಚುವರಿ ಬಡ್ಡಿ ಸಬ್ಸಿಡಿಯು ದೊರೆಯಲಿದೆ.
10 ಲಕ್ಷಕ್ಕಿಂತ ಕಡಿಮೆ ಸಾಲಗಳಿಗೆ ಯಾವುದೇ ಮೇಲಾದಾರಗಳು ಅಗತ್ಯವಿಲ್ಲ, ಈ ಯೋಜನೆಯ ಸಾಲದ ಮೇಲೆ ಯಾವುದೇ ಪ್ರಕ್ರಿಯೆಯ ಶುಲ್ಕವಿರುವುದಿಲ್ಲ. ಮರುಪಾವತಿಗೆ ಹೊಂದಿಕೊಳ್ಳುವ ಆಯ್ಕೆಗಳು ಕೂಡ ಲಭ್ಯವಿದೆ.
ಅರ್ಹತೆಗಳು:
ಮಹಿಳೆಯರ ಹೆಸರಿನಲ್ಲಿ ಕನಿಷ್ಠ 51% ವ್ಯಾಪಾರದ ಪಾಲು ಇರಬೇಕು, ಹೊಸ ವ್ಯಾಪಾರವನ್ನು(Business) ಆರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ವ್ಯಾಪಾರವನ್ನು ವಿಸ್ತರಣೆ ಮಾಡಲು ಮಾತ್ರ ಈ ಸಾಲವನ್ನು ಪಡೆಯಬಹುದು.
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ, ಅಗತ್ಯವಿರುವ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ, ಮಹತ್ವದ ದಾಖಲೆಗಳನ್ನು(Importent Documents) ಬ್ಯಾಂಕಿಗೆ ಸಲ್ಲಿಸಿ, ನಿಮ್ಮ ಯೋಜನೆಯ (ಪ್ಲಾನ್) ಬಗ್ಗೆ ಬ್ಯಾಂಕಿಗೆ ತಿಳಿಸಬೇಕು.
ಅಗತ್ಯವಿರುವ ದಾಖಲೆಗಳು:
- Aadhar Card
- Pan Card
- Income Certificate
- Passport size Photo
- Business Plans Document
ಪ್ರಕ್ರಿಯೆಗಳು:
ಬ್ಯಾಂಕ್(Bank) ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿದ ನಂತರ, ನೀವು ಈ ಯೋಜನೆಗೆ ಅರ್ಹರು ಎಂದು ಭಾವಿಸಿದರೆ, ಬ್ಯಾಂಕ್ ಈ ಸಾಲವನ್ನು (Bank Loan) ಅನುಮೋದಿಸುತ್ತದೆ. ಅನುಮೋದಿತ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಪಡೆದುಕೊಳ್ಳಬಹುದು.
ಮಹಿಳೆಯರಿಗೆ ಈ ಯೋಜನೆಯಿಂದ ಸ್ವಯಂ ಉದ್ಯೋಗಕ್ಕೆ(Own Business) ಉತ್ತೇಜನವನ್ನು ಇಡುತ್ತದೆ, ಆರ್ಥಿಕತೆಯ ಸ್ವಾವಲಂಬನೆಯನ್ನು ಸಾಧಿಸಲು ಇದೊಂದು ಉತ್ತಮ ಅವಕಾಶವಾಗಿದೆ. ವ್ಯಾಪಾರ(Business) ಕ್ಷೇತ್ರದಲ್ಲಿ ಹೆಸರು ಗಳಿಸುವ ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನಕಾರಿಯಾಗಲಿದೆ.