Business Startup: 5,000 ರೂ.ಇಂದ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 40-50 ಸಾವಿರ ಗಳಿಸಿ!
ನೀವೇನಾದರು ಕಡಿಮೆ ಬಂಡವಾಳದಲ್ಲಿ ಸ್ವಂತ ಉದ್ದಿಮೆಯನ್ನು ಆರಂಭಿಸುವ ಕನಸನ್ನು ಕಾಣುತ್ತಿದ್ದೀರಾ? ಹಾಗಾದರೆ ಈ ಉದ್ದಿಮೆಯನ್ನು ಮನೆಯಲ್ಲಿಯೇ ಆರಂಭಿಸಿ, ತಿಂಗಳಿಗೆ 40-50 ಸಾವಿರ ಹಣವನ್ನು ಗಳಿಸಬಹುದು. ಮೊಬೈಲ್ ರಿಪೇರಿ(Mobile Repair) ತರಬೇತಿಯನ್ನು ಪಡೆದು, ಈ ಲಾಭದಾಯಕ ವ್ಯವಹಾರವನ್ನು ಇಂದೇ ಆರಂಭಿಸಬಹುದು.
ಇತ್ತೀಚಿನ ದಿನಗಳಲ್ಲಿ, ಎಲ್ಲರೂ ತಾವು ಮಾಡುವ ಕೆಲಸದಿಂದ ತುಂಬಾ ಬೇಸತ್ತು ಹೋಗಿದ್ದಾರೆ, ಸ್ವಂತ ಉದ್ದಿಮೆಯನ್ನು ಮಾಡುವ ಯೋಚನೆಯಲ್ಲಿದ್ದಾರೆ. ನೀವು ಸಹ ಇದೆ ಯೋಚನೆಯಲ್ಲಿ ಇದ್ದೀರಾ? ಯಾವ ಉದ್ದಿಮೆಯನ್ನು ಆರಂಭಿಸಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು? ಬಂಡವಾಳದ ಕೊರತೆ ಇದೆಯಾ?
ಇಂದು ನಾವು ನಿಮಗೆ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಉದ್ಯಮಿಯ ಬಗ್ಗೆ ಮಾಹಿತಿಯನ್ನು ತಿಳಿಸಿದ್ದೇವೆ. ಈ ಉದ್ದಿಮೆಯನ್ನು(Business) ಆರಂಭಿಸಿ ಕಡಿಮೆ ಸಮಯದಲ್ಲಿ ಪ್ರತಿದಿನವೂ ಹೆಚ್ಚಿನ ಆದಾಯವನ್ನು ಗಳಿಸಬಹುದು, ನೀವು ಇರುವ ಮನೆಯಲ್ಲಿಯೇ ಈ ಉದ್ದಿಮೆಯನ್ನು ಆರಂಭಿಸಬಹುದು.
ಇಂದಿನ ಯುಗದಲ್ಲಿ ಎಲ್ಲರ ಕೈಯಲ್ಲಿಯೂ ಒಂದು ಸ್ಮಾರ್ಟ್ ಫೋನ್(Smartphone) ಇದ್ದೇ ಇರುತ್ತದೆ, ಯಾವುದೇ ಸ್ಮಾರ್ಟ್ಫೋನ್ ಆಗಿರಲಿ ಒಂದಿಷ್ಟು ಸಮಯದ ಬಳಿಕ ಅದು ರಿಪೇರಿಗೆ ಬಂದೇ ಬರುತ್ತದೆ. ತಮ್ಮ ಸ್ಮಾರ್ಟ್ ಫೋನ್ ಗಾಗಿ ಜನರು ಹಣವನ್ನು ಖರ್ಚು ಮಾಡಲು ಸಿದ್ಧರಿರುತ್ತಾರೆ, ಹಾಗಾಗಿ ನೀವು ನಿಮ್ಮ ಊರಿನ ಮನೆಯಲ್ಲಿಯೇ ಚಿಕ್ಕದಾದ ಟೇಬಲ್ ಹಾಕಿಕೊಂಡು ಮೊಬೈಲ್ ರಿಪೇರಿ ಮತ್ತು ಬಿಡಿ ಭಾಗಗಳ(Mobile Accessories) ಮಾರಾಟ ಮಾಡಬಹುದು. ಈ ಉದ್ದಿಮೆಯು ವರ್ಷದ 12 ತಿಂಗಳು ಚಾಲ್ತಿಯಲ್ಲಿ ಇರುತ್ತದೆ.
ನಿಮಗೆ ಮೊಬೈಲ್ ರಿಪೇರಿ ಮಾಡುವುದು ಹೇಗೆ? ಎನ್ನುವುದರ ಬಗ್ಗೆ ಸಂಪೂರ್ಣ ಜ್ಞಾನವಿರಬೇಕು, ಒಂದು ವೇಳೆ ಈ ಉದ್ದಿಮೆಯನ್ನು ಆರಂಭಿಸುವ ಯೋಜನೆ ಇದ್ದರೆ ನೀವು ಕೇವಲ 2 ರಿಂದ 3 ತಿಂಗಳ ಒಳಗೆ ತರಬೇತಿಯನ್ನು (Course) ಪಡೆಯಬಹುದು. ಈ ಉದ್ದಿಮೆಯಲ್ಲಿ ಇಯರ್ ಫೋನ್ ಗಳು(Earphones), ಚಾರ್ಜರ್, ಬ್ಲೂಟೂತ್ ಸ್ಪೀಕರ್(Bluetooth Speaker), ಸೌಂಡ್ ಸ್ಪೀಕರ್, ಮೊಬೈಲ್ ಸ್ಟ್ಯಾಂಡ್(Mobile Stand) ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಿ ಹಣವನ್ನು ಗಳಿಸಬಹುದು. ದೊಡ್ಡ ಮೊಬೈಲ್ ಮಾರಾಟ ಮತ್ತು ಖರೀದಿಸುವ ಅಂಗಡಿಗಳಿಂದಲೂ ನಿಮಗೆ ರಿಪೇರಿ ಕೆಲಸ ಸಿಗುತ್ತದೆ, ನೀವು ಈ ಮೂಲವಾಗಿ ನಿಮ್ಮ ಉದ್ದಿಮೆಯನ್ನು ಹಂತ ಹಂತವಾಗಿ ವಿಸ್ತರಿಸುವ ಅವಕಾಶಗಳು ಈ ವ್ಯವಹಾರದಲ್ಲಿ ಹೇರಳವಾಗಿದೆ.
ನೀವು ಮೊಬೈಲ್ ಉದ್ದಿಮೆಯನ್ನು(Mobile Business) ಆರಂಭಿಸಲು ನಿಮಗೆ 5 ರಿಂದ 10 ಸಾವಿರ ರೂಪಾಯಿ ಬಂಡವಾಳ ಬೇಕಾಗುತ್ತದೆ, ನೀವು ಸಾಧಾರಣ ಮೊಬೈಲ್ ರಿಪೇರಿ(Mobile Repairing) ಮಾಡಿದರು ಸಹ 400 ರಿಂದ 500 ರೂಪಾಯಿ ಚಾರ್ಜ್ ಮಾಡಬಹುದು, ಈ ಮೂಲಕವಾಗಿ ನೀವು ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿ ಹಣ ಸಂಪಾದಿಸಬಹುದು.
ಸೂಚನೆ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ, ಯಾವುದೇ ವ್ಯಾಪಾರವು ಸಂಪೂರ್ಣವಾಗಿ ಮಾರುಕಟ್ಟೆಯ ಅಪಾಯಗಳನ್ನು ಒಳಗೊಂಡಿರುತ್ತದೆ, ಇದನ್ನು ನಮ್ಮ ವಾಹಿನಿಯು ದೃಢೀಕರಿಸುವುದಿಲ್ಲ.