SBI ಗ್ರಾಹಕರಿಗೆ ಸಿಹಿ ಸುದ್ದಿ! ಪ್ರತಿಯೊಬ್ಬರು ಲಕ್ಷಾಧಿಪತಿಗಳಾಗಬಹುದು
ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಲಕ್ಷಾಧಿಪತಿಯಾಗಲು SBI ಹೊಸ ಯೋಜನೆಯನ್ನು ಆರಂಭಿಸಿದೆ, ಅದೇ ಹರ್ ಘರ್ ಲಕ್ಪತಿ ಯೋಜನೆ, ಯೋಜನೆಯ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಹೊಸ ಮರುಕಳಿಸುವ ಠೇವಣಿ (RD) ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯ ಹೆಸರೇ ಹರ್ ಘರ್ ಲಖಪತಿ ಯೋಜನೆ, ಪ್ರತಿಯೊಬ್ಬರೂ ಕೂಡ ಲಕ್ಷಾಧಿಪತಿಗಳಾಗಲಿ ಎಂದು ಈ ಯೋಜನೆಯನ್ನು ಆರಂಭಿಸಲಾಗಿದೆ. ನೀವು ತಿಂಗಳಿಗೆ ಈ ಯೋಜನೆಯಲ್ಲಿ ಸಣ್ಣ ಸಣ್ಣ ಹಣವನ್ನು ಹೂಡಿಕೆ ಮಾಡುವ ಮುಖಾಂತರ ಲಕ್ಷ ಅಥವಾ ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಜಮಾ(Deposit) ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಸಾಮಾನ್ಯರಿಗೆ 6.75% ಮತ್ತು ಹಿರಿಯ ನಾಗರಿಕರಿಗೆ 7.25% ವಾರ್ಷಿಕ ಬಡ್ಡಿ(Intrest)ಯನ್ನು ನೀಡಲಾಗುತ್ತದೆ.
ಇದಕ್ಕೂ ಮುನ್ನ ನೀವು ಮರುಕಳಿಸವ ಠೇವಣಿ(RD) ಅಂದರೆ ತಿಳಿದುಕೊಳ್ಳಬೇಕು, RD ಯಿಂದ ನಿಮಗೆ ದೊಡ್ಡ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ಈ ಯೋಜನೆಯನ್ನು ಪಿಗ್ಗಿ ಬ್ಯಾಂಕ್(Piggy Bank) ಎಂದು ಕರೆಯಲಾಗುತ್ತದೆ. ಇದರ ಅರ್ಥವೇನೆಂದರೆ, ನೀವು ಪ್ರತಿ ತಿಂಗಳು ಸಂಬಳ(Sallary) ಪಡೆದ ನಂತರ ಸ್ವಲ್ಪ ಹಣವನ್ನು ಹೂಡಿಕೆ ಮಾಡಬೇಕು, ಅದು ಮೆಚುರಿಟಿ ಅವಧಿಯ ಕೊನೆಯಲ್ಲಿ, ನಿಮ್ಮ ಕೈಗೆ ದೊಡ್ಡ ಮೊತ್ತವಾಗಿ ಸಿಗುತ್ತದೆ. ಈ ಯೋಜನೆಯ ಮುಕ್ತಾಯ ಅವಧಿಯು 3 ವರ್ಷದಿಂದ 10 ವರ್ಷಗಳವರೆಗೆ ಇರುತ್ತದೆ. ಅಂದರೆ ನೀವು ಈ ಯೋಜನೆಯಲ್ಲಿ 3 ವರ್ಷದಿಂದ 10 ವರ್ಷಗಳವರೆಗೆ ಹೂಡಿಕೆ (Investment) ಮಾಡಬಹುದು.
ಇದರಲ್ಲಿ ಯಾರು ಹೂಡಿಕೆ ಮಾಡಬಹುದು?
SBI ನ ಈ ಯೋಜನೆಯಲ್ಲಿ ಯಾವುದೇ ಭಾರತೀಯ ನಾಗರಿಕರು ಹೂಡಿಕೆ ಮಾಡಬಹುದು, ವ್ಯಕ್ತಿಗಳು ಇದರಲ್ಲಿ ಒಬ್ಬಂಟಿಯಾಗಿ ಇಲ್ಲವೇ ಜಂಟಿಯಾಗಿ ಖಾತೆಯನ್ನು ತೆರೆಯಬಹುದು. ಇದೇ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ (10 ವರ್ಷ ಮೇಲ್ಪಟ್ಟವರು ಮತ್ತು ಸ್ಪಷ್ಟವಾಗಿ ಸಹಿ ಮಾಡಲು ಅರ್ಹರು) ಖಾತೆಯನ್ನು ತೆರೆಯಬಹುದು. ಮರುಕಳಿಸುವ ಠೇವಣಿ(RD)ಯ ಮೇಲೆ ಬರುವ ಬಡ್ಡಿಯ (Intrest) ಆದಾಯದ ಮೇಲೆ ತೆರಿಗೆ (Tax) ವಿಧಿಸಲಾಗುತ್ತದೆ. ಮರುಕಳಿಸುವ ಠೇವಣಿಯ ಬಡ್ಡಿಯಿಂದ ಬರುವ ಆದಾಯವು 40,000 ಇದ್ದರೆ (ಹಿರಿಯ ನಾಗರಿಕರಿಗೆ ರೂ.50,000), ಅದಕ್ಕೆ ನೀವು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ, ಇದಕ್ಕಿಂತ ಹೆಚ್ಚಿನ ಬಡ್ಡಿಯ ಆದಾಯವಿದ್ದರೆ 10% TDS ಕಡಿತಗೊಳಿಸಬೇಕಾಗುತ್ತದೆ.
ಲಕ್ಷಾಧಿಪತಿಯಾಗಲು ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಜನರನ್ನು ಮಿಲಿನಿಯರ್ ಆಗಿ ಮಾಡಲು ಈ ಯೋಜನೆಯನ್ನು ಆರಂಭಿಸಿದೆ, ಈ ಯೋಜನೆಯಿಂದ 1 ಲಕ್ಷ ಸಂಪಾದಿಸಲು, ಸಾಮಾನ್ಯ ನಾಗರಿಕರು ಮೂರು ವರ್ಷಗಳ ಕಾಲ ಪ್ರತಿ ತಿಂಗಳು ರೂ.2,500 ಠೇವಣಿ ಇಡಬೇಕಾಗುತ್ತದೆ, ಅಂದರೆ ಗ್ರಾಹಕರು 36 ತಿಂಗಳು ರೂ.2,500 ಕಂತು ಪಾವತಿಸಬೇಕಾಗುತ್ತದೆ. ಗ್ರಾಹಕರು ಹೆಚ್ಚಿನ ಹಣವನ್ನು ಸಂಗ್ರಹಿಸಲು ಪ್ರತಿ ತಿಂಗಳು ಹೆಚ್ಚಿನ ಠೇವಣಿಯನ್ನು ಇಡಬೇಕಾಗುತ್ತದೆ. ಹೂಡಿಕೆದಾರರು ತಮ್ಮ ಇಷ್ಟದ ಗುರಿಯನ್ನು ತಲುಪಲು 3 ವರ್ಷಗಳಿಂದ 10 ವರ್ಷಗಳವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಅಂದರೆ ನಿಮ್ಮ ಅವಶ್ಯಕತೆ ಅನುಗುಣವಾಗಿ ಹೂಡಿಕೆ ಮಾಡಬಹುದು.