SSLC BOARD EXAM DATE: 10ನೇ ತರಗತಿ ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ.
2024-25 ನೇ ಸಾಲಿನ SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ, ಮಾರ್ಚ್ 21ರಿಂದ ಪರೀಕ್ಷೆ ಆರಂಭವಾಗಿ ಏಪ್ರಿಲ್ 4ರ ವರೆಗೆ ಪರೀಕ್ಷೆಯು ಚಾಲ್ತಿಯಲ್ಲಿರಲಿದೆ ಎಂದು ಕರ್ನಾಟಕ ಶಾಲಾ ಪರಿಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ತಿಳಿಸಿದೆ. ರಾಜ್ಯದ ಎಲ್ಲಾ ಪ್ರೌಢಶಾಲೆ ಶಿಕ್ಷಕರು ತಮ್ಮ ಶಾಲಾ ಘಟಕಗಳಲ್ಲಿ ಪ್ರಕಟಿಸಿದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸೂಚಿಸಲು ತಿಳಿಸಿದೆ.
2025ರ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ
1. ಮಾರ್ಚ್ 21, 2025 (ಶುಕ್ರವಾರ): ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (NCERT), ಸಂಸ್ಕೃತ (ಪ್ರಥಮ ಭಾಷೆ).
2. ಮಾರ್ಚ್ 24, 2025 (ಸೋಮವಾರ): ಗಣಿತ, ಸಮಾಜಶಾಸ್ತ್ರ.
3. ಮಾರ್ಚ್ 26, 2025 (ಬುಧವಾರ): ಇಂಗ್ಲೀಷ್, ಕನ್ನಡ (ದ್ವಿತೀಯ ಭಾಷೆ).
4. ಮಾರ್ಚ್ 29, 2025 (ಶನಿವಾರ): ಸಮಾಜ ವಿಜ್ಞಾನ.
5. ಏಪ್ರಿಲ್ 01, 2025 (ಮಂಗಳವಾರ): ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್ -4, ಎಲೆಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-4, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-4, ಪ್ರೋಗ್ರಾಮಿಂಗ್ ಇನ್ ANSI’C, ಅರ್ಥಶಾಸ್ತ್ರ.
6. ಏಪ್ರಿಲ್ 02 2025 (ಬುಧವಾರ): ರಾಜ್ಯಶಾಸ್ತ್ರ, ವಿಜ್ಞಾನ, ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ.
7. ಏಪ್ರಿಲ್ 04, 2025( ಶುಕ್ರವಾರ): ಹಿಂದಿ, ಹಿಂದಿ (NCERT), ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಪರ್ಷಿಯನ್, ಸಂಸ್ಕೃತ, ಕೊಂಕಣಿ, ತುಳು (ತೃತೀಯ ಭಾಷೆ).
8. ಏಪ್ರಿಲ್ 04,2025 ( ಶುಕ್ರವಾರ): ಆಟೋಮೊಬೈಲ್, ಮಾಹಿತಿ ತಂತ್ರಜ್ಞಾನ, ರಿಟೇಲ್, ಬ್ಯೂಟಿ ಅಂಡ್ ವೆಲ್ನೆಸ್, ಹೋಂ ಪರ್ನಿಶಿಂಗ್ & ಅಪರಿಲ್ ಮೇಡ್ ಅಪ್ಸ್, ಹಾರ್ಡ್ವೇರ್ & ಎಲೆಕ್ಟ್ರಾನಿಕ್ಸ್(NSQF ವಿಷಯಗಳು).
ಕರ್ನಾಟಕ ಶಾಲಾ ಶಿಕ್ಷಾ ಮತ್ತು ಪರೀಕ್ಷಾ ನಿರ್ಣಯ ಮಂಡಳಿಯು, ಆಯಾ ಶಾಲೆಯ ನೋಟಿಸ್ ಬೋರ್ಡ್ ನಲ್ಲಿ ಪರಿಚಯ ದಿನಾಂಕದ ಬಗ್ಗೆ ವಿದ್ಯಾರ್ಥಿಗಳಿಗೆ ಸೂಚಿಸಲು ಆದೇಶವನ್ನು ಹೊರಡಿಸಿದೆ. ವಿದ್ಯಾರ್ಥಿಗಳು ಆಯಾ ಶಾಲೆಯ ನೋಟಿಸ್ ಬೋರ್ಡ್ ವಿಚಾರಿಸುವುದರ ಮೂಲಕ ಹತ್ತನೇ ತರಗತಿಯ ಪರೀಕ್ಷಾ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.