Compensation Money ರೈತರಿಗೆ ಸಿಹಿ ಸುದ್ದಿ! ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ

Compensation Money ರೈತರಿಗೆ ಸಿಹಿ ಸುದ್ದಿ! ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ

Compensation Money: ಕರ್ನಾಟಕದ ಆಯಾ ಜಿಲ್ಲೆಗಳಲ್ಲಿ ಉಂಟಾದ ಬೆಳೆ ಹಾನಿ ಪರಿಹಾರದ ಹಣವನ್ನು ಹಂತ-ಹಂತವಾಗಿ ಪರಿಹಾರ ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತಿದೆ.

ರಾಜ್ಯದಲ್ಲಿ 2024-25 ನೇ ಸಾಲಿನಲ್ಲಿ ಬಹಳಷ್ಟು ನೈಸರ್ಗಿಕ ವಿಕೋಪಗಳು ಎದುರಾಗಿ ಧಾರವಾಡ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಪರಿಹಾರವನ್ನು ಈಗ ವಿತರಣೆ ಮಾಡಲಾಗುತ್ತಿದೆ, ಮೊದಲ ಮತ್ತು ಎರಡನೇ ಹಂತದಲ್ಲಿ ಬೆಳೆ ಹಾನಿ ಪರಿಹಾರವನ್ನು ಇಲ್ಲಿಯವರೆಗೆ ಜಿಲ್ಲೆಯ ಏಳು ತಾಲೂಕಿನ 65,573 ರೈತ ಫಲಾನುಭವಿಗಳಿಗೆ 48.45 ಕೋಟಿ ರೂಪಾಯಿಗಳನ್ನು ಒಟ್ಟು ಕ್ಷೇತ್ರ 55,809.19 ಹೆಕ್ಟರ್ ಗೆ ಇನ್ ಪುಟ್ ಸಬ್ಸಿಡಿ ಜಮೆ ಮಾಡಲಾಗಿದೆ.

ಧಾರವಾಡ ಜಿಲ್ಲೆಯಲ್ಲಿ 1 ನೇ ಹಂತವಾಗಿ ಸೆಪ್ಟಂಬರ್ ತಿಂಗಳಲ್ಲಿ ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲ್ಲೂಕುಗಳಲ್ಲಿ ಒಟ್ಟು 19,058 ಜನ ರೈತರಿಗೆ 6.34 ಕೋಟಿ ರೂ. ಒಟ್ಟು ಕ್ಷೇತ್ರ 7,706.51 ಹೆಕ್ಟರಗೆ ಇನ್ ಪುಟ್ ಸಬ್ಸಿಡಿ(Input Subsidy)ಯನ್ನು ಜಮೆ ಮಾಡಲಾಗಿದೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಸುಮಾರು ಏಳು ತಾಲೂಕುಗಳಿಗೆ ಎರಡನೇ ಹಂತದಲ್ಲಿ ಈಗಾಗಲೇ ಒಟ್ಟು 50,515 ಜನ ರೈತರಿಗೆ 42.11 ಕೋಟಿ ರೂಪಾಯಿ, ಒಟ್ಟು ಕ್ಷೇತ್ರ 48,102.68 ಯಾಕ್ಟರಿಗೆ Input Subsidy ಯನ್ನು ಜಮೆ ಮಾಡಲಾಗಿದೆ.

 

 

WhatsApp Group Join Now
Telegram Group Join Now

Leave a Comment

copy
share with your friends.