Ration Card: ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ಹೊಂದಿದವರಿಗೆ ಮಹತ್ವದ ಆದೇಶ ಜಾರಿ

Ration Card: ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ಹೊಂದಿದವರಿಗೆ ಮಹತ್ವದ ಆದೇಶ ಜಾರಿ

Ration Card: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಯಾವುದೇ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಬಹುಮುಖ್ಯವಾಗಿದೆ, ಅದಲ್ಲದೆ ರಾಜ್ಯದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ (Guarantee Schemes) ಲಾಭ ಪಡೆಯಲು ಕೂಡ ರೇಷನ್ ಕಾರ್ಡ್ ಪ್ರಮುಖವಾದ ದಾಖಲೆಯಾಗಿದೆ. ಆದರೆ ರೇಷನ್ ಕಾರ್ಡ್ ನ ಹಲವು ಬದಲಾವಣೆಗಳಿಗಾಗಿ ಜನ ಕಾಯುತ್ತಿದ್ದಾರೆ, ಜೊತೆಗೆ ಹೊಸ ತಿದ್ದುಪಡಿಗೂ ಕೂಡ ಕಾಯುತ್ತಿದ್ದಾರೆ.

ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಈ ಹಿಂದೆ ಹಲವು ಅವಕಾಶಗಳನ್ನು ಕೂಡ ನೀಡಲಾಗಿತ್ತು, ಇದೀಗ ಮತ್ತೆ ರೇಷನ್ ಕಾರ್ಡ್(Ration Card) ನಲ್ಲಿ ಹೆಸರು ತಿದ್ದುಪಡಿ ಮತ್ತು ಹೊಸ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ.

ಇದೀಗ, ಪಡಿತರ ಚೀಟಿಯಲ್ಲಿ ಹೊಸ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಸಮಯವನ್ನು ನಿಗದಿ ಮಾಡಿದ್ದು, ಹಾಗೆಯೇ ಕೊನೆಯ ದಿನಾಂಕಗಳನ್ನು ಕೂಡ ನಿಗದಿಪಡಿಸಲಾಗಿದೆ. ಹಾಗಾದ್ರೆ ರೇಷನ್ ಕಾರ್ಡನ್ನು ಎಲ್ಲಿ ತಿದ್ದುಪಡಿ ಮಾಡಬೇಕು?, ಕೊನೆಯ ದಿನಾಂಕ ಯಾವಾಗ?, ಹೇಗೆ ತಿದ್ದುಪಡಿ ಮಾಡುವುದು?, ಇಷ್ಟು ಸಮಯ ಬೇಕು? ಅಲ್ಲದೆ ಯಾವೆಲ್ಲ ದಾಖಲೆಗಳು ಬೇಕು? ಎನ್ನುವುದರ ಮಾಹಿತಿಯ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ತಿದ್ದುಪಡಿಗೆ ಕೊನೆಯ ದಿನಾಂಕ ಯಾವಾಗ:

ಈ ಹಿಂದೆ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಲು 31 ಡಿಸೆಂಬರ್ ವರೆಗೆ ಅವಕಾಶವನ್ನು ನೀಡಲಾಗಿತ್ತು, ಆದರೆ ಇದೀಗ 31 ಜನವರಿ ಕೊನೆಯ ಅವಕಾಶವನ್ನು ಕಲ್ಪಿಸಲಾಗಿದೆ.

ಎಲ್ಲಿ ತಿದ್ದುಪಡಿ ಮಾಡಬಹುದು?;

ಪಡಿತರ ಚೀಟಿ ತಿದ್ದುಪಡಿ ಮಾಡುವವರು ಹತ್ತಿರ ಇರುವ ಕರ್ನಾಟಕ ಒನ್(Karnataka One), ಗ್ರಾಮ ಒನ್(Gram one) ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು..

ಸಮಯ ನಿಗದಿ:

ಪಡಿತರ ಚೀಟಿ(Ration Card) ತಿದ್ದುಪಡಿ ಮಾಡಲು ಬೆಳಿಗ್ಗೆ 10 ರಿಂದ ಸಂಜೆ 5:00 ವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ಬೇಕಾಗಿರುವ ದಾಖಲೆಗಳು

  • ಐದು ವರ್ಷದೊಳಗಿನ ಮಕ್ಕಳ ಹೆಸರನ್ನು ಸೇರ್ಪಡೆ ಮಾಡಲು, ಮಗುವಿನ ಆಧಾರ್ ಕಾರ್ಡ್, ಆಧಾರ್ ಕಾರ್ಡ್(Aadhar Card) ಗೆ ಜೋಡಣೆ ಆಗಿರುವ ಮೊಬೈಲ್ ನಂಬರ್(Mobile No.) ಹಾಗೂ ಮಗುವಿನ ಜನನ ಪ್ರಮಾಣ ಪತ್ರ
  • ಆರು ವರ್ಷ ನಂತರದ ಮಗುವಿನ ಹೆಸರನ್ನು ಸೇರ್ಪಡೆ ಮಾಡಲು ಆಧಾರ್ ಕಾರ್ಡ್ ಮತ್ತು ಆದಾಯ ಪ್ರಮಾಣ ಪತ್ರ
  • ಮದುವೆಯಾದ ಹೆಣ್ಣಿನ ಹೆಸರನ್ನು ಸೇರ್ಪಡೆ ಮಾಡಲು ಮದುವೆ ಆಮಂತ್ರಣ ಪತ್ರ ಅಥವಾ ಮದುವೆ ನೋಂದಣಿ ಪತ್ರ.

ಪ್ರಮುಖ ಸುದ್ದಿಗಳು:

Jio Family Recharge Plan: ಒಂದು ರಿಚಾರ್ಜ್ ಪ್ಲಾನ್, ಕುಟುಂಬದ ಸದಸ್ಯರಿಗೆಲ್ಲ ಉಚಿತ ಡೇಟಾ ಮತ್ತು ಕರೆ ಸೌಲಭ್ಯ; ಇಲ್ಲಿದೆ ಸಂಪೂರ್ಣ ಮಾಹಿತಿ

Gold Rate Today: ಚಿನ್ನ ಪ್ರಿಯರಿಗೆ ಭಾರಿ ಶಾಕ್! ಸಂಕ್ರಾಂತಿ ಹಬ್ಬದ ಹಿನ್ನೆಲೆ ಚಿನ್ನದ ಬೆಲೆ ಭಾರಿ ಏರಿಕೆ

State Bank: ಬೆಳ್ಳಂ ಬೆಳಿಗ್ಗೆ ಸ್ಟೇಟ್ ಬ್ಯಾಂಕ್ ಖಾತೆಯನ್ನು ಹೊಂದಿದವರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ

Leave a Comment