BMTC BUS PASS: ಬಸ್ ಪಾಸ್ ದರ ಏರಿಕೆ! ನಾಳೆಯಿಂದಲೇ ಜಾರಿ, ಪರಿಷ್ಕೃತ ದರಪಟ್ಟಿ ಬಿಡುಗಡೆ
ರಾಜ್ಯ ಸರ್ಕಾರವು ಬಸ್ ದರಗಳನ್ನು ಏರಿಸಿದ ಬೆನ್ನಲ್ಲೇ, BMTC ಬಸ್ ಪಾಸ್ ದರವನ್ನು ಹೆಚ್ಚಿಸಿದೆ, ರಾಜ್ಯಾದ್ಯಂತ ನಾಳೆಯಿಂದಲೇ ಜಾರಿಗೆ ತರುವಂತಹ ಆದೇಶ ಹೊರಡಿಸಿದೆ. ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ ದರಗಳು ಏರಿಕೆಯಾಗಿವೆ.
ರಾಜ್ಯದ ರಸ್ತೆ ಸಾರಿಗೆ ನಿಗಮದ BMTC ಸೇರಿದಂತೆ ನಾಲ್ಕು ವಿಭಾಗಗಳ ಬಸ್ ಪ್ರಯಾಣದ ದರವನ್ನು 15% ಎಷ್ಟು ಹೆಚ್ಚಳ ಮಾಡಿ ಭಾನುವಾರದಿಂದ ಜಾರಿಗೆ ತರಲಾಗಿದೆ. ಇದರ ಬೆನ್ನಲ್ಲೇ BMTC ಕೂಡ ಬಸ್ ಪಾಸಿನ ದರವನ್ನು ಹೆಚ್ಚಳ ಮಾಡಿ ನಾಳೆಯಿಂದಲೇ ಜಾರಿಗೆ ತರುವುದಾಗಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಸಾರಿಗೆ ನಿಗಮಗಳಾದ, KKRTC, KSRTC ಹಾಗೂ ಬಿಎಂಟಿಸಿ ಬಸ್ ದರಗಳನ್ನು ಪರಿಷ್ಕರಣೆ ಮಾಡಿ 15% ಪರ್ಸೆಂಟ್ ಟಿಕೆಟ್ ದರವನ್ನು ಹೆಚ್ಚಳ ಮಾಡಿತ್ತು, ಕಳೆದ ನಾಲ್ಕು ದಿನಗಳ ಹಿಂದೆ ಭಾನುವಾರದಿಂದ ಈ ಹೊಸ ದರಗಳನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ. ಆದರೆ ಸರ್ಕಾರವು ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಿ, ಬಸ್ ಪಾಸ್ ದರ ಪರಿಷ್ಕರಣೆ ಮಾಡುವುದನ್ನು ಮರೆತಿತ್ತು, ಹೀಗಾಗಿ ಪ್ರಯಾಣಿಕರ ಎಲ್ಲರು ದೈನಂದಿನ ಬಸ್ ಪಾಸ್ ತೆಗೆದುಕೊಂಡು ಓಡಾಡಲು ಮುಂದಾಗಿದ್ದರು, ಇದೀಗ ಬಸ್ ಪಾಸ್ ದರಗಳನ್ನು ಕೂಡ ಪರಿಷ್ಕರಣೆ ಮಾಡಿ BMTC ಆದೇಶ ಹೊರಡಿಸಿದೆ.
BMTC ಯಿಂದ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ ದರಗಳನ್ನು ಏರಿಕೆ ಮಾಡಲಾಗಿದ್ದು, ನಾಳೆಯಿಂದಲೇ ಈ ಪರಿಷ್ಕೃತ ದರಗಳು ಎಲ್ಲೆಡೆ ಅನ್ವಯ ಆಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾಮಾನ್ಯ ಬಸ್‌ಗಳ ಪಾಸ್ ದರ ಪರಿಷ್ಕರಣೆ ಪಟ್ಟಿ;
ಪಾಸುಗಳ ವಿಧ | ಹಳೆಯ ದರ
ರೂ. ಗಳಲ್ಲಿ |
ಹೊಸದರ ರೂ. ಗಳಲ್ಲಿ |
ದಿನದ ಪಾಸು | 70 | 80 |
ವಾರದ ಪಾಸು | 300 | 350 |
ತಿಂಗಳ ಪಾಸು | 1050 | 1200 |
ನೈಟ್ ರಸ್ತೆಯ ಮಾಸಿಕ ಪಾಸು (ಟೋಲ್ ಶುಲ್ಕ ಸೇರಿ) | 2200 | 2350 |
ವಜ್ರ ಮತ್ತು ವಾಯು ವಜ್ರ ಬಸ್ ಪಾಸ್ ಪರಿಷ್ಕರಣೆ ವಿವರ;
ಪಾಸುಗಳ ವಿಧ | ಹಳೆಯ ದರ
ರೂ. ಗಳಲ್ಲಿ |
ಹೊಸದರ ರೂ. ಗಳಲ್ಲಿ |
ವಜ್ರ ಬಸ್ ದಿನದ ಪಾಸು | 120 | 140 |
ವಜ್ರ ಬಸ್ ವಾರದ ಪಾಸು | 1800 | 2000 |
ವಾಯು ವಜ್ರ ಬಸ್ ಮಾಸಿಕ ಪಾಸು | 3755 | 4000 |
ವಿದ್ಯಾರ್ಥಿ ವಜ್ರ ಮಾಸಿಕ ಪಾಸು | 1200 | 1400 |