Smart Aadhar Card: ಸ್ಮಾರ್ಟ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೂ ಕೇಂದ್ರ ಸರ್ಕಾರದ ಆಧಾರ್ ಕಾರ್ಡ್ ಗುರುತಿನ ಚೀಟಿಯನ್ನು ನೀಡಿದೆ, ದೈನಂದಿನ ವ್ಯವಹಾರಿಕ ಚಟುವಟಿಕೆಗಳ ಅನುಗುಣವಾಗಿ ಎಲ್ಲರೂ ಆಧಾರ (Aadhar) ಬಳಸುತ್ತಾರೆ. ನಿಮ್ಮ ಆಧಾರ್ ಕಾರ್ಡ್ ಅವ್ಯವಹಾರಕ ಚಟುವಟಿಕೆ ನಡೆಸುವವರ ಕೈಗೆ ಸಿಕ್ಕರೆ ದುರುಪಯೋಗ ಹಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದಾಗಿ ಸರ್ಕಾರವು ಆಧಾರ್ ಬದಲಾಗಿ ಪ್ಯಾಕೆಟ್ ಸೈಜಿನ ಪಿವಿಸಿ ಆಧಾರ್ ಪಡೆಯಲು UIDAI (ಭಾರತೀಯ ವಿಜಿಷ್ಟ ಗುರುತಿನ ಪ್ರಾಧಿಕಾರ) ಅವಕಾಶ ಮಾಡಿಕೊಟ್ಟಿದೆ.
ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ ಮಾತ್ರವಲ್ಲದೆ ಭಾರತೀಯ ನಾಗರಿಕರು ಎಂದು ಗುರುತಿಸಲು ಆಧಾರ್ ಹೊಂದಿರುವುದು ಅತ್ಯವಶ್ಯಕವಾಗಿದೆ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ನಾಗರಿಕರವರೆಗೂ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ, ಸರ್ಕಾರವು 12 ಅಂಕಿಯ ಆಧಾರ್ ಕಾರ್ಡ್ ಅನ್ನು ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ, ಅಪ್ಡೇಟ್ ಮಾಡಲು ಸೂಚನೆ ನೀಡುತ್ತಲೇ ಇದೆ.
ಹೊಸ ಆಧಾರ್ ಕಾರ್ಡ್ ಹೇಗಿರಲಿದೆ?
ಭಾರತೀಯ ನಾಗರಿಕರಿಗೆ, UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಪ್ಯಾಕೆಟ್ ಸಾಜಿನ ಆಧಾರ್ ಕಾರ್ಡ್ ಪಡೆಯಲು ಅವಕಾಶ ನೀಡಿದೆ, ಆಸಕ್ತರು ಆನ್ಲೈನ್ ಮೂಲಕ ಹೊಸ ಆಧಾರ್ ಕಾರ್ಡ್ ಪಡೆಯಬಹುದು, ATM, ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ರೀತಿಯಲ್ಲಿ PVS Aadhar Card ಅನ್ನು ಪರಿಚಯಿಸಲಾಗಿದೆ.
ನೀವು ಈ ಸ್ಮಾರ್ಟ್ ಆಧಾರ್ ಕಾರ್ಡ್ ಹೊಂದಿ ಎಲ್ಲಿ ಬೇಕಾದರೂ ಕೊಂಡಯ್ಯಬಹುದು, ಪ್ಯಾಕೆಟ್ ಸೈಜಿನ ಆಧಾರ್ ಕಾರ್ಡನ್ನು ನೀವು ಜೇಬಿನಲ್ಲಿಟ್ಟುಕೊಳ್ಳಲು ಅಥವಾ ವ್ಯಾಲೆಟ್ ನಲ್ಲಿ ಇರಿಸಲು ಅನುಕೂಲಕರ. ನೀವು ಇಂತಹ ಸ್ಮಾರ್ಟ್ ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ, ಕೂಡಲೇ ಪ್ರಾಧಿಕಾರದ ವೆಬ್ ಸೈಟ್ (UIDAI) ಗೆ ಭೇಟಿ ನೀಡಿ ಆನ್ಲೈನ್ (Online) ಮೂಲಕ ಆರ್ಡರ್ ಮಾಡಬಹುದು.
ಪಿವಿಸಿ ಆಧಾರ್ ಕಾರ್ಡ್ ಪಡೆಯುವುದು ಹೇಗೆ?
- ನೀವು ಆನ್ಲೈನ್ ಮೂಲಕ PVC ಆಧಾರ್ ಕಾರ್ಡ್ ಪಡೆಯಬಹುದು
- ಮೊದಲು ನೀವು ಮೇಲೆ ಕಾಣಿಸಿದ ಅಧಿಕೃತ ಪ್ರಾಧಿಕಾರ ವೆಬ್ ಸೈಟ ಗೆ ಭೇಟಿ ನೀಡಿ
- ನಂತರ ಕಾಣುವ ಪರಧಿಯ ಮೇಲೆ ನಿಮ್ಮ 12 ಅಂಕಿಯ ಸಂಖ್ಯೆ ನಮೂದಿಸಿ, ಕ್ಯಾಪ್ಚಾ ಕೊಡ್ ಬಳಸಿ
- ನಂತರ ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಕಳುಹಿಸಿ, ನಂತರ ಆ ಸಂಖ್ಯೆಯನ್ನು ನಮೂದಿಸಿ.
- ನಂತರ ಹೊಸ ಆಧಾರ್ ಕಾರ್ಡ್ ಪಡೆಯಲು ರೂ.50 ಪಾವತಿಸಬೇಕು
- ನಂತರ ಮುಂದಿನ ವಿಧಾನಗಳನ್ನು ಮೂಡಿಸಿದ ಬಳಿಕ, ಹೊಸ ಆಧಾರ್ ಕಾರ್ಡ್ ನಿಮ್ಮ ಮನೆಗೆ ಸ್ಪೀಡ್ ಪೋಸ್ಟ್ (Speed Post) ಮುಖಾಂತರ ಬರಲಿದೆ.