Pump Set ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಜಾರಿ
ರಾಜ್ಯದಲ್ಲಿ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಸುಮಾರು 4.5 ಲಕ್ಷ ಕೃಷಿಪಂಪ್ಸೆಟ್ ಗಳು ಇದ್ದು, ಈಗಾಗಲೇ ಸುಮಾರು 2.5 ಲಕ್ಷ ಪಂಪ್ಸೆಟ್ಟುಗಳನ್ನು ಅಕ್ರಮ ಸಕ್ರಮ ಯೋಜನೆ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ, ಇನ್ನುಳಿದ 2 ಲಕ್ಷ ಪಂಪ್ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಏಜೆನ್ಸಿ ಅವರನ್ನು ನಿಗದಿಪಡಿಸಲಾಗಿದೆ ಎಂದು ಇಂಧನ ಸಚಿವರಾದ ಕೆ. ಜೆ. ಚಾರ್ಜ್ ಅವರು ಹೇಳಿದ್ದಾರೆ.
ರಾಜ್ಯದ ಕೆಲವು ತಾಲೂಕುಗಳು ಪದೇ ಪದೇ ಬರಕ್ಕೆ ತುತ್ತಾಗುವ ಪ್ರದೇಶವಾಗಿದ್ದು, ಈ ಭಾಗದಲ್ಲಿ ಯಾವುದೇ ನದಿಯ ನೀರಿನ ಮೂಲ ಲಭ್ಯವಿರುವುದಿಲ್ಲ, ಹೀಗಾಗಿ ಸುಮಾರು 70,000 ಪಂಪ್ಸೆಟ್ಟುಗಳನ್ನು ಅಕ್ರಮ ಸಕ್ರಮ ಯೋಜನೆ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.
ಕೃಷಿ ಪಂಪ್ಸೆಟ್ಗಳ ಜೊತೆಗೆ, ಭದ್ರಾ ಮೇಲ್ದಂಡೆ ಯೋಜನೆ ಅಡಿ ಸುಮಾರು 1.35 ಲಕ್ಷ ಎಕರೆಗೆ ನೀರು ಒದಗಿಸಲಾಗುವುದು ಹಾಗೂ ಭದ್ರಾ ಜಲಾಶಯದಿಂದ ರೂ.800 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಪೂರೈಕೆ ಯೋಜನೆ ಜಾರಿಯಾಗುತ್ತಿದ್ದು, ಇವೆಲ್ಲದಕ್ಕೂ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆಯೆಂದು ಇಂಧನ ಸಚಿವರು ಹೇಳಿದರು.
ವಿದ್ಯುತ್ ಪೂರೈಕೆಯ ಸಲುವಾಗಿ, ಕ್ಷೇತ್ರದ ವ್ಯಾಪ್ತಿಯಲ್ಲಿ 04 ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡುವಂತೆ ಇಂಧನ ಸಚಿವರಿಗೆ ಮನವಿ ಮಾಡಿದರು, ಇದಕ್ಕೆ ಸ್ಪಂದಿಸಿದ ಇಂಧನ ಸಚಿವರು ಭೂಮಿಯನ್ನು ಸರಿಯಾಗಿ ಗುರುತಿಸಿ ಕೊಟ್ಟರೆ ಆದ್ಯತೆಯ ಮೇರೆಗೆ ವಿದ್ಯುತ್ ಸ್ಟೇಷನ್ ಗಳನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.