Pump set: ಕೃಷಿ ಪಂಪ್ ಸೆಟ್ ಗಳಿಗೆ ಸಂಬಂಧಿಸಿದ ಹಾಗೆ ಮಹತ್ವದ ಆದೇಶ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ
ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಲಾಡ್ ಅವರು ಬೆಳೆಗಳಿಗೆ ನೀರು ಹಾಯಿಸಲು, ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಕಲಘಟಗಿ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ಕೃಷಿ ಕಾರ್ಯಕ್ರಮದಲ್ಲಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ರೈತರ ಕೃಷಿ ಜಮೀನುಗಳಿಗೆ ಪಂಪ್ ಸೆಟ್ಗಳಿಗೆ ಸರ್ಕಾರದ ನಿಯಮಾನುಸಾರ ಹಗಲು ಹೊತ್ತಿನಲ್ಲಿ ಸರಿಯಾಗಿ ವಿದ್ಯುತ್ ಪೂರೈಸಬೇಕು.
ರಾಜ್ಯ ಸರ್ಕಾರದ ನಿಯಮಾನುಸಾರವಾಗಿ, ರೈತರ ಕೃಷಿ ಜಮೀನಿನ ಪಂಪ್ ಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಬೇಕು, ಸುತ್ತಮುತ್ತ ಗ್ರಾಮದ ಒಂದು ಭಾಗದ ಕಡೆ ಬೆಳಿಗ್ಗೆ ಒಂದು ಭಾಗದ ಕಡೆ ರಾತ್ರಿ ನಿಯಮಾನಸಾರವಾಗಿ ವಿದ್ಯುತ್ ಪೂರೈಸಬೇಕು.
ರೈತರ ಜಮೀನುಗಳಿಗೆ ಮಧ್ಯರಾತ್ರಿ ವಿದ್ಯುತ್ ನೀಡುವುದರಿಂದ ಮೈ ಕೊರೆಯುವ ಚಳಿಯಲ್ಲಿ ಜಮೀನುಗಳಿಗೆ, ತೆರಳಿ ಬೆಳೆಗಳಿಗೆ ನೀರು ಹಾಯಿಸಲು ಕಷ್ಟವಾಗುತ್ತದೆ ಎಂದು ರೈತರ ಮನವಿ ಮಾಡಿದ್ದರು, ಹೀಗಾಗಿ ರೈತರಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂಗೆ ಸಚಿವರು ಸೂಚನೆಯನ್ನು ನೀಡಿದ್ದಾರೆ.
PM Kisan Beneficiary List 2025: Check 19th Installment ₹6000 New List