Gruhalakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ! ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ

Gruhalakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ! ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ

Gruhalakshmi Scheme: ರಾಜ್ಯದ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಪ್ರತಿ ತಿಂಗಳು ರೂ.2000 ನೀಡುವ ಮೂಲಕ ತಮ್ಮ ಆರ್ಥಿಕತೆ ಜೀವನವನ್ನು ಹೋಗಲಾಡಿಸಲು ಬಹಳಷ್ಟು ಉಪಯೋಗವಾಗಿದೆ, ಇದೀಗ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಹೊಸ ಸ್ಪಷ್ಟನೆ ನೀಡಿದ್ದಾರೆ ಇದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿದೆ ಓದಿ.

ಹೌದು, ಅದೇನೆಂದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಮೇಡಂ 2 ತಿಂಗಳ ಗೃಹಲಕ್ಷ್ಮಿ(Gruhalakshmi) ಹಣ ಯಾಕೆ ಬಂದಿಲ್ಲ, ಎಂದಾಗ ಲಕ್ಷ್ಮಿ ಹೆಬ್ಬಾಳ್ಕರ್ ಖಡಕ್ಕಾಗಿ ಉತ್ತರಿಸಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಏನೆಂದು ಉತ್ತರಿಸಿದರು ಹಾಗೂ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಏನೆಂದು ಹೇಳಿದ್ದಾರೆ ಎಂಬ ಮಾಹಿತಿಯು ಕೆಳಗಿನ ವಿವರಣೆಯಲ್ಲಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ:

ಮಾಧ್ಯಮಗಳು ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಯ 2 ತಿಂಗಳ ಹಣ ಯಾಕೆ ಬಂದಿಲ್ಲ ಎಂದು ಪ್ರಶ್ನೆ ಮಾಡಿದಾಗ, ಲಕ್ಷ್ಮಿ ಹೆಬ್ಬಾಳ್ಕರ್ ನಿಮಗೂ ಕೂಡ ಪ್ರತಿ ತಿಂಗಳು ಸರಿಯಾಗಿ ಸಂಬಳ ಬರುತ್ತಾ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆಯನ್ನು ಹಾಕಿದ್ದಾರೆ. ಮಾಧ್ಯಮ ವರದಿಗಾರರು ಹೌದು, ಮೇಡಂ ನಮಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಬರುತ್ತದೆ ಎಂದು ಹೇಳಿಕೆಯನ್ನು ನೀಡಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಹಾಗಿಲ್ಲ, ಸರ್ಕಾರಿ  ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಒಂದೆರಡು ತಿಂಗಳುಗಳ ಸಂಬಳ ನೀಡುವಲ್ಲಿ ವಿಳಂಬವಾಗುತ್ತದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಒಂದು ತಿಂಗಳಿನ ಹಣ ಸ್ವಲ್ಪ ತಡವಾದರೂ ಕೂಡ ನಮಗೆ 500 ರವರೆಗೆ ಫೋನ್ ಕಾಲ್ಗಳು ಬರುತ್ತದೆ, ಅವುಗಳನ್ನು ಸಮಾಧಾನ ಪಡಿಸುವುದರಲ್ಲಿ ನಮ್ಮ ಸಮಯವೇ ವ್ಯರ್ಥವಾಗುತ್ತದೆ. ಹಾಗೆಯೇ, ವಿರೋಧ ಪಕ್ಷದ ನಾಯಕರು ಕೂಡ ಈ ತಿಂಗಳ ಹಣ ಬಂದಿಲ್ಲವೆಂದರೆ ಮುಂದಿನ ತಿಂಗಳು ಕೂಡ ಹಣ ಬರುವುದಿಲ್ಲ ಎಂದು ಪ್ರಚಾರ ಮಾಡುತ್ತಾರೆ, ಯಾರು ಈ ಮಾತುಗಳಿಗೆ ಕಿವಿ ಕೊಡಬೇಡಿ, ಯಾಕೆಂದರೆ ಹಣ ಹಾಕಲು ಸ್ವಲ್ಪ ತಾಂತ್ರಿಕ ಸಮಸ್ಯೆ(Technical Issue) ಆಗಿರುವುದರಿಂದ ಇನ್ನೂ ಕೆಲವೇ ದಿನಗಳಲ್ಲಿ ಎಲ್ಲ ತಿಂಗಳ ಹಣ ಬಂದು ಖಾತೆಗೆ ಜಮಾ(DBT) ಮಾಡುತ್ತಿವೆ ಎಂದು ತಿಳಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದೊಂದಿಗೆ ಈ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇನ್ನು ಸಾಕಷ್ಟು ಧೈರ್ಯವನ್ನು ತುಂಬಾ ಮೂಲಕ ಹೇಳಿಕೆಯನ್ನು ನೀಡಿದ್ದಾರೆ.

 

WhatsApp Group Join Now
Telegram Group Join Now

Leave a Comment

copy
share with your friends.