Pension: ಸರ್ಕಾರದ ಹೊಸ ಯೋಜನೆ! ತಿಂಗಳಿಗೆ ರೂ.5000
ಕೇಂದ್ರ ಸರ್ಕಾರವು ಜನರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅದರಲ್ಲಿ ಒಂದಾದ ಅಟಲ್ ಪಿಂಚಣಿ ಯೋಜನೆಯು(Atal Pension Scheme) ಬಹು ಮುಖ್ಯವಾಗಿದೆ. ಈ ಯೋಜನೆಯನ್ನು ಸಾಮಾನ್ಯ ಜನರು ಕೂಡ ವೃದ್ಧಾಪ್ಯದ ಸಮಯದಲ್ಲಿ ಪಿಂಚಣಿ ಪಡೆಯಬೇಕು ಎಂದು ಆರಂಭಿಸಲಾಗಿದೆ.
ಅಟಲ್ ಪಿಂಚಣಿ ಯೋಜನೆಯ ಮೂಲಕ 60 ನೇ ವಯಸ್ಸಿನ ನಂತರ ಪ್ರತಿಯೊಬ್ಬ ವ್ಯಕ್ತಿಯು ತಿಂಗಳಿಗೆ ರೂಪಾಯಿ 5,000 ವರೆಗೆ ಖಾತರಿ ಪಿಂಚಣಿ ಪಡೆಯಬಹುದು, ನೀವು ಪಿಂಚಣಿ ಪಡೆಯಬೇಕೆಂದರೆ ಸ್ವಲ್ಪ ಹಣವನ್ನು ಹೂಡಿಕೆ ಮಾಡಬೇಕು. ಈ ಯೋಜನೆಯನ್ನು ಪಡೆಯುವುದು ಹೇಗೆ? ತಿಂಗಳಿಗೆ 5000 ಪಿಂಚಣಿ ಪಡೆಯುವುದು ಹೇಗೆ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ;
ಈ ಯೋಜನೆಯೆಲ್ಲಿ ಹಣವನ್ನು ಗಳಿಸುವುದು ಮಾತ್ರವಲ್ಲದೆ, ಒಂದಿಷ್ಟು ಪ್ರಮಾಣದ ಹಣವನ್ನು ಉಳಿಸುವುದು ಕೂಡ ಈ ಯೋಜನೆಯ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಈಗ ಉಳಿತಾಯ ಮಾಡಿದ ಹಣವು ವೃದ್ಧಾಪ್ಯದ ಸಮಯದಲ್ಲಿ ಸಹಕಾರಿಯಾಗಲಿದೆ. ಅಟಲ್ ಪಿಂಚಣಿ ಯೋಜನೆಯ ಹಣವು ನಿವೃತ್ತಿಯ ಸಮಯದಲ್ಲಿ ಆರ್ಥಿಕವಾಗಿ ಸಹಾಯ ಮಾಡಲಿದೆ.
18 ರಿಂದ 40 ವರ್ಷದ ಒಳಗಿರುವವರು ಈ ಯೋಜನೆಯನ್ನು ಇರಬಹುದು, ಯೋಜನೆಗೆ ಬ್ಯಾಂಕ್(Bank) ಅಥವಾ ಅಂಚೆ ಕಚೇರಿ(Post Office)ಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರು ಅರ್ಹರಾಗಿರುತ್ತಾರೆ. ರಾಷ್ಟ್ರೀಯ ಪಿಂಚಣಿಗೆ(National Pension) ಒಳಪಡುವವರು ಮತ್ತು ತೆರಿಗೆ ಪಾವತಿಸುವವರು ಈ ಯೋಜನೆಗೆ ಅನರ್ಹರಾಗಿರುತ್ತಾರೆ.
ನೀವು ಪ್ರಸ್ತುತ 32 ವರ್ಷ ವಯಸ್ಸಿನವರಾಗಿದ್ದರೆ, ಯೋಜನೆಯನ್ನು ಆರಂಭಿಸಲು ನೀವು ಪ್ರತಿ ತಿಂಗಳು ರೂ.689 ಪಾವತಿಸಿದರೆ, ನಿವೃತ್ತಿಯ ನಂತರ ನಿಮಗೆ ಮಾಸಿಕವಾಗಿ ರೂ.5000 ಸಿಗಲಿದೆ. ನೀವೇನಾದರೂ 18 ವರ್ಷ ವಯಸ್ಸಿನವರಾಗಿದ್ದರೆ ದಿನಕ್ಕೆ 7 ರುಪಾಯಿಯಂತೆ, ತಿಂಗಳಿಗೆ ರೂ.210 ಪಾವತಿಸಿದರೆ 5000 ಪಿಂಚಣಿ ಪಡೆಯಬಹುದು.
ಅಟಲ್ ಪಿಂಚಣಿ ಯೋಜನೆಯನ್ನು, 2015-16ರ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದ ಪಿಂಚಣಿ ಯೋಜನೆಯ ಸಮಯದಲ್ಲಿ ಆದಾಯ ಭದ್ರತೆಗಾಗಿ ಕೇಂದ್ರ ಸರ್ಕಾರವು ಆರಂಭಿಸಿರುವ ಯೋಜನೆಯಾಗಿದೆ. ಜನರು ತಮ್ಮ ನಿವೃತ್ತಿಗಾಗಿ ಆರಂಭಿಸಿರುವ ಯೋಜನೆಯಾಗಿದೆ. ಅಸಂಗಡಿದ ವಲಯದ ಕಾರ್ಮಿಕರನ್ನು ತಮ್ಮ ನಿವೃತ್ತಿಗಾಗಿ ಹಣವನ್ನು ಉಳಿಸಲು ಪ್ರೋತ್ಸಾಹಿಸಲಾದ ಮುಖ್ಯ ಯೋಜನೆಯಾಗಿದೆ.
ಅಟಲ್ ಪಿಂಚಣಿ ಯೋಜನೆಯಡಿ ಚಂದದಾರರು ಮಾಸಿಕವಾಗಿ ರೂ.1000, ರೂ.5000 ಪಿಂಚಣಿ ಪಡೆಯಬಹುದಾಗಿದೆ. ಚಂದಾದಾರರಿಗೆ ಕನಿಷ್ಠ ಪಿಂಚಣಿ ಪ್ರಯೋಜನವನ್ನು ಕೇಂದ್ರ ಸರ್ಕಾರವು ಖಾತರಿಪಡಿಸುತ್ತದೆ.
ನೀವೇನಾದರೂ 40ನೇ ವಯಸ್ಸಿನಲ್ಲಿ ಹೂಡಿಕೆಯನ್ನು ಆರಂಭಿಸಲು ಶುರುಮಾಡಿದರೆ, ತಿಂಗಳಿಗೆ ರೂ.1454 ಹೂಡಿಕೆ ಮಾಡುವ ಮೂಲಕ, ನಿವೃತ್ತಿಯ ನಂತರ ಪಿಂಚಣಿ ಪಡೆಯಬಹುದು. ಕೇಂದ್ರ ಸರ್ಕಾರದ ಈ ಯೋಜನೆ ಅಡಿ 7.15 ಕೋಟಿ ಚಂದಾದಾರರು ಹೂಡಿಕೆಯನ್ನು ಆರಂಭಿಸಿದ್ದಾರೆ