High Intrest: ಮೋದಿ ಸರ್ಕಾರದ ಹೊಸ ಯೋಜನೆ! ಮಹಿಳೆಯರಿಗೆ ಸಿಗಲಿದೆ ರೂ.32,000
ಕೇಂದ್ರ ಸರ್ಕಾರವು ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅವುಗಳಲ್ಲಿ ಒಂದಾದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ(MSSC).
ದೇಶದ ಮಹಿಳೆಯರನ್ನು ಹೂಡಿಕೆಯತ್ತ ಆಕರ್ಷಣೆ ಮಾಡಲು ಕೇಂದ್ರ ಸರ್ಕಾರವು ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯ ವಿಶೇಷವಾಗಿ ಮಹಿಳೆಯರಿಗಾಗಿ ಆರಂಭಿಸಲಾಗಿದೆ.
ಈ ಯೋಜನೆಯ ಮೂಲ ಉದ್ದೇಶವೇನೆಂದರೆ ಮಹಿಳೆಯರು ಹೂಡಿಕೆ(Investment) ಮಾಡಿದ ಮೇಲೆ ಆಕರ್ಷಕ ಆದಾಯವನ್ನು ಒದಗಿಸುವುದಾಗಿದೆ, 2023 ರ ಕೇಂದ್ರ ಬಜೆಟ್(Budget) ಮಂಡನೆಯಲ್ಲಿ, ಕೇಂದ್ರ ಸರ್ಕಾರವು ಘೋಷಿಸಿದ ಯೋಜನೆಯು ಮಹಿಳೆಯರಿಗೆ ಬೆಂಬಲವಾಗಲಿದೆ.
ಈ ಯೋಜನೆಯಲ್ಲಿ ಮಹಿಳೆಯರು ಅಥವಾ ಬಾಲಕಿಯರ ಹೆಸರಿನಲ್ಲಿ ಎರಡು ವರ್ಷಗಳ ಅವಧಿಯೇ ರೂ.2 ಲಕ್ಷ ಹೂಡಿಕೆ ಮಾಡಬಹುದು, ಈ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿ(High Intrest) ನೀಡಲಾಗುತ್ತದೆ. ಈ ಹೊಸ ಯೋಜನೆಯು ಅಂಚೆ ಕಚೇರಿ (Post Office) ಮತ್ತು ಅನೇಕ ಬ್ಯಾಂಕುಗಳಲ್ಲಿ (Banks) ಲಭ್ಯವಿದೆ. 2023 ರಲ್ಲಿ ಆರಂಭಗೊಂಡ ಈ ಯೋಜನೆ 2 ವರ್ಷಗಳು ಅಂದರೆ, 2025 ಮಾರ್ಚ್ ರ ವರೆಗೆ ಲಭ್ಯವಿರುತ್ತದೆ.
ದೇಶದ ಮಹಿಳಾ ಹುಡುಕೆದಾರರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಯೋಜನೆಯನ್ನು ಜಾರಿಗೆ ತಂದಿದೆ, ಹೂಡಿಕೆದಾರರಿಗೆ ವರ್ಷಕ್ಕೆ 7.5% ಬಡ್ಡಿ ನೀಡಲಾಗುತ್ತದೆ, ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಲೆಕ್ಕ ಹಾಕಿದ ಬಡ್ಡಿಯನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ, ಯಾವುದೇ ಮಹಿಳೆ ಈ ಯೋಜನೆಗೆ ಸೇರಲು ಅವಕಾಶವನ್ನು ಕಲ್ಪಿಸಲಾಗಿದೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ(MSSC) ಪತ್ರ ಖಾತೆಯನ್ನು ಹೊಂದಿರುವ ಮಹಿಳೆಯರು ತಿಂಗಳಿಗೆ ಕನಿಷ್ಠ ರೂ.1000 ದಿಂದ ರೂ.2 ಲಕ್ಷದವರೆಗೆ ಹೂಡಿಕೆ ಮಾಡಬಹುದು, ಆದರೆ ಇದರ ಅವಧಿಯ ಮಿತಿಯು ಕೇವಲ ಎರಡು ವರ್ಷ ಎಂದು ಕೇಂದ್ರ ಸರ್ಕಾರವು ಬಹಿರಂಗಪಡಿಸಿದೆ.