Home Loan: ಮನೆ ಸಾಲಕ್ಕೆ ಬಡ್ಡಿಯೊಂದಿಗೆ, ಅಸಲು ಕೂಡ ವಾಪಸ್! ಇಲ್ಲಿದೆ ಬೆಸ್ಟ್ ಪ್ಲಾನ್

Home Loan: ಮನೆ ಸಾಲಕ್ಕೆ ಬಡ್ಡಿಯೊಂದಿಗೆ, ಅಸಲು ಕೂಡ ವಾಪಸ್! ಇಲ್ಲಿದೆ ಬೆಸ್ಟ್ ಪ್ಲಾನ್

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಸ್ವಂತ ಸೂರು ನಿರ್ಮಾಣ ಮಾಡಬೇಕು ಎಂದರೆ, ಸಾಕಷ್ಟು ಹಣ ವೆಚ್ಚವಾಗುತ್ತದೆ. ಇದೀಗ ಎಲ್ಲರಿಗೂ ಸಿಹಿ ಸುದ್ದಿ, ನಮಗೆ ಸುಲಭವಾಗಿ ಗೃಹ ಸಾಲ ದೊರೆಯುತ್ತದೆ. ನೀವು ಯಾವುದೇ ಬ್ಯಾಂಕಿನಲ್ಲಾದರೂ ಸಹ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು, ನಿಮಗೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ತರಹದ ಬಡ್ಡಿ ದರದಲ್ಲಿ ಗೃಹ ಸಾಲ(Home Loan)ವನ್ನು ನೀಡಲಾಗುತ್ತದೆ.

ಯೋಚನೆ ಮಾಡಿ ಗೃಹ ಸಾಲ ತೆಗೆದುಕೊಳ್ಳಿ!

ನೀವು ಗೃಹ ಸಾಲವನ್ನು ಸುಲಭವಾಗಿ ತೆಗೆದುಕೊಳ್ಳಬಹುದು, ಆದರೆ ಎಲ್ಲರಿಗೂ ಸಹ ಅಸಲು ಮತ್ತು ಬಡ್ಡಿಯನ್ನು ಹೇಗೆ ಹಿಂತಿರುಗಿಸಬೇಕು ಎಂಬ ಯೋಚನೆ ಇದ್ದೇ ಇರುತ್ತದೆ, ಎಷ್ಟೋ ಬಾರಿ ಹೆಚ್ಚಿನ ಬಡ್ಡಿಯಿಂದಾಗಿ ನಾವು ತೆಗೆದುಕೊಂಡ ಸಾಲಕ್ಕಿಂತ ಹೆಚ್ಚಿಗೆ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ನೀವೇನಾದರೂ ಸ್ವಲ್ಪ ಜಾಣ್ಮೆಯಿಂದ ಯೋಚನೆ ಮಾಡಿದರೆ ಸುಲಭವಾಗಿ ಅಸಲು ಮತ್ತು ಬಡ್ಡಿಯನ್ನು ಹಿಂತಿರುಗಿಸಬಹುದು.

ಗೃಹ ಸಾಲಕ್ಕೆ ಇರುವ ಬಡ್ಡಿದರವೆಷ್ಟು?

ಉದಾಹರಣೆಗೆ ಲೆಕ್ಕ ಹಾಕುವುದಾದರೆ, ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 30 ಲಕ್ಷ ಗೃಹ ಸಾಲವನ್ನು ತೆಗೆದುಕೊಂಡರೆ, ಅದಕ್ಕೆ 9.55% ಬಡ್ಡಿದರದ ಆಧಾರದ ಮೇಲೆ ನೀವು 25 ವರ್ಷಗಳಲ್ಲಿ ರೂ.78,94,574 ಮರುಪಾವತಿ ಮಾಡಬೇಕಾಗುತ್ತದೆ. ಅಂದರೆ ಇಲ್ಲಿ ನೀವು ಮರುಪಾವತಿ ಮಾಡಬೇಕಾದ ಬಡ್ಡಿಯ ಪ್ರಮಾಣ ರೂ.48,94,574.

ಸಾಲ ಮರುಪಾವತಿ ಮಾಡಲು ಹೂಡಿಕೆ!

ನೀವು ಪ್ರತಿ ತಿಂಗಳು EMI ಕಟ್ಟಿ ಸಾಲವನ್ನು ಹಿಂತಿರುಗಿಸಬೇಕಾಗುತ್ತದೆ, ನಿಮ್ಮ EMI ನ 25% ರಷ್ಟು ಅಂದರೆ ರೂ.7,015 ಅನ್ನು ಎಸ್ ಐ ಪಿ (SIP) ಯಲ್ಲಿ ಹೂಡಿಕೆ ಮಾಡುತ್ತಾ ಬಂದರೆ, ಗೃಹ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ಉಳಿಸಬಹುದು. ಉದಾಹರಣೆಗಳ ಮೂಲಕ ನೋಡುವುದಾದರೆ, ಪ್ರತಿ ತಿಂಗಳು 30 ಲಕ್ಷ ರೂಪಾಯಿಗಳ ಸಾಲಕ್ಕೆ, ರೂ.26,315 EMI ಪಾವತಿಸುತ್ತೀರಿ ಎಂದು ಭಾವಿಸಿ, ಅಲ್ಲಿಗೆ 25 ವರ್ಷಗಳಲ್ಲಿ 78,94,574 ರೂಪಾಯಿಗಳನ್ನು ಹಿಂತಿರುಗಿಸುವಿರಿ.

ಈಗ ನೀವೇನಾದರೂ, EMI ಮೊತ್ತಗಳಿಂದ 25%  ಅಂದರೆ, ರೂ.6,578.75 ರಷ್ಟು SIP ಹುಡುಕಿನ್ನು ಆರಂಭ ಮಾಡಿ, 12% ಬಡ್ಡಿ ದರದಲ್ಲಿ 25 ವರ್ಷಗಳ ಅವಧಿಗೆ ಸಿಗುವ ಮೊತ್ತ ರೂ.1,36,51,399. ಅಂದರೆ ಇಲ್ಲಿ ನೀವು ಗೃಹ ಸಾಲಕ್ಕಿಂತ ಹೆಚ್ಚಿನ ಹಣವನ್ನು ಉಳಿಸುವಿರಿ. ಈ ವಿಷಯದಲ್ಲಿ ಗಮನಿಸಬೇಕಾಗಿರುವ ಮುಖ್ಯ ಅಂಶವೇನೆಂದರೆ, ನೀವು ಗ್ರಹ ಸಾಲವನ್ನು ಯಾವಾಗ ತೆಗೆದುಕೊಳ್ಳುತ್ತಿರೋ, ಅಂದಿನಿಂದಲೇ SIP ಹುಡುಗಿಯನ್ನು ಆರಂಭಿಸಬೇಕು, ನೀವು SIP ಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು ತಜ್ಞರಿಂದ ಸಲಹೆಗಳನ್ನು ಪಡೆದುಕೊಳ್ಳುವುದು ಸೂಕ್ತ. ಧನ್ಯವಾದಗಳು….

WhatsApp Group Join Now
Telegram Group Join Now

Leave a Comment

copy
share with your friends.