Govt Scheme: 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಸಿಹಿ ಸುದ್ದಿ! ಸಿಗುವ ಸೌಲಭ್ಯಗಳು ಏನು?ಹೊಂದಿರುವವರ
ರಾಜ್ಯದ ರೈತರಿಗೆ ಸಿಹಿ ಸುದ್ದಿ, ಅದೇನೆಂದರೆ, ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಏನೆಲ್ಲಾ ಸೌಲಭ್ಯಗಳನ್ನು ನೀಡಲು ಕೇಂದ್ರ ಸರ್ಕಾರ ಮತ್ತು ಆಂಧ್ರಪ್ರದೇಶ ಸರ್ಕಾರವು ಘೋಷಣೆ ಮಾಡಿದೆ. ಈ ಯೋಜನೆಯು ರೈತರಿಗೆ ಆಸರೆ ನೀಡುವಂತಹ ಯೋಜನೆ (Govt Scheme) ಯಾಗಲಿದೆ.
ಈ ಯೋಜನೆಯ ಹೆಸರೆನೆಂದರೆ, ಉದ್ಯೋಗ ಖಾತ್ರಿ ಯೋಜನೆಯಾಗಿದೆ. ಈ ಯೋಜನೆಯಡಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ 15 ತಳಿಗಳ ಬೆಳೆಗಳ ಸಚಿಗಳನ್ನು ಉಚಿತವಾಗಿ ನೀಡಲು ಸರ್ಕಾರವು ಮುಂದಾಗಿದೆ. ಅಂದರೆ ಸಣ್ಣ ರೈತರು ಈ ಯೋಜನೆಯಡಿ ಗಿಡಗಳನ್ನು ತೆಗೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆಸಿ, ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಮಾಧ್ಯಮದ ವರದಿಯಲ್ಲಿ ಯೋಜನೆಯ ಮಾಹಿತಿಯನ್ನು ನೀಡಲಾಗಿದೆ.
NREGS ಸಹಾಯಕ ಯೋಜನಾಧಿಕಾರಿಯಾಗಿ ಗೋರಿ ಬಾಯ್ ಅವರು ಈ ಉಚಿತ ಯೋಜನೆಯಡಿಯಲ್ಲಿ ಆಸಕ್ತಿ ಹೊಂದಿರುವ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಆಸಕ್ತಿ ಹೊಂದಿರುವ ರೈತರು ತಮ್ಮ ಹತ್ತಿರದ NREGA ಕಚೇರಿಗೆ ಭೇಟಿ ನೀಡಬೇಕಾಗುತ್ತದೆ, ಜೊತೆಗೆ ಕೆಲವು ದಾಖಲೆಗಳನ್ನು ಕೊಂಡೊಯ್ಯಬೇಕಾಗುತ್ತದೆ.
ಅಗತ್ಯವಿರುವ ದಾಖಲೆಗಳು;
- ಫೀಲ್ಡ್ ಪೇಪರ್
- ಜಾಬ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಸೈಜ್ ಫೋಟೋ
- ಭರ್ತಿ ಮಾಡಿದ ಅರ್ಜಿ ನಮೂನೆ
ಅಗತ್ಯವಿರುವ ದಾಖಲೆ ಕಚೇರಿಗೆ ಸಲ್ಲಿಸಬೇಕು, ಸರ್ಕಾರಿ ಅಧಿಕಾರಿಗಳು ರೈತರು ಸಲ್ಲಿಸಿರುವ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಬಹುದು.