SSLC RESULT: ಇಷ್ಟು ಅಂಕ ಪಡೆದರೆ SSLC ಪಾಸ್ ಆಗಬಹುದು! ಹಾಗಾದರೆ ಎಷ್ಟು ಅಂಕ ಪಡೆಯಬೇಕು?
ರಾಜ್ಯದಲ್ಲಿ SSLC ಪರೀಕ್ಷೆಗಳು ಮಾರ್ಚ್ 21 ರಿಂದ ಆರಂಭವಾಗಿ ಏಪ್ರಿಲ್ 4 ರವರೆಗೆ ನಡೆದು ಮುಕ್ತಾಯಗೊಂಡಿದೆ, ಕರ್ನಾಟಕದ ಮೌಲ್ಯ ಮಾಪನ ಮಂಡಳಿ ಮತ್ತು ಶಾಲಾ ಪರೀಕ್ಷೆ ನಡೆಸುವ SSLC ಪರೀಕ್ಷೆ 1 ಮುಕ್ತಾಯಗೊಂಡಿದ್ದು, ಎಲ್ಲಾ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಕನ್ನಡದ ಇನ್ನಷ್ಟು ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಕೋವಿಡ್ ಪೂರ್ವದ ದಿನಗಳಲ್ಲಿ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಪುನಃ ಜಾರಿಗೆ ತಂದಿದೆ. ಈ ವರ್ಷ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ಶೇಕಡ 35 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ಮೌಲ್ಯಮಾಪನ ಮಂಡಳಿ ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಕೋವಿಡ್ ಪೂರ್ವದ ದಿನಗಳಲ್ಲಿ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿದೆ.
ಈ ವರ್ಷ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳು 10ನೇ ತರಗತಿಯನ್ನು ಪಾಸಾಗಲು 35 ಗಳನ್ನು ಗಳಿಸುವುದು ಮುಖ್ಯವಾಗಿದೆ. ಈ ವರ್ಷ ಯಾವುದೇ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಸ್ಪಷ್ಟವಾಗಿ ಮಾಹಿತಿಯನ್ನು ಹೊರ ಹಾಕಿದ್ದಾರೆ. ಕಳೆದ ವರ್ಷ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣನೆ ಮಾಡಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಮುಂದಿನ ತರಗತಿಗೆ ಬರ್ತಿ ಪಾಡಿಯಲು ಸಹಾಯವಾಗಲೆಂದು ಮಂಡಳಿಯು ಕನಿಷ್ಠ ಉತ್ತೀರ್ಣ ಅಂಕಗಳನ್ನು 25% ಕ್ಕೆ ಇಳಿಕೆ ಮಾಡಿದ್ದ ಮತ್ತು ಗ್ರೇಸ್ ಮಾರ್ಕ್ಸ್ ಗಳನ್ನು ನೀಡಿತ್ತು. ಆದರೆ ಈ ಬಾರಿ ಯಾವುದೇ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ.
SSLC ಪರೀಕ್ಷೆ ಮಾರ್ಚ್ 21ರಿಂದ ಆರಂಭವಾಗಿ ಏಪ್ರಿಲ್ 4ರ ವರೆಗೆ ನಡೆದು ಕೊನೆಗೊಂಡಿತ್ತು, ರಾಜ್ಯದ್ಯಂತ 15,881 ಪ್ರೌಢಶಾಲೆಗಳಿಂದ 4,34,884 ಬಾಲಕಿಯರು ಮತ್ತು 4,61,563 ಬಾಲಕರು ಸೇರಿದಂತೆ ಒಟ್ಟು 8,96,447 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.8,96,447 ವಿದ್ಯಾರ್ಥಿಗಳು ಕೂಡ ಹಾಜರಾಗಿದ್ದರು. 15,881 ಶಾಲೆಯ ವಿದ್ಯಾರ್ಥಿಗಳು ಒಟ್ಟಾರಿಯಾಗಿ 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು ಎಂದು ಮಾಹಿತಿ ನೀಡಿದ್ದಾರೆ.