Jio Recharge Plan: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ರೂ.26ಕ್ಕೆ ಸಿಗಲಿದೆ, 28 ದಿನಗಳ ಡೇಟಾ ಪ್ಲಾನ್;
Jio Recharge Plan: ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಡೇಟಾ ಪ್ಲಾನ್ ಅನ್ನು ಪರಿಚಯ ಮಾಡಿದೆ. ಕೇವಲ ರೂಪಾಯಿ 26ಕ್ಕೆ ಸಿಗುವ ಈ ಪ್ಲಾನ್ 28 ದಿನಗಳ ಕಾಲ ಸಿಂಪಲ್ ಮತ್ತು ಸ್ಮಾರ್ಟ್ ಆಗಿ ಬಳಕೆ ಮಾಡುವವರಿಗೆ ಸೂಕ್ತವಾಗಿದೆ. ಈ ರಿಚಾರ್ಜ್ ಪ್ಯಾಕ್ ಅನ್ನು ಮೈ ಜಿಯೋ ಆಪ್ ಅಥವಾ jio.com ಮೂಲಕ ಖರೀದಿ ಮಾಡಬಹುದು. ಇನ್ನು ಹೆಚ್ಚಿನ ಕನ್ನಡ ಸುದ್ದಿಗಳನ್ನು ಓದಲು ಈ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ
ಜಿಯೋ ರೂ.26 ಕ್ಕೆ ಸಿಗುವ ಈ ಪ್ಲಾನ್ ಮೂಲಕ 2GB ಹೈ ಸ್ಪೀಡ್ ಡೇಟಾ ಸಿಗಲಿದೆ, ಈ ಡೇಟ್ ಆಫ್ ಮುಗಿದ ನಂತರ ಇಂಟರ್ನೆಟ್ ಸ್ಪೀಡ್ 64kbps ಗೆ ಇಳಿಯಲಿದೆ. ಆದ್ದರಿಂದ ಇದು ನಿಜಕ್ಕೂ ಒಂದು ಪೂರಕ ಡೇಟ್ ಆಫ್ ಪ್ಯಾಕ್ ಆಗಿದೆ. ಇದು ಕರೆ ಅಥವಾ ಸಂದೇಶ ಸೌಲಭ್ಯವನ್ನು ಹೊಂದಿಲ್ಲ.
ಜಿಯೋ ಫೋನ್ ಬಳಕೆದಾರರಿಗೆ ಈ ಪ್ಯಾಕ್ ಉಪಯುಕ್ತವಾಗಿದೆ, ತಮ್ಮ ಪ್ರಾಥಮಿಕ ಡೇಟಾ ಮುಗಿದ ಬಳಿಕ ತಾತ್ಕಾಲಿಕವಾಗಿ ಡೇಟ ಅಗತ್ಯ ಇರುವವರಿಗೆ ಇದು ಸೂಕ್ತವಾಗಿದೆ. ವಿಶೇಷವಾಗಿ ಕಡಿಮೆ ವೆಚ್ಚದಲ್ಲಿ ಹೆಚ್ಚಾದ ವ್ಯಾಲಿಡಿಟಿಯನ್ನು ಹುಡುಕುವವರಿಗೆ ಇದು ಒಂದು ಒಳ್ಳೆಯ ಆಯ್ಕೆಯಾಗಲಿದೆ.
ಈ ಕಡೆ ಏರ್ಟೆಲ್ ಮತ್ತು VI ಕೂಡ ರೂ.26 ರ ಡೇಟಾ ಪ್ಲಾನ್ ನೀಡುತ್ತಿದೆ. ಆದರೆ ಅವುಗಳಲ್ಲಿ ಕೇವಲ 1.5GB ಡಾಟಾ ಮಾತ್ರ ಸಿಗಲಿದೆ ಮತ್ತು ಅವುಗಳ ವ್ಯಾಲಿಡಿಟಿ ಕೇವಲ ಒಂದು ದಿನ. ಈ ಅಂಶದಲ್ಲಿ ನೋಡುವುದಾದರೆ ಜಿಯೋ ಪ್ಯಾಕ್ ಸ್ಪಷ್ಟವಾಗಿ ಮುನ್ನಡೆದಿದೆ.
ಈ ರಿಚಾರ್ಜ್ ಪ್ಲಾನ್ ಫುಲ್ ಪ್ಯಾಕ್ ಅಲ್ಲ ಎನ್ನುವುದನ್ನು ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕು. ಅದು ಕೇವಲ ಡೇಟಾ ಪ್ಯಾಕ್. ಆದರೆ ಇದರ ವ್ಯಾಲಿಡಿಟಿ 28 ದಿನ ಎನ್ನುವುದರಿಂದ ಇದು ಹಗ್ಗದ ಬೆಲೆಗೆ ಹೆಚ್ಚು ದಿನಗಳ ಸೇವೆ ನೀಡುವ ಪ್ಯಾಕ್ ಇದಾಗಲಿದೆ.