Gruhalakshmi: ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯ ದಿನಾಂಕ ಯಾವಾಗ?

Gruhalakshmi: ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯ ದಿನಾಂಕ ಯಾವಾಗ?

ಎರಡು ತಿಂಗಳ ಗೃಹಲಕ್ಷ್ಮಿ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗಲೇ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ರೂ. 2000 ಹೆಚ್ಚಿಸಿದ್ದೆವು, ಅದಾದ ನಂತರ ಯಾವುದೇ ಸರ್ಕಾರಗಳು ಹೆಚ್ಚಿಗೆ ಮಾಡಿಲ್ಲ.

WhatsApp Group Join Now
Telegram Group Join Now

31 ಮಾರ್ಚ್ ರ ನಂತರ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎರಡು ತಿಂಗಳ ಗೃಹಲಕ್ಷ್ಮಿ ನಮ್ಮ ರಾಜ್ಯ ಸರ್ಕಾರವು ಅಧಿಕಾರದಲ್ಲಿದ್ದಾಗಲೇ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ರೂ. 2000 ಹೆಚ್ಚಿಸಿದ್ದೆವು, ಅದಾದ ನಂತರ ಯಾವುದೇ ಸರ್ಕಾರವು ಗೌರವದನವನ್ನು ಹೆಚ್ಚಿಗೆ ಮಾಡಿಲ್ಲ, ಈ ಬಜೆಟ್ ನಲ್ಲಿ ಕಾರ್ಯಕರ್ತೆಯರ ಗೌರವದನವನ್ನು ರೂ. 1000, ಸಹಾಯಕಿಯರ ಗೌರವಧನವನ್ನು ರೂ.750 ಹೆಚ್ಚಿಗೆ ಮಾಡಿ ಘೋಷಿಸಿದ್ದೆವು, ಅದನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರು.

ಹನಿಟ್ರಾಪ್ ವಿಚಾರದ ಬಗ್ಗೆ ಮಾತನಾಡಿದ  ಹೆಬ್ಬಾಳ್ಕರ್ ಅವರು, ಸಚಿವರೊಬ್ಬರಿಗೆ ಹನಿ ಟ್ರ್ಯಾಕ್ ಮಾಡಲು ಯತ್ನಿಸಿರುವುದು ದುರಾದೃಷ್ಟಕರ ಸಂಗತಿಯಾಗಿದೆ, ಈ ಬಗ್ಗೆ ರಾಜಣ್ಣನವರು ತಮಗಾದ ಅನುಭವವನ್ನು ಸದನದಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಈಗಾಗಲೇ ಇದರ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಗೃಹ ಸಚಿವರು ಆ ವಿಷಯವನ್ನು ನೋಡಿಕೊಳ್ಳುತ್ತಾರೆ, ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ತಿಳಿಸಿದರು.

ಘರ್ಜಿಸಿರುವ ಹುಲಿಗಳನ್ನು ಈಗ ಗುರಿ ಮಾಡಿ ಹೆದರಿಸಲಾಗುತ್ತಿದೆ, ಎಂಬ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಹೇಳಿಕೆಗೆ ಈ ಬಗ್ಗೆ ಸತೀಶ್ ಅವರನ್ನೇ ಕೇಳಿ ಅಂದರು.

 

 

Leave a Comment

WhatsApp Group Join Now
Telegram Group Join Now