Tea Powder: ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಚಹಾ ಪುಡಿ ಬ್ಯಾನ್
Tea Powder: ರಾಜ್ಯ ಸರ್ಕಾರದಿಂದ ಚಹಾ ಪ್ರಿಯರಿಗೆ ಶಾಕಿಂಗ್ ಸುದ್ದಿಯು ದೊರೆತಿದೆ. ಹೌದು ಅದೇನೆಂದರೆ, ಈಗಾಗಲೇ ಕಬಾಬ್, ಗೋಬಿ ಮಂಚೂರಿಗೆ ಬಳಸುವಂತಹ ಕೃತಕ ಬಣ್ಣವನ್ನು ನಿಷೇಧ ಮಾಡಲಾಗಿತ್ತು, ಈಗ ಟೀ ಪುಡಿಯಲ್ಲಿಯೂ ಕೃತಕ ಬಣ್ಣ, ರುಚಿ ಹೆಚ್ಚಿಸುವಂತಹ ರಾಸಾಯನಿಕದ ಬಳಕೆ ಹಿನ್ನೆಲೆಯಲ್ಲಿ ಚಹಾ ಪುಡಿಯನ್ನು ಬ್ಯಾನ್ ಮಾಡಲು ರಾಜ್ಯ ಸರ್ಕಾರವು ಮುಂದಾಗಿದೆ ಎಂದು ತಿಳಿದುಬಂದಿದೆ.
ಚಹಾ ಪುಡಿಯಲ್ಲಿ ಕೃತಕ ಬಣ್ಣ, ರುಚಿ ಹೆಚ್ಚಿಸುವಂತಹ ರಾಸಾಯನಿಕ ಇರುವ ಪ್ರಯೋಗಿಕ ಪರೀಕ್ಷೆಯಲ್ಲಿ ದಡಪಟ್ಟಿದೆ, ಇದೇ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಚಹಾ ಪುಡಿಯನ್ನು ಬ್ಯಾನ್ ಮಾಡಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ರಾಜ್ಯದ ಆಹಾರ ಸುರಕ್ಷಣೆ ಮತ್ತು ಗುಣಮಟ್ಟದ ಇಲಾಖೆಯಿಂದ ತೀರ್ಮಾನ ಮಾಡಲಾಗಿದ್ದು, ಶೀಘ್ರವೇ ಚಹಾ ಪುಡಿಯನ್ನು ಬ್ಯಾನ್ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಬರುವ ಸಾಧ್ಯತೆ ಹೆಚ್ಚಿದೆ.
ಚಹಾ ಪುಡಿಯಲ್ಲಿ ರಾಸಾಯನಿಕ ಹಾಗೂ ಕೃತಕ ಬಣ್ಣ ಬೆರೆಸುವುದರಿಂದ, ಜನರ ಮೇಲೆ ತೀವ್ರ ಪ್ರಭಾವ ಬೀರಲಿದೆ ಹಾಗೂ ಅವರ ಆರೋಗ್ಯದಲ್ಲಿ ಏರುಪೇರು ಆಗಲಿದೆ ಎನ್ನುವ ಕಾರಣದಿಂದಾಗಿ ರಾಜ್ಯ ಸರ್ಕಾರವು ಈ ರೀತಿಯ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಹೇಳಲಾಗಿದೆ.